ಕೋಸ್ಟ ಲ್‌ನಿಂದ ನ್ಯೂಯಾರ್ಕ್‌ಗೆ ಹೋದ ‘ಪಡ್ದಾಯಿ’
Team Udayavani, Mar 29, 2018, 3:57 PM IST
ಕೋಸ್ಟಲ್‌ವುಡ್ ಸಂಭ್ರಮಿಸುವ ಸುದ್ದಿಯೊಂದು ಹೊರನಾಡಿನಿಂದ ಕೇಳಿಬಂದಿದೆ. ಮಂಗಳೂರಿನ ಭಯಸಿಂಹ ನಿರ್ದೇಶನದ ತುಳು ಸಿನೆಮಾವೊಂದು ನ್ಯೂಯಾರ್ಕ್‌ನಿಂದ ಸದ್ದು ಮಾಡುತ್ತಿದೆ.
ಚಿತ್ರದ ಹೆಸರು ‘ಪಡ್ಡಾಯಿ’. ಪಕ್ಕಾ ತುಳುನಾಡಿನ ಕಥೆಯೊಂದನ್ನು ಇಟ್ಟುಕೊಂಡು ಶೇಕ್ಸ್‌ಪಿಯರ್‌ನ ಪ್ರಸಿದ್ಧ ಕೃತಿ ಮ್ಯಾಕ್‌ಬೆತ್ ನಾಟಕದಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಮಾಡಲಾಗಿದೆ. ತುಳುನಾಡಿನ ಮೊಗವೀರ ಸಮುದಾಯದ ಬದುಕು ಬವಣೆಯನ್ನು ಈ ಸಿನೆಮಾದ ಮೂಲಕ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಅದರಲ್ಲೂ ತುಳುನಾಡಿನ ನೇಮ, ಕೋಲ, ಯಕ್ಷಗಾನ ಸಹಿತ ಎಲ್ಲ ಪ್ರಕಾರಗಳು ಈ ಸಿನೆಮಾದಲ್ಲಿ ಹಾದುಹೋಗುತ್ತವೆ. ಹೀಗಾಗಿ ಪಕ್ಕಾ ತುಳುನಾಡಿನ ಕಥೆಯಾಧಾರಿತವಾಗಿ ಪಡ್ಡಾಯಿ ಮಾಡಲಾಗಿದೆ.
ನಿತ್ಯಾನಂದ ಪೈ ಸಿನೆಮಾ ನಿರ್ಮಿಸಿದ್ದು, ಕದ್ರಿ ಮಣಿಕಾಂತ್ ಸಂಗೀತದಲ್ಲಿ ಕೈ ಜೋಡಿಸಿದ್ದಾರೆ. ಮೇ 7ರಿಂದ 12ರವರೆಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಡ್ಡಾಯಿ ಸಿನೆಮಾ ಪ್ರದರ್ಶನಕ್ಕೆ ಅವಕಾಶ ಪಡೆದಿದೆ.
ರಂಗಭೂಮಿಯಲ್ಲಿ ಬಹಳಷ್ಟು ಹೆಸರು ಪಡೆದ ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್, ಅವಿನಾಶ್, ಪ್ರಭಾಕರ ಕಾಪಿಕಾಡ್, ರವಿ ಭಟ್, ಸದಾಶಿವ, ಸಂತೋಷ್ ಶೆಟ್ಟಿ, ಶ್ರೀನಿಧಿ ಆಚಾರ್, ವಾಣಿ, ಮಲ್ಲಿಕಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಕರಾವಳಿಯಲ್ಲಿ ಈ ಸಿನೆಮಾ ಯಾವಾಗ ರಿಲೀಸ್ ಎಂಬುದಕ್ಕೆ ಸದ್ಯಕ್ಕೆ ಉತ್ತರ ದೊರಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.