“ಪರಿಸರವನ್ನು ಸ್ವಚ್ಛವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ’
ಪಣಂಬೂರು: ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯ
Team Udayavani, Sep 22, 2019, 5:14 AM IST
ಪಣಂಬೂರು: ನವರಾತ್ರಿ, ದಸರಾ ಮತ್ತಿತರ ಹಬ್ಬಗಳಲ್ಲಿ ಪ್ರಕೃತಿ ಪೂಜೆಗೆ ಮಹತ್ವವಿದ್ದು ಪರಿಸರ ದೇವರಿಗೆ ಸಮಾನ ಎಂದು ಭಾವಿಸಲಾಗುತ್ತದೆ. ಇಂತಹ ಪುಣ್ಯ ಪರಿಸರವನ್ನು ಸ್ವಚ್ಛತೆಯಿಂದ ಉಳಿಸಿ ಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ ಎಂದು ನವಮಂಗಳೂರು ಬಂದರು ಮಂಡಳಿ ಚೇಯರ್‌ಮನ್ ಎ.ವಿ. ರಮಣ್ ಹೇಳಿದರು.
ಕೋಸ್ಟ್‌ಗಾರ್ಡ್ ನೇತೃತ್ವದಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಶಾಲಾ, ಕಾಲೇಜು, ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಇಂತಹ ಉತ್ತಮ ಕಾಯಕದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.ಕೆಐಒಸಿಎಲ್ ಸಿಎಂಡಿ ಸುಬ್ಬರಾವ್, ಕಾರ್ಪೋರೇಷನ್ ಬ್ಯಾಂಕಿನ ಎಜಿಎಂ ಅಂಬರೀಷ್, ಇಂಡಿಗೋ ಏರ್‌ಲೈನ್ಸ್‌ನ ಮ್ಯಾನೇಜರ್ ಅರ್ಚನ, ಕೆಎಂಎಫ್ ಆಡಳಿತ ನಿರ್ದೇಶಕ ಡಾ| ಜಿ.ವಿ. ಹೆಗ್ಡೆ, ಬಿಎಸ್‌ಎಫ್‌ನ ಗಣೇಶ್, ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಎ.ಜೆ.ಆಸ್ಪತ್ರೆ, ಕೆಎಂಸಿ, ಕರಾವಳಿ ಕಾವಲು ಪಡೆ, ಕೆಐಒಸಿಎಲ್, ಬಿಎಎಸ್‌ಎಫ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಕೋಸ್ಟ್‌ಗಾರ್ಡ್, ಕೇಂದ್ರೀಯ ವಿದ್ಯಾಲಯ, ರೋಟರಿ ಸಹಿತ ವಿವಿಧ ಸಂಘ – ಸಂಸ್ಥೆಗಳು ಸ್ವತ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಜಲಚರಗಳು ಉಳಿಯಲಿ
ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಎಸ್. ದಸೀಲ ಮಾತನಾಡಿ, ಸಮುದ್ರವನ್ನು ಸ್ವತ್ಛವಾಗಿಡಲು ನಾವೆಲ್ಲಾ ಪಣತೊಡಬೇಕಿದೆ. ಜಲಚರಗಳು ಉಳಿಯ ಬೇಕಿದ್ದರೆ ಸಮುದ್ರದ ನೀರು ಸ್ವತ್ಛವಾಗಿರಬೇಕಾಗುತ್ತದೆ. ಸಿಕ್ಕಿದ್ದನ್ನೆಲ್ಲಾ ನಾವು ಸಮುದ್ರಕ್ಕೆ ಸುರಿದರೆ ಅದರಲ್ಲಿರುವ ಇತರ ಜೀವಿಗಳಿಗೆ ಕಂಕಟಕವಾಗಬಹದು. ಒಂದು ದಿನ ಸಾಂಕೇತಿಕವಾಗಿ ಸಮುದ್ರತೀರವನ್ನು ನಾವು ಸ್ವತ್ಛತೆ ಮಾಡಿದರೂ ಭವಿಷ್ಯದಲ್ಲಿ ಎಲ್ಲರಿಗೂ ಇದರ ಅರಿವು ಮೂಡಿಸುವ ಮಹತ್ತರ ಉದ್ದೇಶವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.