ಮಂಕುಡೆ ದ.ಕ. ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ 102 ವರ್ಷ
ಮಂಕುಡೆ ಆಚಾರ್ ಮನೆತನದವರಿಂದ ಸ್ಥಾಪನೆ
Team Udayavani, Nov 10, 2019, 5:00 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1917 ಶಾಲೆ ಆರಂಭ
ಬಡಮಕ್ಕಳ ಶಿಕ್ಷಣಕ್ಕಾಗಿ ದತ್ತಿನಿಧಿ ಸ್ಥಾಪನೆ, ಹಲವು ಸೌಲಭ್ಯ
ವಿಟ್ಲ: ಕೊಳ್ನಾಡು ಗ್ರಾಮದ ಮಂಕುಡೆಯಲ್ಲಿ ತೀರಾ ಬಡತನವಿದ್ದ ಕಾಲದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಲು ಮಂಕುಡೆ ಮನೆತನದವರು ಶಾಲೆಯನ್ನು ಆರಂಭಿಸಿದರು. ಶಾಲೆಯ ದಕ್ಷಿಣದಲ್ಲಿ ಕಳೆಂಜಿಮಲೆ ರಕ್ಷಿತಾರಣ್ಯ, ಉತ್ತರದಲ್ಲಿ ಉಪ್ಪಳ ಹೊಳೆಯಿದೆ. ಕುಡ್ತಮುಗೇರು ಮತ್ತು ಮಂಕುಡೆ ಪರಿಸರದ ಮಧ್ಯೆ ಉಪ್ಪಳ ಹೊಳೆ ಹರಿಯುತ್ತಿದ್ದು, ಮಳೆಗಾಲದಲ್ಲಿ ಹೊಳೆಯಲ್ಲಿ ನೆರೆ ಉಕ್ಕಿ ಹರಿಯುತ್ತಿದ್ದುದರಿಂದ ಕುಡ್ತಮುಗೇರು ಭಾಗದ ಮಕ್ಕಳಿಗೆ ಶಾಲೆಗೆ ತೆರಳಲಾಗುತ್ತಿರಲಿಲ್ಲ. ಅದಕ್ಕಾಗಿ ಕುಡ್ತಮುಗೇರಿನಲ್ಲಿ ಮುಳಿಹುಲ್ಲಿನ ಛಾವಣಿಯ ಶಾಲೆಯಲ್ಲಿ ಪಾಠ ನಡೆಯುತ್ತಿತ್ತು. ಹಳೆಯ ಕಟ್ಟಡ ಬಿದ್ದುಹೋದ ಬಳಿಕ ಮಂಕುಡೆ ಮನೆತನಕ್ಕೆ ಸೇರಿದ ಮನೆಯಲ್ಲಿ ಶಾಲೆ ನಡೆಯುತ್ತಿತ್ತು.
ಹಿರಿಯ ಪ್ರಾಥಮಿಕ ಶಾಲೆ
ಮಂಕುಡೆ ರಾಮಕೃಷ್ಣ ಆಚಾರ್ ಅವರು ಗ್ರಾ.ಪಂ. ಅಧ್ಯಕ್ಷರಾಗಿದ್ದಾಗ ಸರಕಾರದ ಅನುದಾನ ಮತ್ತು ಸ್ವಂತ ಹಣದಿಂದ 1964ರಲ್ಲಿ ಕಟ್ಟಡ ನಿರ್ಮಿಸಿದ್ದರು. ಆಗ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು. 1982ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಕಟ್ಟಡವು 1981-82ರಲ್ಲಿ ವಿಸ್ತರಿಸಲ್ಪಟ್ಟು ಏಳು ತರಗತಿ ಶಾಲೆಯಾಗಿ ಸರಕಾರದಿಂದ ಅನುಮತಿ ಪಡೆದು ಪ್ರಸ್ತುತ 8 ತರಗತಿಗಳನ್ನು ಹೊಂದಿದೆ.
ಭಾರತ ಸೇವಾದಳ, ಯೋಗ
ಎಲ್‌ಕೆಜಿ, ಯುಕೆಜಿ ಸಹಿತ ಶಾಲೆಯಲ್ಲಿ ಈಗ ಒಟ್ಟು 150 ಮಕ್ಕಳಿದ್ದಾರೆ. 6 ಶಿಕ್ಷಕರು, ಮೂವರು ಗೌರವ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಭಾರತ ಸೇವಾದಳ, ಯೋಗ, ನೈತಿಕ ಶಿಕ್ಷಣ, ಬಡಮಕ್ಕಳ ಶಿಕ್ಷಣಕ್ಕಾಗಿ ದತ್ತಿನಿಧಿ ಮತ್ತು ಸರಕಾರದ ಎಲ್ಲ ಸೌಲಭ್ಯಗಳಿವೆ. ಇಲ್ಲಿನ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಎನ್‌ಎಂಎಂಎಸ್ ಪರೀಕ್ಷೆ ಬರೆದು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಕೊಠಡಿ, ಶೌಚಾಲಯ, ಕಂಪ್ಯೂಟರ್ ಕೊಠಡಿ ಇತ್ಯಾದಿ ಮೂಲ ಸೌಲಭ್ಯಗಳಿವೆ.
ಹಿಂದಿನ ಮುಖ್ಯ ಶಿಕ್ಷಕರು
ಕೆ.ಪಿ. ಸೀತಾರಾಮ ಭಟ್, ಪಿ. ವೆಂಕಟ್ರಮಣ ಭಟ್, ಯಮುನಾ, ಕೆ. ಪಕ್ರು ಮೂಲ್ಯ, ಮಾಧವಿ ಎಚ್.ವಿ., ಸಂತೋಷಾ ಕುಮಾರಿ.
ಸರಕಾರ, ಕೊಳ್ನಾಡು ಗ್ರಾ.ಪಂ., ತಾ.ಪಂ., ಜಿ.ಪಂ., ಹಿರಿಯ ವಿದ್ಯಾರ್ಥಿ ಸಂಘ, ಹಳೆ ವಿದ್ಯಾರ್ಥಿ ಯುವಕ ಮಂಡಲ, ಎಸ್‌ಡಿಎಂಸಿ, ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಪ್ರಗತಿಯನ್ನು ಸಾಧಿಸಿದೆ. 2017ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ. ಶತಮಾನೋತ್ಸವ ಕಟ್ಟಡ ನಿರ್ಮಾಣವಾಗಿದೆ. ಈಗ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ.
-ಗಟ್ರೂಡ್ ಡಿ’ಸೋಜಾ, ಮುಖ್ಯ ಶಿಕ್ಷಕರು
1967ರಿಂದ 70ರ ವರೆಗೆ 3ನೇ ತರಗತಿವರೆಗೆ ಇಲ್ಲಿ ವ್ಯಾಸಂಗ ಮಾಡಿದ್ದೆ. ದಿ| ದೂಮಣ್ಣ ಮಾಸ್ತರರ ಶಿಸ್ತುಬದ್ಧ ಪಾಠ, ಶಿಕ್ಷಣ ನನ್ನ ಜೀವನ ಪಾಠಕ್ಕೆ ಭದ್ರ ಬುನಾದಿಯಾಯಿತು. ನಾನು ಈ ಶಾಲೆಯಲ್ಲಿ ಓದುತ್ತಿದ್ದಾಗ ಹಳೆ ವಿದ್ಯಾರ್ಥಿ ಸಂಘವು ಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿತ್ತು. ನನ್ನ ಅಮ್ಮ ದಿ| ದೇವಕಿ ಅಮ್ಮ ಅವರ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸಿ, ಬಡ್ಡಿ ಮೊತ್ತದಲ್ಲಿ ಪ್ರತಿಭಾನ್ವಿತರಿಗೆ ಪುರಸ್ಕರಿಸಲು ನಿರ್ಧರಿಸಿದಾಗ ಕಲಿತ ಶಾಲೆಗೆ ಇಷ್ಟಾದರೂ ನೀಡಿದೆನೆಂಬ ಧನ್ಯತಾ ಮನೋಭಾವ ಲಭಿಸಿದೆ.
-ಬಾಲಕೃಷ್ಣ ಭಟ್, ಡೆಪ್ಯುಟಿ ಮ್ಯಾನೇಜರ್, ಎಸ್‌ಬಿಐ, ಮೈಸೂರು (ಹಿರಿಯ ವಿದ್ಯಾರ್ಥಿ)
- ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.