ಸಂಘಟನೆಗಳಿಂದ ಜ್ಞಾನಾಭಿವೃದ್ಧಿ ಕಾರ್ಯ ನಡೆಯಲಿ: ಉಳೆಪಾಡಿ
Team Udayavani, Mar 13, 2017, 5:04 PM IST
– ” ಅಲ್ಲಲ್ಲಿ ಗ್ರಂಥಾಲಯಗಳ ಸ್ಥಾಪನೆ ಅಗತ್ಯ’
- ಬೃಹತ್ ಸ್ವತ್ಛತಾ ಅಭಿಯಾನಕ್ಕೆ ಚಾಲನೆ
– ದಿನೇಶ್ ಹೆಗ್ಡೆ, ಹರೇಕಳ ಹಾಜಬ್ಬಗೆ ಸಮ್ಮಾನ
ಕೆ. ಸಿ. ರೋಡ್ : ಪುಸ್ತಕದಿಂದ ಮಾತ್ರ ಜ್ಞಾನ ವೃದ್ಧಿಸಲು ಸಾಧ್ಯವಿದ್ದು, ಆರಾಧನಾಲಯಗಳ ಬದಲು ಅಲ್ಲಲ್ಲಿ ಗ್ರಂಥಾಲಯಗಳ ಸ್ಥಾಪನೆಯಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಜತೆಗೆ ಸಮಾಜಕ್ಕೆ ಪೂರಕವಾಗಿರುವ ವಾತಾವರಣದಲ್ಲಿ ಬೆಳೆದು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಸಂಘಟನೆಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದ್ದಾರೆ.
ಅವರು ರವಿವಾರ ಜರಗಿದ ಯುನೈಟೆಡ್ ಸೋಶಿಯಲ್ ವೆಲ್ಫೆàರ್ ಆರ್ಗನೈಸೇಶನ್‌ನ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಆರ್ಗನೈಸೇಶನ್ ಅನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟಿಸಿದರು. ಬಳಿಕ ಜರಗಿದ ಬೃಹತ್ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಸಿದ್ದಿಕ್ ತಲಪಾಡಿ ಮಾತನಾಡಿ, ರಾಜಕೀಯ ರಹಿತವಾದ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಸಂಘಟನೆ ಶ್ರಮಿಸಲಿದೆ. ಇದರ ಸದಸ್ಯರು ಸೇರಿಕೊಂಡು ಹಿಂದೆ ತಲಪಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಮುಂದೆಯೂ ಜನಪರ ಯೋಜನೆಗಳಿಗಾಗಿ ಶ್ರಮಿಸಲಿರುವ ಸಂಘಟನೆ ಸಾಮಾಜಿಕ ಭಾವನೆಯನ್ನು ಜನರಲ್ಲಿ ಮೂಡಿಸುವ ಕಾರ್ಯದಲ್ಲಿ ಮುಂದಾಗಲಿದೆ ಎಂದರು.
ಸಮ್ಮಾನ
ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಅವರನ್ನು ಸಮ್ಮಾನಿಸ ಲಾಯಿತು. ಆರ್ಗನೈಸೇಶನ್ ಅಧ್ಯಕ್ಷ ಆಸೀಫ್, ಕೆ.ಸಿ.ನಗರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್, ಉದ್ಯಮಿಗಳಾದ ಝೀನತ್ ಅಬ್ದುಲ್ ಖಾದರ್, ಅಶ್ಪಾಕ್, ಅಜ್ಜಿನಡ್ಕ ಜುಮಾ ಮಸೀದಿಯ ಅಹಮ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.