ನಗರದಲ್ಲಿ ಜರ್ಮನಿಯ 1700ಕ್ಕೂ ಅಧಿಕ ಅಂಚೆ ಚೀಟಿಗಳು!
Team Udayavani, Nov 10, 2017, 11:46 AM IST
ಮಹಾನಗರ: ಅಂಚೆ ಚೀಟಿ ಸಂಗ್ರಹ ಕೆಲವರ ಹವ್ಯಾಸ. ದೇಶದ ಮಹಾಪುರುಷರ ನೆನಪಿನಲ್ಲಿ ಅಥವಾ ಪ್ರಖ್ಯಾತ ಸ್ಥಳದ ಹಿನ್ನೆಲೆಯಲ್ಲಿ ರೂಪಿಸಲ್ಪಡುವ ಅಂಚೆ ಚೀಟಿಗಳನ್ನು ಕಳೆದ ಕೆಲವು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡವರಿದ್ದಾರೆ.
ವಿಶೇಷವೆಂದರೆ, ಜರ್ಮನಿ ದೇಶದ ಅಂಚೆ ಚೀಟಿಗಳನ್ನು ಸುದೀರ್ಘ ವರ್ಷದಿಂದ ಸಂಗ್ರಹ ಮಾಡಿದ ಅಪರೂಪದ ಸಾಧಕರೋರ್ವರು ನಗರದಲ್ಲಿದ್ದಾರೆ. ನಗರದ ಸಂತ ಅಲೋಶಿಯಸ್ ಕಾಲೇಜು ಆನ್ವಯಿಕ ಜೀವಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಡಾ| ಫಾ|
ಲಿಯೋ ಡಿ’ಸೋಜಾ ಎಸ್.ಜೆ. ಅವರು ಜರ್ಮನ್ ಅಂಚೆ ಚೀಟಿಗಳ ಸಂಗ್ರಹದ ಮೂಲಕ ಗಮನ ಸೆಳೆದಿದ್ದಾರೆ.
ಇಂತಹ ಅಪರೂಪ ಹಾಗೂ ಕುತೂಹಲದ ಅಂಚೆ ಚೀಟಿಗಳ ಪ್ರದರ್ಶನವನ್ನು ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಾಗೂ ಗುರುವಾರ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು. ವಿಶೇಷವೆಂದರೆ, ಕಳೆದ 54 ವರ್ಷಗಳ ಕಾಲ ಸಂಗ್ರಹಿಸಿದ ಜರ್ಮನ್ ಅಂಚೆ ಚೀಟಿಗಳು, ಪೋಸ್ಟ್ ಕಾರ್ಡ್‌ಗಳು, ಕವರ್‌ಗಳನ್ನು ಸಂಗ್ರಹಿಸುವ ಮೂಲಕ ಫಾ| ಲಿಯೋ ಅವರು ವಿಶೇಷ ಕಾರ್ಯ ನಡೆಸಿದ್ದಾರೆ.
1963ರಿಂದ 2017ರ ವರೆಗಿನ 54 ವರ್ಷಗಳ ಸ್ಟಾಂಪ್ ಮತ್ತು ಪತ್ರಗಳನ್ನು ಮಂಗಳೂರಿನಲ್ಲಿ ಕೈಗೊಂಡ ಪ್ರದರ್ಶನದಲ್ಲಿ ಇರಿಸಲಾಗಿತ್ತು. ಸುಮಾರು 1,700ಕ್ಕೂ ಅಧಿಕ ವಿಶಿಷ್ಟ ಸ್ಮರಣಾರ್ಥಕ ಅಂಚೆ ಚೀಟಿಗಳು, 100ಕ್ಕೂ ಅಧಿಕ ಅಂಚೆ ಪತ್ರಗಳು ಹಾಗೂ ಪೋಸ್ಟ್ ಕಾರ್ಡ್‌ಗಳ ಪ್ರದರ್ಶನವೂ ನಡೆಯಿತು. ಅಂಚೆ ಚೀಟಿ ಸಂಗ್ರಹದ ಬಗ್ಗೆ ‘ಉದಯವಾಣಿ ಸುದಿನ’ ಜತೆಗೆ ಮಾತನಾಡಿದ ಅವರು, ‘ಅಂಚೆ ಚೀಟಿಗಳು ಕಳೆದು ಹೋದ ದಿನಗಳಿಗೆ ಒಂದು ಸಾಕ್ಷಿ. ಇತಿಹಾಸವನ್ನು ನೆನಪಿಸಿಕೊಳ್ಳಲು ಇದೊಂದು ಆಧಾರ. ಹಳೆ ಪತ್ರಗಳು, ಪೋಸ್ಟ್‌ಕಾರ್ಡ್‌ಗಳು ಅಪೂರ್ವ ನೆನಪುಗಳನ್ನು ಕೆದಕಬಲ್ಲುವು. ಜರ್ಮನಿಯ ಇತಿಹಾಸದ ವೈವಿಧ್ಯಮಯ ಸಂಗ್ರಹವನ್ನು ಈ ನಿಟ್ಟಿನಲ್ಲಿ ಮಾಡಲಾಗಿದೆ. ಆಯಾ ವರ್ಷಕ್ಕೆ ಅನುಗುಣವಾಗಿ ಅಂಚೆ ಚೀಟಿಯನ್ನು ವಿಭಾಗಿಸಿ ಸಂಗ್ರಹಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.