ಭಿಕ್ಷುಕರಿಗೆ ಮರುಜೀವ ನೀಡುವ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರ


Team Udayavani, Jun 5, 2017, 4:45 PM IST

0406mlr10.jpg

ಮಹಾನಗರ: ಭಿಕ್ಷೆ ಎತ್ತುವುದನ್ನು ತಡೆಯಲು ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯಿದೆ 1975ಅನ್ನು ಜಾರಿಯಲ್ಲಿದ್ದು, ಇದರನ್ವಯ ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧ. ಆದರೂ  ಮಂಗಳೂರು ನಗರ ಸಹಿತ  ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಭಿಕ್ಷುಕರು ಕಂಡುಬರುತ್ತಿದ್ದಾರೆ. 

ದ.ಕ. ಹಾಗೂ ಉಡುಪಿ ಜಿಲ್ಲೆಯ ಭಿಕ್ಷುಕರಿಗಾಗಿ ಮಂಗಳೂರು ನಗರದ ಪಚ್ಚನಾಡಿಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವೊಂದು ಕಾರ್ಯಚರಿಸುತ್ತಿದ್ದು, ಇಲ್ಲಿ ಭಿಕ್ಷುಕರ ಮನಪರಿವರ್ತನೆಯ ಕಾರ್ಯ ನಡೆಯುತ್ತಿದೆ. ಇಲ್ಲಿ ಭಿಕ್ಷುಕರನ್ನು ಕನಿಷ್ಠ ಒಂದು ವರ್ಷಗಳ ಕಾಲದಿಂದ ಗರಿಷ್ಠ 3 ವರ್ಷಗಳ ಕಾಲದವರೆಗೆ ಉಳಿಸಿಕೊಂಡು ಬಳಿಕ ಅವರ ವಿಳಾಸ ಪತ್ತೆ ಮಾಡಿ ಮನೆಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. 

ಪರಿಹಾರ ಕೇಂದ್ರದವರು ರೈಡ್‌ ಮಾಡುವ ಮೂಲಕ ಇಲ್ಲಿಗೆ ಭಿಕ್ಷುಕರನ್ನು ಕರೆತಂದರೆ, ಕೆಲವು ಸಂದರ್ಭದಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಕೂಡ ಕೇಂದ್ರಕ್ಕೆ ಭಿಕ್ಷುಕರನ್ನು ಕರೆತರಲಾಗುತ್ತದೆ. ರಾಜ್ಯ ಸಮಾಜ್ಯ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ ಮೂಲಕ ಈ ಕೇಂದ್ರಗಳನ್ನು ನಿರ್ವಹಣೆ ಮಾಡಲಾಗುತ್ತದೆ. 

150 ಮಂದಿಯ ಸಾಮರ್ಥ್ಯ
ಪಚ್ಚನಾಡಿನಲ್ಲಿರುವ ನಿರಾಶ್ರಿತರ ಕೇಂದ್ರವು 2 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, 125 ಪುರುಷರು ಹಾಗೂ 25 ಮಹಿಳೆಯರು ಸಹಿತ  ಒಟ್ಟು 150 ಮಂದಿಯ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕೇಂದ್ರದಲ್ಲಿ 103 ಮಂದಿ ಪುರುಷರು ಹಾಗೂ 6 ಮಂದಿ ಮಹಿಳೆಯರು ಅಶ್ರಯ ಪಡೆದಿದ್ದಾರೆ. ಕೇಂದ್ರದಲ್ಲಿ ಮೂರು ಮಂದಿ ಖಾಯಂ ಸಿಬಂದಿ ಸಹಿತ ಒಟ್ಟು 11 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಾಶ್ರಿತರ ಊಟೋಪಹಾರ ಸೇರಿ ಕೇಂದ್ರಕ್ಕೆ ಅಂದಾಜು 60 ಲಕ್ಷ ರೂ.ಗಳ ವರೆಗೆ ಅನುದಾನ ಲಭಿಸುತ್ತಿದೆ. 

ಮಾದರಿ ಕೇಂದ್ರ ಇದಾಗಿದೆ
ಸಾಮಾನ್ಯವಾಗಿ ಸರಕಾರಿ ಕಚೇರಿ, ಕೇಂದ್ರಗಳೆಂದರೆ ಅಲ್ಲಿನ ನಿರ್ವಹಣೆ ಅಷ್ಟಕಷ್ಟೇ ಆಗಿರುತ್ತದೆ. ಆದರೆ ಮಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರ ಇತರ ಎಲ್ಲ ಇಲಾಖೆಗಳಿಗೂ ಮಾದರಿಯಾಗುವಂತಿದೆ. ಒಂದೆಡೆ ಶುಚಿಯಾದ ಕಟ್ಟಡ, ಸುತ್ತಮುತ್ತ ಹಣ್ಣು, ತರಕಾರಿ, ಹೂವಿನ ಗಿಡಗಳು ಕಂಗೊಳಿಸುತ್ತಿದೆ. ಮನೆಯೂ ಅಷ್ಟು ಚೆನ್ನಾಗಿ ಇರಲಿಕ್ಕಿಲ್ಲ ಎಂಬ ರೀತಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಲಾಗಿದೆ. 

ಕೇಂದ್ರದ ಸ್ವತ್ಛತೆಯ ಕಾರ್ಯವನ್ನು ನಿರಾಶ್ರಿತರೇ ಮಾಡುತ್ತಾರೆ. ಜತೆಗೆ ತರಕಾರಿ ಗಿಡಗಳನ್ನು ಬೆಳೆಸುವುದು, ಹೂವಿನ ಗಿಡಗಳ ನಿರ್ವಹಣೆ ಹೀಗೆ ಎಲ್ಲ ಕಾರ್ಯವನ್ನು ಅಲ್ಲಿರುವ ಭಿಕ್ಷುಕರೇ ಮಾಡುತ್ತಾರೆ. 

ರೈಲಿನ ಮೂಲಕ ಬರುತ್ತಾರೆ
ಜಿಲ್ಲೆಯಲ್ಲಿ ಲಭ್ಯವಾಗುವ ಭಿಕ್ಷುಕರಲ್ಲಿ ಕೇರಳ, ತಮಿಳುನಾಡಿನವರೇ ಅಧಿಕ. ಜತೆಗೆ ಉತ್ತರ ಭಾರತದವರೂ ಬರುತ್ತಾರೆ. ಇವರು ರೈಲಿನ ಮೂಲಕ ಬಂದು ನಗರದಲ್ಲಿ ಭಿಕ್ಷಾಟನೆಗೆ ತೊಡಗಿಕೊಳ್ಳುತ್ತಾರೆ. ಈ ರೀತಿಯಲ್ಲಿ ಬಂದ ಭಿಕ್ಷುಕರು ಕೇಂದ್ರದಲ್ಲಿ ದಾಖಲಾದರೆ ಮೊದಲಿಗೆ ಅವರ ವಿಳಾಸವನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತದೆಯೇ ಎಂದು ನೋಡಿಕೊಳ್ಳುತ್ತೇವೆ. ಅವರು ಸಮರ್ಪಕ ವಿಳಾಸ ನೀಡಿದರೆ ಮನೆಯವರನ್ನು ಕರೆಸಿ ಅವರಿಂದ ಬಾಂಡ್‌ ಪಡೆದುಕೊಂಡು ಕಳುಹಿಸಲಾಗುತ್ತದೆ. 

ಹೆಚ್ಚಿನ ಸಂದರ್ಭದಲ್ಲಿ ಭಿಕ್ಷುಕರು ಮಾನಸಿಕವಾಗಿ ನೊಂದಿರುವುದರಿಂದ ಅವರಿಂದ  ವಿಳಾಸ  ತಿಳಿ ದು ಕೊ ಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅವರನ್ನು ಒಂದರಿಂದ ಮೂರು ವರ್ಷಗಳ ಕಾಲ ಕೇಂದ್ರದಲ್ಲೇ ಉಳಿಸಿಕೊಂಡು ಕೌನ್ಸೆಲಿಂಗ್‌ ನಡೆಸಿ ವಿಳಾಸವನ್ನು ತಿಳಿದುಕೊಳ್ಳಲಾಗುತ್ತದೆ. ಬಳಿಕ ಒಂದು ಸಾವಿರ ರೂ.ಪೆನಾಲ್ಟಿ ಕಟ್ಟಿ ಮನೆಯವರು ಕರೆದುಕೊಂಡು ಹೋಗಬೇಕಾಗುತ್ತದೆ. 

ಮನಪರಿವರ್ತನೆಯ ಕಾರ್ಯ
ನಾವು ಭಿಕ್ಷುಕರನ್ನು ಒಂದರಿಂದ ಮೂರು ವರ್ಷಗಳ ಕೇಂದ್ರದಲ್ಲಿ ಇಟ್ಟುಕೊಂಡು ಬಳಿಕ ಅವರ ಮನಪರಿವರ್ತನೆ ಮಾಡಲಾಗುತ್ತದೆ. ಬಳಿಕ ನಾವು ಬೇರೆ ಜಿಲ್ಲೆ, ರಾಜ್ಯಗಳ ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ಅವರ ವಿಳಾಸವನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತೇವೆ. ಇಲ್ಲಿಗೆ ಬಂದ ಬಳಿಕ ಅವರ ಮನಪರಿವರ್ತನೆಯಾಗಿ ನೈಜ ಬದುಕಿಗೆ ಮರಳುತ್ತಾರೆ. ಸರಕಾರ ಅವರಿಗೆ ಮರುಜೀವನ ನೀಡಲು ಎಲ್ಲ ರೀತಿಯ ಸಹಕಾರ ಮಾಡುತ್ತಿದೆ. ಸಾರ್ವಜನಿಕ 10581 ಟೋಲ್‌ಫ್ರಿ ಸಂಖ್ಯೆಗೆ ಮಾಹಿತಿ ನೀಡಬೇಕು. 

 - ಶಾರದಾ, ಅಧೀಕ್ಷಕಿ
ನಿರಾಶ್ರಿತರ ಪರಿಹಾರ ಕೇಂದ್ರ, ಮಂಗಳೂರು

ಇನ್ನು ಕುಡಿಯುವುದಿಲ್ಲ
ನಾನು ಕುಡಿದುಕೊಂಡು ಭಿಕ್ಷಾಟನೆ ಮಾಡುತ್ತಾ ತಿರುಗಾಡುತ್ತಿದೆ. ಆದರೆ ನನಗೆ ಈಗ ಇಲ್ಲಿ ಮರುಜೀವ ನೀಡಿದ್ದಾರೆ. ಇನ್ನು ಕುಡಿಯುವುದಿಲ್ಲ. ಮನೆಯಲ್ಲೇ ಇದ್ದುಕೊಂಡು ಜೀವನ ನಡೆಸುತ್ತೇನೆ. ಇಲ್ಲಿ ಇರುವುದಕ್ಕೆ ಬಹಳ ಸಂತೋಷವಾಗುತ್ತಿದೆ. 
  – ಆ್ಯಂಟನಿ ಚೆನ್ನೈ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.