ಸ್ಥಳೀಯವಾಗಿ ಸಮಸ್ಯೆ ಕಾಡುವುದು ಸಹಜ

ಪಡುಪಣಂಬೂರು ಗ್ರಾಮ ಪಂಚಾಯತ್‌

Team Udayavani, Mar 29, 2019, 10:31 AM IST

29-March-2

ತೋಕೂರಿನಲ್ಲಿ ನಿರ್ಮಿಸಿರುವ ಕಿಂಡಿಅಣೆಕಟ್ಟಿನಲ್ಲಿ ನೀರಿನ ಸಂಗ್ರಹಗೊಂಡು ಹೆಚ್ಚುವರಿಯಾಗಿ ಹರಿಯುತ್ತಿರುವುದು.

ಪಡುಪಣಂಬೂರು: ಜನಸಂಖ್ಯೆಯ ಆಧಾರದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ಶೇ. 40 ಮಂದಿ ಮಾತ್ರ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದು, ಉಳಿದವರು ವೈಯಕ್ತಿಕವಾಗಿ ಕೊಳವೆ ಬಾವಿ ಹಾಗೂ ತೆರೆದ ಬಾವಿಯನ್ನು ಅವಲಂಬಿಸಿದ್ದಾರೆ. ನೀರಿನ ಸಂಪರ್ಕದಲ್ಲಿ ಸಾಕಷ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು ಸಹ ಮೇ, ಜೂನ್‌ ತಿಂಗಳಿನಲ್ಲಿ ಸಮಸ್ಯೆ ಸ್ಥಳೀಯವಾಗಿ ಕಾಡುವುದು ಸಹಜವಾಗಿದೆ.
ಪಡುಪಣಂಬೂರು ಗ್ರಾ.ಪಂ.ನ ಬೆಳ್ಳಾಯರು, 10ನೇ ತೋಕೂರು, ಪಡುಪಣಂಬೂರು ಗ್ರಾಮದ 5 ವಾರ್ಡ್‌ನಲ್ಲಿಯೂ ಪ್ರತ್ಯೇಕವಾಗಿ ಐದು ಕುಡಿಯುವ ನೀರಿನ ನಿರ್ವಹಣೆಯ ಸಮಿತಿ ಕಾರ್ಯಾಚರಿಸುತ್ತಿವೆ. ಬೆಳ್ಳಾಯರು ಗ್ರಾಮದಲ್ಲಿ ಹೆಚ್ಚಿನ ಜನ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಈ ಹಿಂದೆ ಸಮಸ್ಯೆ ಇತ್ತಾದರೂ ಇದೀಗ ಕಿನ್ನಿಗೊಳಿಯ ಬಹುಗ್ರಾಮ ಯೋಜನೆಯ ಸಂಪರ್ಕ ಸಿಕ್ಕಿರುವುದರಿಂದ ಬೇಸಗೆಯ ಅಂತ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ.

10ನೇ ತೋಕೂರಿನಲ್ಲಿ ನೀರಿನ ನಿರ್ವಹಣೆ ಹಾಗೂ ಅಂರ್ತಜಲ ವೃದ್ಧಿಗೆ ಪಂಚಾಯತ್‌ ಸಾಕಷ್ಟು ಮುಂಜಾಗ್ರತೆ ವಹಿಸಿದೆ. ಇಲ್ಲಿ ಎರಡು ವಿಶ್ವಬ್ಯಾಂಕ್‌ ಯೋಜನೆ ಸಮಿತಿಯ ಮೂಲಕ ನೀರಿನ ನಿರ್ವಹಣೆ ನಡೆಯುತ್ತಿದೆ. ಈ ಭಾಗದಲ್ಲಿ ಕಳೆದ ವರ್ಷ ಎರಡು ಕಿಂಡಿ ಅಣೆಕಟ್ಟು ಇತ್ತು ಪ್ರಸ್ತುತ ವರ್ಷದಲ್ಲಿ ಮೂರು ಅಣೆಕಟ್ಟುಗಳು ಸೇರ್ಪಡೆಗೊಂಡು ನೀರಿನ ಒಳ ಅರಿವನ್ನು ಹೆಚ್ಚಿಸಲು ಅನುಕೂಲವಾಗಿದೆ.
ಪಡುಪಣಂಬೂರು ಪಂಚಾಯತ್‌ನ ನೀರಿನ ಬವಣೆ ನಿವಾರಿಸಲು ನೂತನವಾಗಿ ಟ್ಯಾಂಕ್‌ ನಿರ್ಮಾಣ ಹಂತದಲ್ಲಿದೆ. ಸದ್ಯ ನೀರಿನ ಸಮಸ್ಯೆ ಸೂಕ್ತವಾಗಿ ಬಗೆಹರಿಸಲು ಸಾಧ್ಯವಾಗಿ ಲ್ಲ. ಇದೇ ಪ್ರದೇಶದ ಕಲ್ಲಾಪು ಪ್ರದೇಶದಲ್ಲಿ ಉಪ್ಪು ನೀರಿನ ಅಂಶವು ಎಪ್ರಿಲ್‌, ಮೇ ತಿಂಗಳಿನಲ್ಲಿ ಕಾಡುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಾಣಬೇಕಿದೆ.
ಶಾಶ್ವತ ಪರಿಹಾರಕ್ಕೆ ಕ್ರಮ
ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತ ಪರಿಹಾರಕ್ಕಾಗಿ ಕಿಂಡಿಅಣೆಕಟ್ಟನ್ನು ನರೇಗಾ ಯೋಜನೆಯಲ್ಲಿ ರೂಪಿಸಲಾಗಿದೆ. ನೀರಿನ ಟ್ಯಾಂಕ್‌ನ್ನು ಎಂಆರ್‌ ಪಿಎಲ್‌ ಸಂಸ್ಥೆಯಿಂದ ಪಡೆದಿದೆ. ಕೆರೆ ಅಭಿವೃದಿಗೆ ಪಂಚಾಯತ್‌ ಗೆ ಅನುದಾನದ ಕೊರತೆ ಇದ್ದು, ನರೇಗಾದಿಂದಲಾದರೂ ನಡೆಸುವ ಬಗ್ಗೆ ಪ್ರಯತ್ನ ಸಾಗಿದೆ.
ಮೋಹನ್‌ದಾಸ್‌, ಅಧ್ಯಕ್ಷರು,
ಪಡುಪಣಂಬೂರು ಗ್ರಾ. ಪಂ.
ಮಳೆ ಕೊಯ್ಲು ಕಡ್ಡಾಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆಗಾಗಿ ಹೊಸದಾಗಿ ಮನೆ ಕಟ್ಟಲು ಅನುಮತಿ ಪಡೆಯುವವರು ಮಳೆ ಕೊಯ್ಲು ಮಾಡುವುದು ಕಡ್ಡಾಯಗೊಳಿಸಿಲಾಗಿದೆ. ಇತರ ಅನುದಾನ ಬಳಸಿ ಕೆರೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ. ಗರಿಷ್ಠ ಪ್ರಮಾಣದಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ.
– ಅನಿತಾ ಕ್ಯಾಥರಿನ್‌
ಪಿಡಿಒ, ಪಡುಪಣಂಬೂರು ಗ್ರಾ. ಪಂ.
ಶಾಶ್ವತ ಪರಿಹಾರ 
ಪಂಚಾಯತ್‌ ವ್ಯಾಪ್ತಿಯ 7 ಕೆರೆಗಳು ಸುಸ್ಥಿತಿಯಲ್ಲಿವೆ. ಇದರಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂಜಲ ಮರುಪೂರಣ ಯೋಜನೆ ರೂಪಿಸಲು ಸಾಧ್ಯವಾಗಲಿದೆ. ನೀರಿನ ಸಂಪರ್ಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಮಳೆ ಕೊಯ್ಲು ಬಗ್ಗೆ ಪಂಚಾಯತ್‌ ಇನ್ನಷ್ಟು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಯಿದೆ.
 ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.