ಭತ್ತ ಬೇಸಾಯದ ಬತ್ತದ ಉತ್ಸಾಹಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಕೆ. ದೇವರಾವ್‌

5 ಎಕ್ರೆಗಳಲ್ಲಿ ನಿರಂತರ ಬೇಸಾಯ; 170 ಭತ್ತ ತಳಿ ಸಂರಕ್ಷಕ

Team Udayavani, Dec 18, 2019, 5:46 AM IST

cv-15

ಹೆಸರು: ಬಿ.ಕೆ. ದೇವರಾವ್‌
ಏನು ಕೃಷಿ: ಭತ್ತ
ವಯಸ್ಸು: 75
ಕೃಷಿ ಪ್ರದೇಶ: 5.30 ಎಕ್ರೆ

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ತಂಗಡಿ: ಭತ್ತ ಕೃಷಿ ಉಳಿಸಿ ಬೆಳೆಸುವ ಸದುದ್ದೇಶದಿಂದ ಅನೇಕ ಕೃಷಿಕರು ತಳಿಗಳನ್ನು ಸಂರಕ್ಷಿಸುತ್ತ ಬಂದಿದ್ದಾರೆ. ಅಮೈ ನಿವಾಸಿ ಬಿ.ಕೆ. ದೇವರಾವ್‌ ಅಂತಹ ಭತ್ತ ತಳಿ ಸಂರಕ್ಷಕರಿಗೆ ಗುರು ಸಮಾನರು.

ಭತ್ತ ಬೇಸಾಯದಿಂದ ನೀರಿಂಗಿಸಬಹುದು ಮತ್ತು ಆ ಮೂಲಕ ಜಲಸಂರಕ್ಷಣೆ ಸಾಧ್ಯ ಎಂಬುದನ್ನು ಮನಗಂಡು ಭತ್ತ ತಳಿ ಅಭಿವೃದ್ಧಿ ಯತ್ತ ಮುಖ ಮಾಡಿದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ, 170 ಭತ್ತದ ತಳಿ ಸಂರಕ್ಷಿಸಿರುವ ತಳಿ ತಪಸ್ವಿ ಬಿ.ಕೆ. ದೇವರಾವ್‌ ಅವರ ಕೃಷಿ ಸಾಧನೆಗಾಗಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಅರಸಿ ಬಂದಿದೆ. ರಾಜ್ಯದಲ್ಲಿ ಭತ್ತದ ತಳಿ ನಶಿಸುವ ಕಾಲಘಟ್ಟದಲ್ಲಿ ಸಂರಕ್ಷಿಸುವ ಉದ್ದೇಶದಿಂದ ಇವರು ಸತತ 35 ವರ್ಷಗಳಿಂದ ಸಾವಯವವಾಗಿ ರಾಸಾಯನಿಕ ಮುಕ್ತ ಭತ್ತದ ಬೇಸಾಯ ನಡೆಸುತ್ತಿದ್ದಾರೆ, ತಳಿಗಳನ್ನೂ ಸಂರಕ್ಷಿಸುತ್ತಾ ಬಂದಿದ್ದಾರೆ. ಇವರ ತಳಿ ಸಂಶೋಧನೆ ಮತ್ತು ಸಂರಕ್ಷಣೆ 1965ರಷ್ಟು ಹಿಂದೆಯೇ ಆರಂಭಗೊಂಡದ್ದು. ಮೊದಲಿಗೆ 35ರಷ್ಟಿದ್ದ ತಳಿಗಳ ಸಂಖ್ಯೆ ಪ್ರಸಕ್ತ 170ರಷ್ಟಿದೆ. ಇಷ್ಟು ತಳಿ ಸಂರಕ್ಷಿಸುವ ಸಲುವಾಗಿ ಅಮೈ ಸಮೀಪವಿರುವ ತನ್ನ 5.30 ಎಕ್ರೆ ಕೃಷಿ ಭೂಮಿಯಲ್ಲಿ ಏಣೆಲು (ಮುಂಗಾರು) ಮತ್ತು ಸುಗ್ಗಿ (ಹಿಂಗಾರು)ಯ 2 ಅವಧಿಗಳಲ್ಲಿ ಪ್ರತಿ ವರ್ಷ ಇಷ್ಟೂ ತಳಿಗಳನ್ನು ಬಿತ್ತಿ ಬೆಳೆಯುತ್ತಿರುವುದು ಅವರ ಕೃಷಿ ಪ್ರೇಮಕ್ಕೆ ಸಾಕ್ಷಿ.

5 ಎಕ್ರೆಯಲ್ಲಿ ಭತ್ತ ಬೆಳೆ
ತಾನು ಸಂರಕ್ಷಿಸಿದ ಭತ್ತ ತಳಿಗಳನ್ನು ಅನೇಕರಿಗೆ ನೀಡಿ ಭತ್ತ ಬೇಸಾಯವನ್ನು ಪೋಷಿಸುವಲ್ಲಿ ಇವರ ಕೊಡುಗೆ ಅಪಾರ. ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ ಅವರದು, ಅವರ 5 ಎಕ್ರೆ ಗದ್ದೆಯಲ್ಲಿ ಭತ್ತ ಬೇಸಾಯ ನಳನಳಿಸುತ್ತಿದೆ. ಈ ಮೊದಲು 20 ಎಕ್ರೆಯಲ್ಲಿ ಬೆಳೆಯುತ್ತಿದ್ದವರು ಪ್ರಸ್ತುತ ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಉಪಟಳದಿಂದ ಸದ್ಯ 5 ಎಕ್ರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. 75 ವರ್ಷ ವಯಸ್ಸಿನಲ್ಲೂ ಕುಂದದ ಅವರ ಕೃಷಿ ಆಸಕ್ತಿಗೆ ಸಾಥಿಯಾಗಿ ಪುತ್ರ ಬಿ.ಕೆ. ಪರಮೇಶ್ವರ್‌ ರಾವ್‌ ಬೆಂಗಳೂರಿನ ಬಿಎಚ್‌ಇಎಲ್‌ನಲ್ಲಿ ಇಲಿಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆಗೆ ರಾಜೀನಾಮೆ ನೀಡಿ ತಂದೆಯೊಂದಿಗೆ ಸೇರಿಕೊಂಡಿದ್ದಾರೆ. ತಾನು ಭತ್ತ ಮಾತ್ರವಲ್ಲದೆ ಅಡಿಕೆ, ತೆಂಗು, ಸೇರಿದಂತೆ ಸಾವಯವ ಕೃಷಿ, ತರಕಾರಿ ಬೆಳೆಯುತ್ತಿದ್ದಾರೆ.

ಅಭಿವೃದ್ಧಿ ಪಡಿಸಿದ ತಳಿಗಳು
ಅಮೈ 1, 2,3,4, ಅಜಿಪ್ಪ, ಅಜ್ಜಿಗ, ಕಳಮೆ, ಗಂಧಸಾಲೆ, ಡಾಂಬರ್‌ ಸಾಲೆ, ಕುರುವ, ಅತಿಕ ರಯ, ಬಾಸ್ಮತಿ ಗಿಡ್ಡ, ಬಂಗಾರ ಕಡ್ಡಿ, ಅಂದನೂರು ಸಣ್ಣ, ಎಲಿcರ್‌, ಕಾಗಿಸಾಲೆ, ಕಜೆ ಜಯ, ಕಳಮೆ, ಕಯಮೆ, ಕೊಯಮತ್ತೂರು ಸಣ್ಣ, ಕುಟ್ಟಿ ಕಯಮೆ, ಮನಿಲಾ, ಮೀಟರ್‌, ಮೈಸೂರು ಮಲ್ಲಿಗೆ, ಪದ್ಮರೇಖ, ರತನ್‌ ಸಾಲೆ, ಸಬಿತ, ಪಿಂಗಾರ, ಸಿಂಧೂರ, ರಾಂಗಲ್ಲಿ, ಶ್ರೀನಿಧಿ, ತನು, ತುಲಸೀವೋಗ್‌, ಸೋಮಸಾಲೆ, ಸೇಲಂ ಸಣ್ಣ, ನೀರಬಂಡೆ, Mಟ4, ಕಖ20, ಏಒಕ 20, ಅ1, ಅ2, ಅ3, ಕರಿಯ ಜೇಬಿ, ಕರಿದಡಿ ಸೇರಿದಂತೆ 170 ತಳಿಗಳಿವೆ.

ಪ್ರಶಸ್ತಿ ಸಮ್ಮಾನ
2002ರಲ್ಲಿ ಭಾರತೀಯ ಕಿಸಾನ್‌ ಸಂಘದಿಂದ ಪುರುಷೋತ್ತಮ ಪುರಸ್ಕಾರದ ಮೂಲಕ ಆರಂಭಗೊಂಡು, 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ಮತ್ತು 2004ರಲ್ಲಿ ಸೃಷ್ಟಿ ಸಮ್ಮಾನ್‌, ಒಡಿಯೂರು ಪ್ರಶಸ್ತಿ, ಬಸ್ರೂರು ಪ್ರಶಸ್ತಿ, ಮಂಗಳೂರು ವಿ.ವಿ. ಸೇರಿದಂತೆ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ ಸಂದಿವೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

 35 ವರ್ಷದಿಂದ ಭತ್ತ ತಳಿ ಸಂಶೋಧನೆ
 5.30 ಎಕ್ರೆಯಲ್ಲಿ ಭತ್ತ ಬೆಳೆ
 170 ಭತ್ತ ತಳಿ ಸಂರಕ್ಷಣೆ
 2018-19ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
 ಏಣಿಲು-ಸುಗ್ಗಿ ಬೆಳೆ
 ಮೊಬೈಲ್‌ ಸಂಖ್ಯೆ- 9945976620

ಕೃಷಿಕರಿಗೆ ವರದಾನವಾಗಲಿ
ಭತ್ತ ಕೃಷಿಯಿಂದ ಎಂದಿಗೂ ಭೂಮಿಗೆ ಸಂಕಷ್ಟವಿಲ್ಲ. ಪಾರಂಪರಿಕ ಕೃಷಿ ಬೆಳೆಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ವಾಣಿಜ್ಯ ಬೆಳೆ ಆದಾಯಕ್ಕಷ್ಟೆ, ಹೊಟ್ಟೆ ತುಂಬದು. ಮತ್ತೂಂದೆಡೆ ವೈಜ್ಞಾನಿಕವಾಗಿ ಗದ್ದೆಗಳಿಂದ ಒರತೆ ಹೆಚ್ಚಾಗಿ ಅಂತರ್ಜಲ ಸಮೃದ್ಧಿಯಾಗುತ್ತದೆ. ಈ ಉದ್ದೇಶದಿಂದಲೇ ಭತ್ತ ತಳಿ ಸಂರಕ್ಷಿಸುತ್ತಾ ಬಂದಿದ್ದೇನೆ. ನಾನು ಸಂರಕ್ಷಿಸಿದ ತಳಿಗಳು ನಿತ್ಯನಿರಂತರವಾಗಿ ಯುವ ಕೃಷಿಕ ವರ್ಗವನ್ನು ಉತ್ತೇಜಿಸಲಿ ಮತ್ತು ರಾಜ್ಯವ್ಯಾಪಿ ಭತ್ತದ ಕೃಷಿಕರಿಗೆ ವರದಾನವಾಗಲಿ ಎಂಬುದೇ ನನ್ನ ಉದ್ದೇಶ.
-ಬಿ.ಕೆ. ದೇವರಾವ್‌, ಭತ್ತ ತಳಿ ತಪಸ್ವಿ, ಬೆಳ್ತಂಗಡಿ, ಮಿತ್ತಬಾಗಿಲು

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.