92 ಸರ್ಧಿಗಳಲ್ಲಿ ಮಹಿಳೆಯರು 6 ಮಂದಿ ಮಾತ್ರ!
Team Udayavani, May 3, 2018, 12:39 PM IST
ಮಂಗಳೂರು: ಕರ್ನಾಟಕದ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಸ್ಥಾನಗಳಿಗೆ ಒಟ್ಟು 92 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡದ 8 ಸ್ಥಾನಗಳಿಗೆ 58 ಮಂದಿ; ಉಡುಪಿ ಜಿಲ್ಲೆಯ 5 ಸ್ಥಾನಗಳಿಗೆ 34 ಮಂದಿ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ
ಪಕ್ಷದ ಅಭ್ಯರ್ಥಿಗಳು ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ.
ದ.ಕ.ದ 8 ಸ್ಥಾನಗಳ 58 ಸ್ಪರ್ಧಿಗಳ ಪೈಕಿ ಕಾಂಗ್ರೆಸ್ – ಬಿಜೆಪಿ ತಲಾ 8, ಜೆಡಿಎಸ್ 5, ಸಿಪಿಐಎಂ 4, ಎಂಇಪಿ- ಅ.ಭಾ. ಹಿಂದೂ ಮಹಾ ಸಭಾ – ಲೋಕ್ ಆವಾಜ್ ದಳ, ಪ್ರಜಾಪರಿವರ್ತನಾ ಪಾರ್ಟಿ, ಜನತಾ ಪಕ್ಷ ಹಾಗೂ ಪಕ್ಷೇತರರು ಒಟ್ಟು 33 ಮಂದಿ. 2013ರ ಚುನಾವಣೆ ಯಲ್ಲಿ ಇಲ್ಲಿ ಕಾಂಗ್ರೆಸ್- 7, ಬಿಜೆಪಿ-1 ಕ್ಷೇತ್ರದಲ್ಲಿ ಜಯಿಸಿತ್ತು.
ಉಡುಪಿ ಜಿಲ್ಲೆಯ 5 ಸ್ಥಾನಗಳ 34 ಸ್ಪರ್ಧಿಗಳ ಪೈಕಿ ಕಾಂಗ್ರೆಸ್- ಬಿಜೆಪಿ ತಲಾ 5, ಜೆಡಿಎಸ್ 4, ಸಿಪಿಎಂ 1 ಹಾಗೂ ರಿಪಬ್ಲಿಕನ್ ಪಾರ್ಟಿ, ಶಿವಸೇನೆ, ಎಂಇಪಿ, ಜೆಡಿಯು ಹಾಗೂ ಪಕ್ಷೇತರರು ಒಟ್ಟು 18 ಮಂದಿ. ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್- 3, ಬಿಜೆಪಿ- 1, ಪಕ್ಷೇತರ- 1 ಸ್ಥಾನ ಜಯಿಸಿದ್ದರು.
ಸಂಖ್ಯೆ ಇಳಿಮುಖ
2013ಕ್ಕೆ ಹೋಲಿಸಿದರೆ ಈ ಬಾರಿ ಸ್ಪರ್ಧಿಗಳ ಸಂಖ್ಯೆ ಗಣನೀಯ ಇಳಿಮುಖವಾಗಿದೆ. ಕಳೆದ ಬಾರಿ ಒಟ್ಟು 117 ಮಂದಿ ಸ್ಪರ್ಧೆಯಲ್ಲಿದ್ದರು. ಈ ಪೈಕಿ ದ.ಕನ್ನಡದ 8 ಸ್ಥಾನಗಳಲ್ಲಿ 71 ಮಂದಿ; ಉಡುಪಿಯ 5 ಸ್ಥಾನಗಳಲ್ಲಿ 46 ಮಂದಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಪಿ ಹೊರತಾಗಿ ಇತರ ಪಕ್ಷಗಳು ಹಾಗೂ ಪಕ್ಷೇತರರು ಒಟ್ಟು 65 ಮಂದಿ ಕಣದಲ್ಲಿದ್ದುದರಿಂದ ಸಂಖ್ಯೆ 100 ದಾಟಿತ್ತು.
ಈ ಬಾರಿ ಯಾವ ಕ್ಷೇತ್ರದಲ್ಲಿಯೂ ನೇರ ಸ್ಪರ್ಧೆ ಇಲ್ಲ. ಅತಿ ಕಡಿಮೆ ಎಂದರೆ ತಲಾ 5 ಅಭ್ಯರ್ಥಿಗಳು: ಆ ಕ್ಷೇತ್ರಗಳು-ಮಂಗಳೂರು, ಬಂಟ್ವಾಳ, ಕುಂದಾಪುರ, ಕಾಪು. ಅತೀ ಹೆಚ್ಚು ಎಂದರೆ ತಲಾ 11 ಅಭ್ಯರ್ಥಿಗಳು: ಆ ಕ್ಷೇತ್ರಗಳು- ಪುತ್ತೂರು, ಮಂಗಳೂರು ದಕ್ಷಿಣ. ಉಳಿದಂತೆ: ಬೈಂದೂರು 9, ಉಡುಪಿ 8, ಮಂಗಳೂರು ಉತ್ತರ- ಮೂಡಬಿದಿರೆ- ಕಾರ್ಕಳ ತಲಾ 7, ಬೆಳ್ತಂಗಡಿ- ಸುಳ್ಯ ತಲಾ 6. ಕಳೆದ ಬಾರಿ ಮಂಗಳೂರು ಕ್ಷೇತ್ರದಲ್ಲಿ ಗರಿಷ್ಠ 15 ಅಭ್ಯರ್ಥಿಗಳಿದ್ದರು. ಕನಿಷ್ಠ ತಲಾ 6 ಮಂದಿ ಅಭ್ಯರ್ಥಿಗಳು ಕುಂದಾಪುರ- ಮೂಡಬಿದಿರೆ- ಬಂಟ್ವಾಳ- ಪುತ್ತೂರು ಕ್ಷೇತ್ರದಲ್ಲಿದ್ದರು.
ಹೀಗೆ ಅವಿಭಜಿತ ಜಿಲ್ಲೆಯಲ್ಲಿ ಈ ಬಾರಿಯೂ ಬಹುಕೋನ ಸ್ಪರ್ಧೆ. ಸ್ಥಳೀಯ ಅಥವಾ ಹೊಸ ಪಕ್ಷಗಳ ಅಥವಾ ಪಕ್ಷೇತರರು ಯಾವ ರೀತಿ ಫಲಿತಾಂಶವನ್ನು ಪ್ರಭಾವಿಸುತ್ತಾರೆ ಎಂಬುದು ಕುತೂಹಲದ ಸಂಗತಿ.
ಅಂದಹಾಗೆ
ಅವಿಭಜಿತ ಜಿಲ್ಲೆಯ 2018ರ ಚುನಾವಣ ಕಣದಲ್ಲಿ ಮೂವರು ಸಚಿವರು, ಇಬ್ಬರು ಮಾಜಿ ಸಚಿವರು, ಎಲ್ಲ 13 ಮಂದಿ ಹಾಲಿ ಶಾಸಕರು, ಇಬ್ಬರು ಮಾಜಿ ಶಾಸಕರಿದ್ದಾರೆ. ಓರ್ವ ಮಾಜಿ ಮೇಯರ್, ಓರ್ವ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ, ಇಬ್ಬರು ವೈದ್ಯರು. ಮಹಿಳಾ ಸ್ಪರ್ಧಿಗಳ ಸಂಖ್ಯೆ ಒಟ್ಟು 92 ಸ್ಪರ್ಧಿಗಳ ಪೈಕಿ- 6 (ಓರ್ವರು ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ). ಪತಿ- ಪತ್ನಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಇನ್ನೊಂದು ವಿಶೇಷ!
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.