ಅಕ್ರಮ ಕಲ್ಲು ಕೋರೆಗೆ ಗ್ರಾಮಸ್ಥರ ವಿರೋಧ
Team Udayavani, Dec 16, 2017, 2:50 PM IST
ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ನಿನ್ಯಾರುವಿನಲ್ಲಿ ಅಕ್ರಮವಾಗಿ ಕಲ್ಲಿನ ಕೋರೆ ಮಾಡಿ ರುವ ಬಗ್ಗೆ ಸ್ಥಳಿಯ ಗ್ರಾಮಸ್ಥರು ಪಿಲಾತ ಬೆಟ್ಟು ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು. ಪುಂಜಾಲಕಟ್ಟೆ ನಂದ ಗೋಕುಲ ಸಭಾಂಗಣದಲ್ಲಿ ಜರಗಿದ ಬಂಟ್ವಾಳ ತಾ| ಪಿಲಾತಬೆಟ್ಟು ಗ್ರಾ.ಪಂ.ನ 2017-18ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ಸ್ಥಳೀಯರು ಅಕ್ರಮ ಕಲ್ಲಿನ ಕೋರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಲ್ಲಿನ ಕೋರೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ನಂದನ್ ಶೆಣೈ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ. ಸದಸ್ಯ ರಮೇಶ್ ಪೂಜಾರಿ, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀನಾರಾಯಣ ಹೆಗ್ಡೆ, ಯೋಗೇಂದ್ರ, ಸರೋಜಾ ಡಿ. ಶೆಟ್ಟಿ, ಸೀತಾ, ವಸಂತಿ, ಸುಮಿತ್ರಾ, ರಾಜೇಶ್ ಪೂಜಾರಿ, ಪಶು ವೈದ್ಯಾಧಿಕಾರಿ ರಾಜವರ್ಮ ಜೈನ್ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ಸಿಬಂದಿ ಶೀನಾ ಜಮಾ- ಖರ್ಚು ಮಂಡಿಸಿದರು. ಆನಂದ ವಂದಿಸಿದರು.
ಪಂಚಾಯತ್ನಿಂದ ಪರವಾನಿಗೆ ನೀಡಿಲ್ಲ
ಕಲ್ಲಿನ ಕೋರೆ ಬಗ್ಗೆ ಗ್ರಾಮ ಪಂಚಾಯತ್ ನಿಂದ ಈಗಾಗಲೇ ಕೆಲಸವನ್ನು ನಿಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ಈ ಕೋರೆ ನಿರ್ಮಾಣಕ್ಕೆ ಪಂಚಾಯತ್ ವತಿಯಿಂದ ಯಾವುದೇ ಪರವಾನಿಗೆ ನೀಡಿಲ್ಲ.
–ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.