ಆಸ್ಕರ್ ರಾಜಕೀಯ ಶ್ರೇಷ್ಠ ಸಂತ: ಡಾ| ವೀರಪ್ಪ ಮೊಯ್ಲಿ
Team Udayavani, Oct 9, 2021, 4:10 AM IST
ಮಂಗಳೂರು: ನಾಲ್ಕು ದಶಕಗಳ ಕಾಲ ಲೋಕಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿಸಿ, ಕೇಂದ್ರ ಸಚಿವರೂ ಆಗಿ ಸೇವೆ ಸಲ್ಲಿಸಿದ್ದ ಆಸ್ಕರ್ ಫೆರ್ನಾಂಡಿಸ್ ಅವರು ರಾಜಕೀಯ ಶ್ರೇಷ್ಠ ಸಂತ ಎಂದು ಮಾಜಿ ಕೇಂದ್ರ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.
ಸೆ. 13ರಂದು ನಿಧನಹೊಂದಿದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸಲು ಅವರ ಅಭಿಮಾನಿಗಳು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ “ನೆನಪಿನ ಅಂಗಳದಲ್ಲಿ ಆಸ್ಕರ್ ಅಣ್ಣ… ಪ್ರಸ್ತುತಿ’ ಕಾರ್ಯಕ್ರಮದಲ್ಲಿ ಮೊಲಿ ದಿಕ್ಸೂಚಿ ಭಾಷಣ ಮಾಡಿದರು.
ಸಜ್ಜನ ರಾಜಕಾರಣಿಯಾಗಿದ್ದ ಆಸ್ಕರ್ ಅವರು ಶಿಸ್ತು ಮತ್ತು ಪ್ರಾಮಾಣಿಕತೆಯ ಸಾಕಾರ ಮೂರ್ತಿ. ಯಾರನ್ನೂ ನೋಯಿಸಿದವರಲ್ಲ; ಯಾರೊಂದಿಗೂ ಭಿನ್ನಾಭಿಪ್ರಾಯ ಹೊಂದಿರಲಿಲ್ಲ. ಆದರ್ಶವ್ಯಕ್ತಿತ್ವ ದ ಅವರ ಸೇವೆ ನಮಗೆ ಇನ್ನೂ ಬೇಕಿತ್ತು ಎಂದು ಮೊಯ್ಲಿ ಹೇಳಿದರು.
ಕೇಂದ್ರ ಸಚಿವರಾಗಿ ಆಸ್ಕರ್ ಅವರು ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಗೆ ಮಂಜೂರಾತಿ ನೀಡಿದ್ದರು. ಆಗುಂಬೆ ಘಾಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ್ದರು. ಆದರೆ ಅವರು ತಮ್ಮ ಕೆಲಸಗಳನ್ನು ಹೇಳಿಕೊಳ್ಳಲು ಹೋಗಿಲ್ಲ ಎಂದರು.
ಮಾಜಿ ಮುಖ್ಯ ಸಚೇತಕ ಕಾ| ಗಣೇಶ್ ಕಾರ್ಣಿಕ್ ಅವರು “ಸಂಸದೀಯ ಮೌಲ್ಯಗಳು ಮತ್ತು ಆಸ್ಕರ್ ಫೆರ್ನಾಂಡಿಸ್’ ವಿಷಯದ ಬಗ್ಗೆ ಮಾತನಾಡಿ, ಆಸ್ಕರ್ ಅವರು ಯಾವತ್ತೂ ವಿಭಜಿತ ಮಾನಸಿಕತೆಗೆ ಅವಕಾಶ ನೀಡಿರಲಿಲ್ಲ; ಅವರ ಜೀವನ ಮೌಲ್ಯಗಳು ಅನು ಕರಣೀಯ ಎಂದರು.
ಇದನ್ನೂ ಓದಿ:ಪೆರಿಷಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ!
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಆಸ್ಕರ್ ಅವರು ಸಮಾಜಕ್ಕೆ ಅರ್ಥ ಪೂರ್ಣ ಸೇವೆಯನ್ನು ಒದಗಿಸಿದ್ದು, ಅವರ ಸಮಾಜ ಮುಖೀ ಚಿಂತನೆ ಮಾದರಿಯಾಗಿದೆ ಎಂದರು.
ಮಾಜಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಸ್ವಾಗತಿಸಿದರು. ಸದಸ್ಯ ಎಂ.ಜಿ. ಹೆಗಡೆ ವಂದಿಸಿದರು. ಪ್ರೊ| ಮಾಲಿನಿ ಹೆಬ್ಟಾರ್ ಕಾರ್ಯಕ್ರಮ ನಿರ್ವಹಿಸಿದರು.
ಆಸ್ಕರ್ ಅವರ ಪತ್ನಿ ಬ್ಲೋಸಂ ಅವರ ಪರವಾಗಿ ಕುಟುಂಬಸ್ಥರಾದ ವಾಲ್ಟರ್ ಡಿ’ಸೋಜಾ ಅವರಿಗೆ ಹೂವಿನ ಗಿಡ ನೀಡಿ ಗೌರವಿಸಲಾಯಿತು. ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್, ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಬ್ರಾಹಿಂ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.