ರೈತರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ; ಶಾಂತಿ ಪ್ರಸಾದ್ ಹೆಗ್ಡೆ
ರೈತರ ಕುಮ್ಕಿ ಭೂಮಿಯನ್ನು ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಶಕ್ಕೆ ತೆಗೆದುಕೊಂಡರು
Team Udayavani, Mar 24, 2023, 1:35 PM IST
ಉಳ್ಳಾಲ: ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ಕುಳಿತ ತತ್ ಕ್ಷಣ ಹಕ್ಕುಪತ್ರವನ್ನು ಸರಕಾರ ನೀಡುತ್ತದೆ. ಆದರೆ ಅನಾದಿಕಾಲದಿಂದ ರೈತರ ಸ್ವಾಧೀನದಲ್ಲಿರುವ ಕುಮ್ಕಿ ಭೂಮಿಯ ಹಕ್ಕನ್ನು 75 ವರ್ಷಗಳಿಂದ ಆಡಳಿತಕ್ಕೆ ಬಂದ ಸರಕಾರಗಳಿಗೆ ಕೊಡಲು ಸಾಧ್ಯವಾಗಿಲ್ಲ. ರೈತರ ಹಕ್ಕಿಗಾಗಿ ನಾವು ಸಂಘಟಿತರಾಗಿ ಹೋರಾಟ ನಡೆಸಿದರೇ ಮಾತ್ರ ನಮ್ಮ ಬೇಡಿಕೆ ಈಡೇರಿಕೆ ಸಾಧ್ಯ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಅಭಿಪ್ರಾಯಪಟ್ಟರು.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ಹಾಗೂ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇರಳಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ನಾಟೆಕಲ್‌ನಲ್ಲಿರುವ ಉಳ್ಳಾಲ ತಾ| ತಹಶೀಲ್ದಾರ್ ಕಚೇರಿವರೆಗೆ ರೈತರ ಹಕ್ಕೊತ್ತಾಯ ಪ್ರತಿಭಟನ ಜಾಥಾದಲ್ಲಿ ಭಾಗವಹಿಸಿ ನಾಟೆಕಲ್‌ನಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ನಡೆದ ಸಭೆಯಲ್ಲಿ ದಿಕ್ಸೂಚಿ ಮಾತನಾಡಿದರು.
ರಾಜ್ಯದಲ್ಲಿ ರೈತರ ಮೇಲೆ ದೌರ್ಜನ್ಯ ಸಾಮಾನ್ಯ ವಾಗಿದ್ದು, ಉಳ್ಳಾಲ ತಾಲೂಕಿನಲ್ಲಿ ದೌರ್ಜನ್ಯದ ಸ್ವರೂಪ ಎಲ್ಲೆ ಮೀರಿದೆ. ರೈತರ ಕುಮ್ಕಿ ಭೂಮಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದ್ದು, ಇದಕ್ಕೆ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಸಾಥ್ ನೀಡುತ್ತಿದ್ದಾರೆ. ಇಂತಹ ದಬ್ಟಾಳಿಯ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ. ದೆಹಲಿಯಲ್ಲಿ ನಕಲಿ ರೈತರಿಗೆ ಸರಕಾರ ಮಂಡಿಯೂರಿದ್ದು, ಮನಸ್ಸು ಮಾಡಿದರೆ ನಾವಯ ಅಸಲಿ ರೈತರು ಒಂದಾದರೆ
ಎಲ್ಲ ಜನಪ್ರತಿನಿದಿಗಳು ನಮ್ಮ ಬಳಿ ಬಂದೇ ಬರಬೇಕು ಎಂದರು.
ಮನವಿ
ಉಳ್ಳಾಲ ತಾಲೂಕಿನಲ್ಲಿ 5 ವರ್ಷಗಳಲ್ಲಿ 100ಕ್ಕೂ ಹೆಚ್ಚು ರೈತರ ಕುಮ್ಕಿ ಹಕ್ಕನ್ನು ವಿರಹಿತಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹಲವು ರೈತರ ಕುಮ್ಕಿ ಹಕ್ಕನ್ನು ಈಗಾಗಲೇ ವಿರಹಿತಗೊಳಿಸಿ ಜಿಲ್ಲಾಧಿಕಾರಿ ರೈತ ವಿರೋಧಿ ಆದೇಶ ಸಹಿತ ರೈತರ ಹಕ್ಕೊತ್ತಾಯ ಮತ್ತು ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಲಾಯಿತು.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ಸಂಘಟನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಹರೀಶ್ ಬಿ. ಮಂಜನಾಡಿ, ರೈತ ಸಂಘದ ಮುಖಂಡರಾದ ಉಮೇಶ್ ಶೆಟ್ಟಿ, ಪ್ರವೀಣ್ ಶಂಕರ ಕೈರಂಗಳ, ವಿನಯ ನಾೖಕ್ ತಲಪಾಡಿ, ನಾರಾಯಣ ಕಿಲ್ಲೆ ತಲಪಾಡಿ, ಲೋಕನಾಥ ಕುತ್ತಾರು, ಲತೀಶ್ ರೈ ಆಂಬ್ಲಿಮೊಗರು, ಸತ್ಯನಾರಾಯಣ ಭಟ್ ನರಿಂಗಾನ, ಮೂಡಬಿದಿರೆ ತಾ| ಕಾರ್ಯದರ್ಶಿ
ಪ್ರವೀಣ್ ಭಂಡಾರಿ, ಮಹಾಬಲ ಹೆಗ್ಡೆ ದಬ್ಬೇಲಿ, ರವಿರಾಜ್ ರೈ ಎಲಿಯಾರು, ಸುಧಾಕರ ಗಟ್ಟಿ ಹರೇಕಳ, ಬಾಬು ಶ್ರೀಶಾಸ್ತ ಕಿನ್ಯ ರಮೇಶ್ ಶೆಟ್ಟಿ ಕೊಣಾಜೆ, ಎಣ. ಕೆ. ಮಹಮ್ಮದ್ ಕಿನ್ಯಾ, ಗಣೇಶ್ ಕಾವಾ ಬೆಳ್ಮ, ಚಂದ್ರಹಾಸ ಬಾಳೆಪುಣಿ, ಚಂದ್ರಶೇಖರ ಪಜೀರು, ಪುರಂದರ ಮಂಜನಾಡಿ, ಲೋಕನಾಥ ಕುತ್ತಾರು, ರಾಮ್‌ಮೋಹನ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಕುತ್ತಾರು, ಶಿವರಾಜ್ ಕಾವಾ, ಜಯಶೀಲ ಶೆಟ್ಟಿ , ಶ್ರೀನಿವಾಸ ಶೆಟ್ಟಿ ಪುಲ್ಲು, ಮಹೇಶ್ ರೈ ಭಂಡಾರಿಪಾದೆ, ಯಶು ಪಕ್ಕಳ, ನಾರಾಯಣ ರೈ ಕಕ್ಕೆಮಜಲು, ಸುರೇಶ್ ಶೆಟ್ಟಿ ಅಂಬ್ಲಿಮೊಗರು ಮತ್ತಿತರರಿದ್ದರು. ರೈತ ಮುಖಂಡ ಸಮೀರಾ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಮರ ಕಟಾವು ಕೂಲಿ ಕಾರ್ಮಿಕರ ಮೇಲೆ ಬಲ ಪ್ರಯೋಗ
ಮುನ್ನೂರು ಗ್ರಾಮದಲ್ಲಿ ರೈತರ ಕುಮ್ಕಿ ಭೂಮಿಯನ್ನು ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಶಕ್ಕೆ ತೆಗೆದುಕೊಂಡರು. ಜಿಲ್ಲಾಡಳಿತ ಕಾನೂನು ಪ್ರಕ್ರಿಯೆ ಮಾಡುವ ಮೊದಲೇ ಲಕ್ಷಾಂತರ ಬೆಲೆಬಾಳುವ ಮರಗಳ ಅಕ್ರಮ ಅವ್ಯವಹಾರ ನಡೆಯಿತು.
ಇದರ ವಿರುದ್ಧ ಕಿಸಾನ್ ಸಂಘ ಹೋರಾಟ ನಡೆಸಿದಾಗ ಜಿಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲು ಬರುವುದಾಗಿ ತಿಳಿಸಿ ಬರಲಿಲ್ಲ. ಅರಣ್ಯ ಇಲಾಖೆ ಮರ ಕಡಿದ ಕೂಲಿ ಕಾರ್ಮಿಕರ ಮೇಲೆ ಎಫ್‌ಐಆರ್ ದಾಖಲಿಸಿದ್ದೇ ವಿನಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ವಿಚಾರವನ್ನು ಲೋಕಾಯುಕ್ತಕ್ಕೆ ದೂರು ನೀಡಿದ್ದು, ರೈತರು ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದ ಶಾಂತಿ ಪ್ರಸಾದ್ ಹೆಗ್ಡೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.