ಕಾಂಗ್ರೆಸ್‌ನ ಟೂಲ್‌ಕಿಟ್ ಆಗಿ ದ.ಕ.ದಲ್ಲಿ ಪದ್ಮರಾಜ್ ಕಣಕ್ಕೆ: ಹರಿಕೃಷ್ಣ ಬಂಟ್ವಾಳ
Team Udayavani, Apr 21, 2024, 1:35 AM IST
ಮಂಗಳೂರು: ಜಿಲ್ಲೆಯಲ್ಲಿ ಹಿಂದು -ಮುಸ್ಲಿಂ ಎಂಬ ಒಡಕು ಮೂಡಿಸಲಾಗದೆ ಸೋತಿರುವ ಕಾಂಗ್ರೆಸ್ ಈಗ ಹಿಂದೂಗಳನ್ನೇ ಜಾತಿಯ ಆಧಾರದಲ್ಲಿ ಒಡೆಯಲು ಮುಂದಾಗಿದೆ. ಹಾಗಾಗಿ ಕಾಂಗ್ರೆಸ್‌ನ ಟೂಲ್‌ಕಿಟ್ ಆಗಿ ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಉದ್ದೇಶ ಪದ್ಮರಾಜ್ ಅವರನ್ನು ಗೆಲ್ಲಿಸುವುದಲ್ಲ, ಬದಲಿಗೆ ಹಿಂದೂ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುವುದೇ ಆಗಿದೆ ಎಂದರು.
ರಾಜೀನಾಮೆ ಕೊಡಲಿ
ಈಗ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರು ಒಂದು ಪಕ್ಷದ ಪರವಾಗಿ ಮತ ಯಾಚನೆ ಮಾಡುವುದು ಬಿಲ್ಲವ ಸಮುದಾಯಕ್ಕೆ ಮಾಡಿರುವ ಅವಮಾನ, ಹಾಗಾಗಿ ಅವರು ಮಂಡಲದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಲಿ ಎಂದರು.
ಬಿಲ್ಲವರು ಸದಾ ರಾಷ್ಟ್ರವಾದಿಗಳು. ಆದರೆ ಸಮುದಾಯದ ಸಂಘಟನೆ ಹೆಸರಿನಲ್ಲಿ ಕೆಲವರು ಹಾದಿತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ ಎಂದರು.
ನಾಮಕರಣಕ್ಕೆ ವಿರೋಧಿಸಿದ್ದರು
ಲೇಡಿಹಿಲ್‌ನಲ್ಲಿ ನಾರಾಯಣ ಗುರು ವೃತ್ತ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆಯನ್ನು ಕಾಂಗ್ರೆಸ್ ಹಾಗೂ ಸ್ವತಃ ಪದ್ಮರಾಜ್ ಅವರೇ ವಿರೋಧಿಸಿದ್ದರು. ಬಿರುವೆರ್ ಕುಡ್ಲದ ಸ್ಥಾಪಕ ಉದಯ ಪೂಜಾರಿ, ಸಂಸದ ನಳಿನ್, ಶಾಸಕ ವೇದವ್ಯಾಸ ಕಾಮತ್ ಮತ್ತಿತರ ಶ್ರಮದಿಂದ ಹೆಸರು ಬದಲಾವಣೆಯಾಗಿದೆ. ಈಗ ಬಿಲ್ಲವರಿಗೆ ಓಟು ಕೊಡಿ ಎಂದು ಕೇಳುವ ಕಾಂಗ್ರೆಸಿಗರು ಜನಾ ರ್ದನ ಪೂಜಾರಿ ಅವರನ್ನು ಕೆಲವು ಕಾಂಗ್ರೆಸಿಗರು ನಿಂದಿಸಿದಾಗ ಸುಮ್ಮನಿ ದ್ದರು ಎಂದರು. ನಿತಿನ್ ಕುಮಾರ್, ರಾಜಗೋಪಾಲ ರೈ ಇದ್ದರು.
ಬಿಲ್ಲವ ನಿಗಮಕ್ಕೆ ಚಿಕ್ಕಾಸು ಕೊಡದ ಸರಕಾರ
ಬಿಜೆಪಿ ಸರಕಾರ ಹಿಂದೆ ಶ್ರೀ ನಾರಾಯಣಗುರು ಅಭಿ ವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಿದೆ, ಆದರೆ ಈ ಬಾರಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಸರಕಾರ ಒಂದು ರೂ. ಅನು ದಾನವನ್ನೂ ಅದಕ್ಕೆ ಇರಿಸಿಲ್ಲ, ಈ ಹಿಂದೆ ಬಿಲ್ಲವ ನಿಗಮ ಸ್ಥಾಪನೆಯಾಗಬೇಕು ಎಂದು ಹೋರಾಡಿದ ಕಾಂಗ್ರೆಸಿಗರು ಈಗ ಎಲ್ಲಿದ್ದಾರೆ ಎಂದು ಬಂಟ್ವಾಳ್ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.