ನಿರ್ಲಕ್ಷ ಕ್ಕೊಳಗಾದ ಪಡ್ಡಂದಡ್ಕ-ಕೊರಂಗಳ ರಸ್ತೆ
Team Udayavani, Jul 20, 2017, 5:15 AM IST
ವೇಣೂರು: ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿ ಪಡ್ಡಂದಡ್ಕದಿಂದ ಕೊರಂಗಳಕ್ಕೆ ತೆರಳುವ ಸುಮಾರು 1.50 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರವೇ ದುಸ್ತರವಾಗಿದೆ. ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಹಲವು ರಸ್ತೆಗಳು ಅಭಿವೃದ್ಧಿ ಕಂಡಿವೆ. ಹೆಚ್ಚಿನ ಎಸ್ಸಿ, ಎಸ್ಟಿ ಕಾಲನಿಗಳಿಗೆ ಕಾಂಕ್ರೀಟ್ ರಸ್ತೆಯಾಗಿದೆ. ಉಳಿದಂತೆ ಡಾಮರು ರಸ್ತೆಯ ಕಾಮಗಾರಿಯೂ ನಡೆದಿದೆ. ಆದರೆ ಹೆದ್ದಾರಿಗೆ ಪ್ರಮುಖವಾಗಿ ಸಂಪರ್ಕಿಸುವ ಕೊರಂಗಳ ರಸ್ತೆ ಮಾತ್ರ ನಿರ್ಲಕ್ಷ್ಯಕ್ಕೊಳಗಾಗಿದೆ.
ಕೊರಂಗಳದಿಂದ ಹಲವು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಇಲ್ಲಿಂದ ತೆರಳುತ್ತಾರೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಕಾಲೇಜಿಗೆ ತಲುಪಲು ವಿಳಂಬವಾಗುತ್ತಿದೆ. ರಾಜ್ಯ ಹೆದ್ದಾರಿ ಪಡ್ಡಂದಡ್ಕದಿಂದ ಕೇವಲ 100 ಮೀಟರ್ನಷ್ಟು ಮಾತ್ರ ಕಾಂಕ್ರೀಟ್ ಕಾಮಗಾರಿ ನಡೆದಿದೆ.
ಗ್ರಾಮಸಭೆಯಲ್ಲೂ ಪ್ರಸ್ತಾ.ಪ
ಈ ರಸ್ತೆಯ ದುರವಸ್ಥೆ ಬಗ್ಗೆ ಕಳೆದ ಸುಮಾರು 4 ವರ್ಷಗಳಿಂದ ಹೊಸಂಗಡಿ ಗ್ರಾಮಸಭೆಯಲ್ಲಿ ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಮನವಿಯನ್ನೂ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲು.
ಶಾಸಕ ಕೆ. ವಸಂತ ಬಂಗೇರ ಅವರಿಗೂ ಮನವಿ ನೀಡಲಾಗಿದೆ. ಅವರು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರೂ ಪರಿಸ್ಥಿತಿಯನ್ನು ಅವಲೋಕಿಸಲು ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಸುಮಾರು 30 ಕುಟುಂಬಗಳು ಇದೇ ರಸ್ತೆಯನ್ನು ಉಪಯೋಗಿಸುತ್ತಿವೆ.
ಮಳೆಗಾಲದಲ್ಲಿ ಈ ರಸ್ತೆ ತೀರಾ ಹದೆಗೆಟ್ಟು ನಡೆದುಕೊಂಡು ಹೋಗಲು ಕೂಡ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ದುರಸ್ತಿಯಾಗಲಿ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆ
ಕೊರಂಗಳಕ್ಕೆ ಜನರು ಬಾಡಿಗೆಗೆ ರಿûಾ ಒತ್ತಾಯಿಸಿದಾಗ ಹೋಗಿದ್ದೇವೆ. ಆದರೆ ವಾಪಸಾದಾಗ ರಿûಾ ರಸ್ತೆಯಲ್ಲೇ ಬಾಕಿಯಾಗಿ ಪಾರ್ಕ್ನಿಂದ ರಿûಾ ಚಾಲಕರನ್ನು ಕರೆಸಿ ಸಹಾಯ ಪಡೆದು ವಾಪಸ್ ಹೋಗಿದ್ದೇವೆ. ಮಳೆಗಾಲಕ್ಕೆ ಆ ರಸ್ತೆ ಸಂಚಾರಕ್ಕೆ ಅನನುಕೂಲ.
– ರಿûಾ ಚಾಲಕ, ಪಡ್ಡಂದಡ್ಕ
ಮನವಿಗೂ ಸ್ಪಂದನೆಯಿಲ್ಲ
ಕಳೆದ ಹಲವು ವರ್ಷಗಳಿಂದ ಸಮಸ್ಯೆ ಇದೇ ರೀತಿ ಇದೆ. ಮಳೆಗಾಲದಲ್ಲಿ ಸಂಪರ್ಕವೇ ಅಸಾಧ್ಯ ಎಂಬಂತಾಗಿದೆ. ಪಂಚಾಯತ್, ಶಾಸಕರಿಗೂ ಮನವಿ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ.
– ಗ್ರಾಮಸ್ಥ, ಕೊರಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.