ಹೊಗೆಮುಕ್ತ ಜಿಲ್ಲೆ ನಮ್ಮ ಗುರಿ: ಸಂಸದ ನಳಿನ್
Team Udayavani, Jul 24, 2017, 7:05 AM IST
ಬಂಟ್ವಾಳ : ದ.ಕ. ಜಿಲ್ಲೆಯಲ್ಲಿ 40,000ಕ್ಕೂ ಅಧಿಕ ಅನಿಲ ಸಂಪರ್ಕರಹಿತ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಮುಂದಿನ 15 ತಿಂಗಳಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಹೊಗೆಮುಕ್ತ ಜಿಲ್ಲೆ ಎಂಬ ಗುರಿ ಹೊಂದಿದೆ.
ರಾಷ್ಟÅದಲ್ಲಿ 10 ಕೋಟಿ ಎಲ್‌ಪಿಜಿ ಸಂಪರ್ಕರಹಿತ ಕುಟುಂಬಗಳಿದ್ದು ಕಳೆದ 15 ತಿಂಗಳಿನಲ್ಲಿ ಒಟ್ಟು 2.56 ಕೋಟಿ ಮನೆಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಮುಂದಿನ 36 ತಿಂಗಳಲ್ಲಿ ಮತ್ತೆ ಐದು ಕೋಟಿ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಸಹಿತ ಸ್ಟೌವ್ ಮತ್ತು ಸುರûಾ ಪೈಪ್ ವಿತರಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹೊಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅವರು ಜು. 23ರಂದು ಬಂಟವಾಳದ ಬಂಟರ ಭವನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಉಚಿತ ಎಲ್‌ಪಿಜಿ ಸಂಪರ್ಕ ಮತ್ತಿತರ ಸವಲತ್ತು ವಿತರಣೆ ಸಮಾವೇಶವನ್ನು ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಜಿಲ್ಲೆಯಲ್ಲಿ ಒಟ್ಟು 46 ಮಂದಿ ವಿತರಕರ ಮೂಲಕ ಒಟ್ಟು 44 ಸಾವಿರ ಮಂದಿ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಬೇಕಾಗಿದ್ದು, ಈ ಪೈಕಿ ಈಗಾಗಲೇ ಒಟ್ಟು 4,200 ಮಂದಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅನಿಲ ವಿತರಕರು ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಪ್ರತೀ ಮನೆ ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಮೂಲಕ “ಹೊಗೆಮುಕ್ತ ಜಿಲೆ’Éಯಾಗಿ ಪರಿವರ್ತನೆಗೊಳಿಸಬೇಕು. ಇದೇ ರೀತಿ “ಹೊಗೆಮುಕ್ತ ಗ್ರಾಮ’ ನಿರ್ಮಾಣಕ್ಕೆ ಶ್ರಮಿಸಿದಾಗ ಆ ಗ್ರಾಮಕ್ಕೆ ಒಂದು ಲ.ರೂ. ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.