ಪಾಲೆಮಾರ್ ಅವಧಿಯ 8 ಕೋಟಿ ರೂ. ಏನಾಗಿದೆ: ಮೊದಿನ್ ಬಾವಾ ಪ್ರಶ್ನೆ
Team Udayavani, Mar 31, 2017, 3:33 PM IST
ಲಾಲ್‌ಬಾಗ್: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಅಧಿಕಾರದಲ್ಲಿದ್ದಾಗ ಸುರತ್ಕಲ್ ಮಾರುಕಟ್ಟೆ ಅಭಿವೃದ್ಧಿ ಹಾಗೂ ರಸ್ತೆಗೆ ಸರಕಾರದ 8 ಕೋಟಿ ರೂ.ಗಳನ್ನು ಬಳಸಿರುವುದಾಗಿ ಹೇಳಿದ್ದಾರೆ. ಆದರೆ ಅಂತಹ ಯಾವುದೇ ಅಭಿವೃದ್ಧಿ ಅಲ್ಲಿ ನಡೆದಿಲ್ಲ. ಅವರು ಆ ಹಣವನ್ನು ಏನು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಮೊದಿನ್ ಬಾವಾ ಆಗ್ರಹಿಸಿದ್ದಾರೆ.
ಪಾಲಿಕೆ ಕಟ್ಟಡದಲ್ಲಿರುವ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸುರತ್ಕಲ್‌ನ ಗೋಮಾಳ ಜಾಗದಲ್ಲಿ ತಾನು ನಿರ್ಮಿಸುತ್ತಿರುವ ತಾತ್ಕಾಲಿಕ ಮಾರುಕಟ್ಟೆಯನ್ನು ಚುನಾವಣ ಗಿಮಿಕ್ ಎಂಬುದಾಗಿ ಪಾಲೆಮಾರ್ ಆರೋಪಿಸುತ್ತಾರೆ. ಅಂತಹ ಯಾವುದೇ ಗಿಮಿಕ್ ನನ್ನಲ್ಲಿಲ್ಲ. ಆದರೆ ಅವರ ಅವಧಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಗೆಂದು ತಂದ ಹಣವನ್ನು ಏನು ಮಾಡಿದ್ದಾರೆಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಗೋಮಾಳ ಜಾಗದಲ್ಲಿ ಈಗಾಗಲೇ ಕಂದಾಯ ನಿರೀಕ್ಷಕರ ಕಚೇರಿ ಮೊದಲಾದ ಶಾಶ್ವತ ಕಟ್ಟಡಗಳಿವೆ. ಅದನ್ನು ಕಟ್ಟುವಾಗ ಅವರಿಗೆ ಗೋಮಾಳ ಜಾಗ ಎಂದು ಗೊತ್ತಿರಲಿಲ್ಲವೇ? ಈಗ ತಾನು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಲಾಗದೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಸುರತ್ಕಲ್‌ನಲ್ಲಿ ಸುಸಜ್ಜಿತ ಮಾರುಕಟ್ಟೆ ಇಲ್ಲದೆ ವ್ಯಾಪಾರಿಗಳು ಪರದಾ ಡುವಂತಾಗಿದೆ. ಇಲ್ಲಿ ಮೈದಾನ, ಮುಡಾ ವಾಣಿಜ್ಯ ಸಂಕೀರ್ಣ, ಮನಪಾ ಮಾರುಕಟ್ಟೆ, ರಸ್ತೆ ನಿರ್ಮಾಣಕ್ಕಾಗಿ 120 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತ ಮಾಡಲು ಸಿದ್ಧರಿದ್ದೇವೆ ಎಂದರು.
ಧಾರ್ಮಿಕ ಸಂಸ್ಥೆಗಳಿಗೆ 20 ಲಕ್ಷ ರೂ.
ಮಾರ್ಚ್ ತಿಂಗಳಿನಲ್ಲಿ ಶ್ರೀ ಮುಕ್ಕ ಸತ್ಯಧರ್ಮದೇವಿ ದೇವಸ್ಥಾನ, ಪಂಜಿ ಮೊಗರು, ವಿದ್ಯಾನಗರ ಶ್ರೀ ಕೃಷ್ಣ ಮಂದಿರ, ಕಾಟಿಪಳ್ಳ, ಕೈಕಂಬ ಶ್ರೀ ನಿತ್ಯಾ ನಂದ ಭಜನ ಮಂದಿರ, ಕಾಟಿಪಳ್ಳ ಶ್ರೀ ರಾಮಾಂಜನೇಯ ಭಜ ನ ಮಂದಿರ, ಇಡ್ಯಾ ಗುಡ್ಡಕೊಪ್ಪಳ ಶ್ರೀ ರಾಮ ಮಂದಿರಕ್ಕೆ ತಲಾ 4 ಲಕ್ಷ ರೂ. ಸೇರಿ ಒಟ್ಟು 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾವಾ ತಿಳಿಸಿದರು.ಕಾರ್ಪೊರೇಟರ್ ಬಶೀರ್ ಅಹಮ್ಮದ್, ಮಾಜಿ ಕಾರ್ಪೊರೇಟರ್ ಹರೀಶ್, ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಕುಪ್ಪೆಪದವು ಗ್ರಾಪಂ ಸದಸ್ಯ ಹಿರಣಾಕ್ಷ ಕೋಟ್ಯಾನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.