ಬದುಕನ್ನೇ ಸುಡುತ್ತಿದೆ ‘ಪಚ್ಚನಾಡಿ ಡಂಪಿಂಗ್‌ ಯಾರ್ಡ್‌’

ದಿನವಿಡೀ ವಿಷಪೂರಿತ ಹೊಗೆ; ಸ್ಥಳೀಯರ ನರಕಯಾತನೆ !

Team Udayavani, May 15, 2019, 5:50 AM IST

24

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಬೆಂಕಿಬಿದ್ದು ಹೊತ್ತಿ ಉರಿದ ಪರಿಣಾಮ ವಿಷಪೂರಿತ ಹೊಗೆ ಯಿಂದ ಮಂಗಳನಗರ, ಮಂಗಳ ಜ್ಯೋತಿ ವ್ಯಾಪ್ತಿಯ ಹಲವು ಜನರು ಅಸ್ವಸ್ಥರಾ ಗಿದ್ದಾರೆ.

ವಿಷಪೂರಿತ ಹೊಗೆ ಇನ್ನೂ ನಿಂತಿಲ್ಲವಾ ದ್ದರಿಂದ ಮಂಗಳನಗರ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ಮನೆಯ ಬಹುತೇಕ ಮಂದಿ ಕೆಮ್ಮು, ವಾಂತಿಯಿಂದ ಬಳಲುತ್ತಿದ್ದಾರೆ. ಈ ಪೈಕಿ ಇಬ್ಬರು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಹುತೇಕರು ಮನೆಗೆ ಬೀಗ ಹಾಕಿ, ಸಂಬಂಧಿಕರ ಮನೆಗೆ ತೆರಳಿದ್ದಾರೆ.

ರವಿವಾರ ಸಂಜೆ ಕಸದ ರಾಶಿಯ ಒಂದು ಭಾಗಕ್ಕೆ ಬೆಂಕಿ ಬಿದ್ದಿತ್ತು. ಸೋಮವಾರ ದಿನಪೂರ್ತಿ ವ್ಯಾಪಿಸಿತ್ತು. ಅಗ್ನಿಶಾಮಕದಳದಿಂದ ಬೆಂಕಿ ನಂದಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಪರಿಣಾಮ ಸೋಮವಾರ ರಾತ್ರಿ ವಿಷಪೂರಿತ ಹೊಗೆ ಮತ್ತಷ್ಟು ವ್ಯಾಪಿಸಿ, ಸ್ಥಳೀಯರಿಗೆ ಉಸಿರಾಟಕ್ಕೂ ತೊಂದರೆ ಯಾಯಿತು. ಜತೆಗೆ ಕೆಲವರು ತಲೆಸುತ್ತು, ವಾಂತಿಯಿಂದ ಅಸ್ವಸ್ಥರಾದರು. ಹೀಗಾಗಿ ಕೆಲವರು ಸ್ಥಳೀಯ ಆಸ್ಪತ್ರೆಗೆ ರಾತ್ರಿಯೇ ದಾಖಲಾಗಿ ಚಿಕಿತ್ಸೆ ಪಡೆದು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಸಿರಾಟಕ್ಕೆ ತೊಂದರೆ
ವಿಷಪೂರಿತ ಹೊಗೆ ವ್ಯಾಪಿಸಿದ ಪರಿಣಾಮ ಸ್ಥಳೀಯರು ಮೂಗು ಮುಚ್ಚಿ ಕಣ್ಣಿಗೂ ಬಟ್ಟೆ ಕಟ್ಟುವ ಪರಿಸ್ಥಿತಿಯಿದೆ.

ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು.

ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ಭೇಟಿ; ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ
ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಕಿಗೆ ಕಾರಣವೇನು ?
ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

ತ್ಯಾಜ್ಯದ ಮೇಲೆ ಮಣ್ಣು
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಬೆಂಕಿಯ ಪರಿಣಾಮ ವಿಷಪೂರಿತ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೂಲಕ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಬೆಂಕಿ ವ್ಯಾಪಿಸದಂತೆ ತ್ಯಾಜ್ಯದ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಸ್ಥಳೀಯರ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ.
– ಡಾ| ವೈ. ಭರತ್‌ ಶೆಟ್ಟಿ,ಶಾಸಕರು

ವಾಸ್ತವ್ಯಹೂಡಲಿ
ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಅಧಿಕಾರಿಗಳು ಒಂದು ದಿನ ರಾತ್ರಿ ಡಂಪಿಂಗ್‌ ಯಾರ್ಡ್‌ನ ಸಮೀಪದಮನೆಗಳಲ್ಲಿ ವಾಸ್ತವ್ಯ ಹೂಡಲಿ. ‌ ಮನೆ ಮಂದಿ ಎಲ್ಲ ಅಧಿಕಾರಿಗಳ ಮನೆಯ ಎಸಿ ರೂಮಿನಲ್ಲಿ ಮಲಗುತ್ತೇವೆ. ನಮ್ಮ ಒಂದು ದಿನದ ಸಂಕಷ್ಟ ಆಗ ಅಧಿಕಾರಿಗಳಿಗೆ ಗೊತ್ತಾಗಬಹುದು. ಈ ಮೂಲಕವಾದರೂ ಸಮಸ್ಯೆ ಪರಿಹಾರವಾಗಲಿ.
– ರವೀಂದ್ರ ನಾಯಕ್‌, ಸ್ಥಳೀಯರು

ಚಿತ್ರ: ಸತೀಶ್‌ ಇರಾ
•ದಿನೇಶ್‌ ಇರಾ

ಟಾಪ್ ನ್ಯೂಸ್

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

1-ree

Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

Ashwin Vaishnav

Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ

Andhra-CM-Naidu

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Surathkal: ಹುಷಾರು, ಅಂಗಡಿ ಮುಚ್ಚಿದರೂ ಶುಲ್ಕ ಕಟ್ಟಬೇಕು!

8

Mangaluru: ಅಂತಾರಾಷ್ಟ್ರೀಯ ಮಟ್ಟ ತಲುಪಿದ ಮಂಗಳೂರಿನ ಗಾಳಿಪಟ!

4

Mangaluru: 500 ಮನೆಗಳಿಗೆ ತಲುಪಿದ ಸಿಎನ್‌ಜಿ ಅನಿಲ; ಶೀಘ್ರ ಇನ್ನಷ್ಟು ಕಡೆ ವಿಸ್ತರಣೆ

3(1

Bajpe: 7 ಅಣೆಕಟ್ಟೆಗೆ ಹಲಗೆ; ತುಂಬಿದ ನೀರು

The Shoolin Group: Mangalore’s Newest Premium Hotel, Shoolin Comforts, Inaugurated

The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

1-ree

Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.