ಪುತ್ತೂರಿನಲ್ಲಿ ಪಾಕ್ ಧ್ವಜ ಸುಟ್ಟು ಪ್ರತಿಭಟನೆ
Team Udayavani, Dec 30, 2017, 1:50 PM IST
ಪುತ್ತೂರು: ಕುಲಭೂಷಣ್ ಜಾದವ್ ಪತ್ನಿಯ ಮಾಂಗಲ್ಯ, ಬಿಂದಿ ತೆಗೆದಿರಿಸಿ ಗಾಜಿನ ಮುಂದೆ ಪತಿ ಜತೆ ಮಾತನಾಡಲು ಬಿಟ್ಟ ಪಾಕಿಸ್ಥಾನ, ಭಾರತೀಯ ನಂಬಿಕೆಯ ಮೇಲೆ ದಾಳಿ ಮಾಡುವ ಕೆಲಸ ಮಾಡಿದೆ ಎಂದು ಬಜರಂಗದಳ ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು. ಶುಕ್ರವಾರ ಸಂಜೆ ಪುತ್ತೂರು ಬಸ್ ನಿಲ್ದಾಣದ ಬಳಿಕ ಬಜರಂಗದಳ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕುಲಭೂಷಣ್ ಜಾದವ್ ಅಕಸ್ಮಾತ್ತಾಗಿ ಪಾಕಿಸ್ಥಾನದಲ್ಲಿ ಸೆರೆ ಸಿಕ್ಕಿದ್ದಾರೆ. ಇವರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದ್ದು, ಬಿಡುಗಡೆ ಮಾಡುವಂತೆ ಸೂಚಿಸಿದೆ. ಆದರೆ ಇದನ್ನು ಪಾಕಿಸ್ಥಾನ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಭೂಪಟದಿಂದ ಪಾಕಿಸ್ಥಾನದ ಹೆಸರನ್ನು ಕಿತ್ತು ಹಾಕುವಷ್ಟು ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಪಾಕಿಸ್ಥಾನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಕುಲಭೂಷಣ್ ಜಾದವ್ ಅವರ ಪತ್ನಿ ಹಾಗೂ ತಾಯಿಯನ್ನು ಅವಮಾನ ಮಾಡಿಸಿದ ಕ್ರಮ ಮರುಕಳಿಸದಂತೆ ಎಚ್ಚರಿಕೆ ಕೈಗೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು.
ಮಾಂಗಲ್ಯ ಹಾಗೂ ಬಿಂದಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ. ಸ್ವಾಭಿಮಾನದ ಸಂಕೇತವೂ ಹೌದು. ಜಾದವ್ ಅವರನ್ನು ಭೇಟಿ ಮಾಡಲು ತೆರಳುವಾಗ ಬಿಂದಿ, ಮಾಂಗಲ್ಯ ತೆಗೆಸಿ, ಕನ್ನಡಿ ಮುಂದಿನಿಂದ ಮಾತನಾಡುವಂತೆ ಸೂಚಿಸಲಾಗಿದೆ. ತಾಯಂದಿರನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ವಿಶ್ವಕ್ಕೆ ಹೇಳಿಕೊಟ್ಟ
ದೇಶ ಭಾರತ. ಮಾನವೀಯತೆಯನ್ನೂ ಮರೆತು, ಪಾಕ್ ಅವಮಾನ ಮಾಡಿದೆ. ಇದು ಕುಲಭೂಷಣ್ ಜಾದವ್ ಅವರ ಕುಟುಂಬಕ್ಕೆ ಆದ ಅವಮಾನವಲ್ಲ ಇಡೀ ದೇಶಕ್ಕೆ ಆದ ಅವಮಾನ ಎಂದರು.
ಗಡಿಯಲ್ಲಿ ಖ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತ ಈಗಾಗಲೇ ಉತ್ತರ ಕೊಟ್ಟಿದ್ದೇವೆ.
ಮತ್ತೂಮ್ಮೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಕೊನೆ ಎಚ್ಚರಿಕೆಯನ್ನು ನೀಡಲಾಗಿದೆ. ಇದೀಗ ಭಾರತಕ್ಕೆ ಸ್ವಾಭಿಮಾನಿ ನಾಯಕ ಸಿಕ್ಕಿದ್ದಾನೆ. ಭಾರತ ಇದೀಗ ಜಗದ್ಗುರು ಆಗುವತ್ತ ಹೆಜ್ಜೆ ಇಡುತ್ತಿದೆ. ಇದನ್ನು ಸಹಿಸದ ಪಾಕ್ ಬೇರೆ ದಾರಿ ಕಾಣದೇ, ನಂಬಿಕೆಗಳ ಮೇಲೆ ಸವಾರಿ ಮಾಡುವ ಕೆಲಸದಲ್ಲಿ ನಿರತವಾಗಿದೆ ಎಂದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸತೀಶ್ ಭಟ್ ಬಿ.ಎಸ್., ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ವಿಹಿಂಪ ಜಿಲ್ಲಾ
ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಹರೀಶ್ ದೋಳ್ಪಾಡಿ, ಜಿಲ್ಲಾ ಸಹಸಂಚಾಲಕ ಶ್ರೀಧರ್ ತೆಂಕಿಲ, ನಗರ ಸಂಚಾಲಕ ಹರಿಪ್ರಸಾದ್ ರೆಂಜಾಳ, ಪ್ರಖಂಡ ಸಂಚಾಲಕ ನಿತೀನ್ ನಿಡ್ಪಳ್ಳಿ , ಮುಖಂಡರಾದ ಮೋಹಿನಿ ದಿವಾಕರ್, ಅರ್ಪಣಾ ಶಿವಾನಂದ್, ಜಯಂತಿ ನಾಯಕ್, ಪ್ರಭಾ ಹರೀಶ್, ಮಾಧವ ಪೂಜಾರಿ, ಬಾಲಚಂದ್ರ ಸೂತ್ರಬೆಟ್ಟು, ಜಿತೇಶ್ ಬಲಾ°ಡ್, ಕಿರಣ್ ಕುಮಾರ್, ಪ್ರಶಾಂತ್, ಸಹಜ್ ರೈ ಉಪಸ್ಥಿತರಿದ್ದರು.
ಪಾಕ್ ಧ್ವಜಕ್ಕೆ ಬೆಂಕಿ
ಪ್ರತಿಭಟನೆಯ ಕೊನೆಗೆ ಪಾಕಿಸ್ಥಾನದ ಧ್ವಜಕ್ಕೆ ಬೆಂಕಿ ಹಾಕಿ ಸುಡಲಾಯಿತು. ಪಾಕಿಸ್ಥಾನದ ವಿರುದ್ಧ ಧಿಕ್ಕಾರ ಕೂಗಿ,
ಘೋಷಣೆ ಹಾಕಲಾಯಿತು. ಪ್ರತಿಭಟನೆಯ ಪ್ರಾರಂಭದಲ್ಲೇ ಪಾಕ್ ಧ್ವಜವನ್ನು ನೆಲದಲ್ಲಿ ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.