![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 26, 2019, 6:00 AM IST
ಪಣಂಬೂರು: ಪ್ರವಾಸಿ ಕ್ಷೇತ್ರವಾದ ಪಣಂಬೂರು ಬೀಚ್‌ನಲ್ಲಿ ಹಡಗುಗಳಿಂದ ತ್ಯಜಿಸಲ್ಪಟ್ಟ ತೈಲ ಜಿಡ್ಡು ಮತ್ತು ತ್ಯಾಜ್ಯಗಳ ರಾಶಿ ತೀರಕ್ಕೆ ಬಂದು ಸೇರಿದ್ದು, ಸುಂದರವಾಗಿದ್ದ ಬೀಚ್ ವಿರೂಪಗೊಂಡಿದೆ.
ಪ್ರವಾಸಿಗಳು ಸ್ನಾನಕ್ಕೆ ಇಳಿದರೆ ಜಿಡ್ಡು ಮೈಗೆಲ್ಲ ಅಂಟಿಕೊಳ್ಳುತ್ತಿದೆ. ಬಂದರಿನಲ್ಲಿ ಹಡಗು ತ್ಯಾಜ್ಯಗಳನ್ನು ಇಳಿಸಲು ವ್ಯವಸ್ಥೆಯಿದ್ದರೂ ಶುಲ್ಕ ಭರಿಸುವುದನ್ನು ತಪ್ಪಿಸಲು ಸಮುದ್ರದಲ್ಲೇ ಸುರಿಯಲಾಗುತ್ತಿದೆ. ಸಮುದ್ರದಲ್ಲಿ ತೆರೆಗಳ ಅಬ್ಬರ ತೀವ್ರಗೊಂಡಾಗ ಜಿಡ್ಡು ತೀರಕ್ಕೆ ಬಂದು ಸೇರುತ್ತಿದ್ದು, ಕಡಲ ಹಕ್ಕಿಗಳೂ ಇದಕ್ಕೆ ಬಲಿಪಶುಗಳಾಗುತ್ತಿವೆ. ಈ ಹಿಂದೆ ತಣ್ಣೀರುಬಾವಿ ಪ್ರದೇಶದಲ್ಲಿ ಕೆಲವಾರು ದಿನಗಳ ಕಾಲ ಇದೇ ಪರಿಸ್ಥಿತಿ ಇತ್ತು.
ತೈಲ ಜಿಡ್ಡನ್ನು ಹಡಗುಗಳಿಂದ ಸುರಿಯಲಾಗುತ್ತದೆ. ಸಂಬಂಧಪಟ್ಟ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಯತೀಶ್ ಬೈಕಂಪಾಡಿ,
– ಸಿಇಒ, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ
You seem to have an Ad Blocker on.
To continue reading, please turn it off or whitelist Udayavani.