ಬಿಜೆಪಿಯಿಂದ ‘ಪರಿವರ್ತನೆಗಾಗಿ ನಮ್ಮ ನಡಿಗೆ’: 10ನೇ ದಿನ
Team Udayavani, Jan 24, 2018, 2:47 PM IST
ಬಂಟ್ವಾಳ : ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಪಾದಯಾತ್ರೆಯು 10ನೇ ದಿನ ಜ. 23ರಂದು ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ತೆರಳಿ ಪೂಜೆ ಸಲ್ಲಿಸಿ ವಂದೇ ಮಾತರಂ ಪ್ರಾರ್ಥನೆ ಬಳಿಕ ಅಪಾರ ಕಾರ್ಯ ಕರ್ತರೊಂದಿಗೆ ಹನುಮಾನ್ ನಗರದ ಶ್ರೀರಾಮ ವಿದ್ಯಾಕೇಂದ್ರದ ರಸ್ತೆ ಮೂಲಕ ಬಾಳ್ತಿಲ ಗ್ರಾಮಕ್ಕೆ ಪ್ರವೇಶಿಸಿತು. ರವಿವಾರ ರಾತ್ರಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮನೆಯಲ್ಲಿ ವಾಸ್ತವ್ಯ ಇದ್ದ ಪ್ರಮುಖರು ಬೆಳಗ್ಗೆ ಪಾದಯಾತ್ರೆ ಮುಂದುವರಿಸಿದರು.
ಮಾಜಿ ಜಿ.ಪಂ. ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಟ್ಠಲ ನಾಯ್ಕ, ಬಿಜೆಪಿ ಅಧ್ಯಕ್ಷ ಲೋಕಾನಂದ ಪೂಜಾರಿ ಏಳ್ತಿಮಾರ್, ಬಾಳ್ತಿಲ ಬಿಜೆಪಿ ಕಾರ್ಯಕರ್ತರು ಬಾಳ್ತಿಲದಲ್ಲಿ ಸ್ವಾಗತಿಸಿದರು. ಶಂಭೂರು ಕಕ್ಕೆ ಮಜಲಿನಲ್ಲಿ ಗೋಳ್ತ ಮಜಲು ಶಕ್ತಿಕೇಂದ್ರ ಅಧ್ಯಕ್ಷ ಆನಂದ ಎ. ಶಂಭೂರು, ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಿಜೆಪಿ ಅಧ್ಯಕ್ಷ ಪುರುಷೋತ್ತಮ ಎಸ್. ಮತ್ತು ಕಾರ್ಯಕರ್ತರು ಎದುರ್ಗೊಂಡು ಪಾದಯಾತ್ರೆಯಲ್ಲಿ ಸೇರಿಕೊಂಡರು. ಪಾಣೆಮಂಗಳೂರು ಗ್ರಾಮಕ್ಕೆ ಸಂಪರ್ಕಿಸುವ ದಾರಿ ನಡುವೆ ಮೊಗರ್ನಾಡು ಜಂಕ್ಷನ್‌ನಲ್ಲಿ ಕೇಶವ ಶಾಂತಿ ಅವರು ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರಿಗೆ ಹೂಹಾರ ಹಾಕಿ ಶುಭಕೋರಿದರು.
ಅನಂತರ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಬಳಿಕ ಪಾಣೆಮಂಗಳೂರು ತಲುಪಿ ಕಲ್ಲುರ್ಟಿ ಗುಡಿಯಲ್ಲಿ ಉಮೇಶ್ ಸಪಲ್ಯ ಪ್ರಾರ್ಥಿಸಿದರು.ಸುಮಂಗಲ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ವಿಶ್ರಾಂತಿ ಪಡೆಯಲಾಯಿತು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯೆ ಕೆ. ಕಮಲಾಕ್ಷಿ ಪೂಜಾರಿ, ತಾ.ಪಂ. ಸದಸ್ಯೆ ಲಕ್ಷ್ಮೀಗೋಪಾಲಾಚಾರ್ಯ, ಪುರಸಭಾ ಸದಸ್ಯೆ ಸಂಧ್ಯಾ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಎಸ್.ಸಿ. ಮೊರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯ ರೊನಾಲ್ಡ್ ಡಿ’ಸೋಜಾ, ರೈತ ಮೋರ್ಚಾದ ತನಿಯಪ್ಪ ಗೌಡ, ಪ್ರೇಮನಾಥ ಶೆಟ್ಟಿ ಅಂತರ, ಪುರುಷೋತ್ತಮ ಶೆಟ್ಟಿ ವಾಮದಪದವು, ಅಣ್ಣು ಪೂಜಾರಿ, ಪಿ.ಎಸ್. ಮೋಹನ್, ಎಸ್.ಸಿ. ಮೋರ್ಚಾದ ರಮೇಶ್ ಕುದ್ರೆಬೆಟ್ಟು, ಲೋಕಯ್ಯ, ಯುವಮೋರ್ಚಾದ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿಬೆಟ್ಟು, ನಾರಾಯಣ ಪೂಜಾರಿ ದರ್ಖಾಸು, ಸುರೇಶ್ ಕೋಟ್ಯಾನ್, ಅಶೋಕ್ ಮರ್ದೊಳಿ, ಸಂಪತ್ ಕೋಟ್ಯಾನ್, ಕಾರ್ತಿಕ್ ಬಳ್ಳಾಲ್, ಪಂ.ಉಪಾಧ್ಯಕ್ಷೆ ಪೂರ್ಣಿಮಾ, ಪಂ.ಸದಸ್ಯ ರಾದ ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ಶಿವರಾಜ್, ರಂಜಿತ್ ಕೆದ್ದೆಲ್, ಚಂದ್ರಾವತಿ, ಉದಯ ಶಂಭೂರು, ವಸಂತ ಭೀಮ ಗದ್ದೆ, ಹೇಮಲತಾ, ಗೀತಾ, ವಿಶಾಲಾಕ್ಷಿ, ಜಯ ಶಂಭೂರು, ಲೋಹಿತಾಕ್ಷ ಮರ್ದೋಳಿ, ಪ್ರಕಾಶ್ ಕೋಡಿಮಜಲ್, ಡೊಂಬಯ ಟೈಲರ್, ಆನಂದ ಶೆಟ್ಟಿ, ಸುರೇಶ್ ಶೆಟ್ಟಿ ಕಾಂದಿಲ, ವೆಂಕಟ್ರಾಯ ಪ್ರಭು, ವಸಂತ ಸಾಲ್ಯಾನ್, ಯತಿನ್ ಕುಮಾರ್, ಸುಜಿತ್ ಕೊಟ್ಟಾರಿ, ಜನಾರ್ದನ ಬೊಂಡಾಲ, ಜಯಶಂಕರ ಬಾಶ್ರಿತ್ತಾಯ, ಕೃಷ್ಣಪ್ಪ, ಬಾಲಕೃಷ್ಣ ಆಳ್ವ, ಸುಂದರ ಸಾಲ್ಯಾನ್, ಲೋಲಾಕ್ಷಿ, ಸ್ವಾತಿ, ಜಯಂತಿ ವರದರಾಜ್,ಮಹೇಶ್ ರಾಯಸ, ಉದಯ ಶೆಟ್ಟಿ, ಯತೀಶ್ ಶೆಟ್ಟಿ, ದೇವದಾಸ ನಾಯಿಲ, ರಘು ಸಫಲ್ಯ, ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್, ಕಮಲಾಕ್ಷ ಶಂಭೂರು, ಚಂದ್ರಹಾಸ ಗಟ್ಟಿ, ಗಣೇಶ ರೈ ಮಾಣಿ, ಜ್ಞಾನೇಶ್ವರ ಪ್ರಭು, ದಿನೇಶ್ ಬಂಗೇರ, ಪುರುಷೋತ್ತಮ ನಾಟಿ, ಕಮಲಾಕ್ಷ ಶಾಂತಿಲ, ರಾಜೇಶ ಆಚಾರ್ಯ, ಚಂದ್ರಹಾಸ ಕೋಡಿ, ಕೇಶವ ಪಿ.ಎಚ್. ಪದ್ಮನಾಭ ಮಯ್ಯ ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.