ಪಣಂಬೂರು ಸಂಕ್ರಾಂತಿ ಉತ್ಸವ ಸಮಾರೋಪ
Team Udayavani, Jan 22, 2018, 11:27 AM IST
ಪಣಂಬೂರು: ಯಕ್ಷಗಾನ ಪ್ರತಿಭೆ ವಿಕಸನಕ್ಕೆ ಯಕ್ಷನಂದನ ಪಿವಿ ಐತಾಳ ಇಂಗ್ಲಿಷ್ ಯಕ್ಷಗಾನ ಬಳಗದ ನಿರಂತರ ಸೇವೆ ಶ್ಲಾಘನೀಯ. ಇದರಿಂದ ಪರಿಸರದಲ್ಲಿ ಅನೇಕ ಯಕ್ಷಗಾನದ ಬಾಲ ಪ್ರತಿಭೆಗಳು ಮೂಡಿಬರಲು ಸಹಕಾರಿಯಾಗಿದೆ ಎಂದು ರೋಟರಿ ಸಹಾಯಕ ಗವರ್ನರ್ ನವೀನ್ ಕುಮಾರ್ ಹೇಳಿದರು.
ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ, ಯಕ್ಷನಂದನ ಪಿವಿ ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ, ಯಕ್ಷಗಾನ ಕಲಾ ಮಂಡಳಿ ಎನ್.ಎಂ.ಪಿ.ಟಿ. ರೋಟರಿ ಕ್ಲಬ್ ಮಂಗಳೂರು ಪೋರ್ಟ್‌ಟೌನ್ ಸಹಭಾಗಿತ್ವದಲ್ಲಿ ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣದಲ್ಲಿ ನಡೆದ ಪಣಂಬೂರು ಸಂಕ್ರಾಂತಿ ಉತ್ಸವ-2018ರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ ನೀತಿಯಲ್ಲಿ ಗೊಂದಲ
ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಪಠ್ಯಕ್ರಮ ಇತ್ಯಾದಿ ಮಧ್ಯೆ ಸರಕಾರದ ಶಿಕ್ಷಣ ನೀತಿ ಗೊಂದಲದಿಂದ ಕೂಡಿದೆ. ಕಲೆ, ಸಾಹಿತ್ಯ ಇತ್ಯಾದಿ ಬೆಳವಣಿಗೆಗೆ ಕನ್ನಡ ಮಾಧ್ಯಮ ಶಿಕ್ಷಣದ ಅಗತ್ಯವಿದೆ ಎಂದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಕೆ., ಆಡಳಿತಾಧಿಕಾರಿ ಸದಾನಂದ ಜಿ., ಯಕ್ಷನಂದನ ಪಿವಿ ಐತಾಳ, ಇಂಗ್ಲಿಷ್ ಯಕ್ಷಗಾನ ಬಳಗದ ಡಾ| ಸತ್ಯಮೂರ್ತಿ ಐತಾಳ್, ಪಿ. ಸಂತೋಷ್ ಐತಾಳ್, ಪೋರ್ಟ್ ಟೌನ್ ರೋಟರಿ ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ತೋಟದ್, ಎನ್‌ಎಂಪಿಟಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಸುಧಾಕರ ಕಾಮತ್, ಕಾರ್ಯದರ್ಶಿ ಶಂಕರನಾರಾಯಣ ಮೈರ್ಪಾಡಿ, ವಾಣಿ ಎಸ್. ಐತಾಳ್, ಕೆ. ಸದಾಶಿವ ಶೆಟ್ಟಿ, ಪಿ. ಜಯದೇವ್ ಐತಾಳ್, ಪಿ. ಸಂಧ್ಯಾ ಐತಾಳ್, ಪಿ. ಹರಿಕೃಷ್ಣ ಐತಾಳ್, ಪಿ. ವೀಣಾ ಐತಾಳ್ ಮತ್ತಿತರರಿದ್ದರು. ಶಿವರಾಮ್ ಪಣಂಬೂರು ಪಿ. ಶ್ರೀಧರ ಐತಾಳ್, ಪಿ. ಪರಮೇಶ್ವರ ಐತಾಳ್ ಸಹಕರಿಸಿದ್ದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಬಹುಮಾನ ವಿಜೇತರು
ಭಾಷಣ ಸ್ಪರ್ಧೆ
(ಪ್ರಾಥಮಿಕ) ಅನಘ ಐತಾಳ್, ಕೇಂದ್ರೀಯ ವಿದ್ಯಾಲಯ – ಪ್ರಥಮ, ಪ್ರಹ್ಲಾದ್ ಮೂರ್ತಿ, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದಿರೆ- ದ್ವಿತೀಯ, ಪೂರ್ವಿ, ಎನ್.ಎಂ.ಪಿ.ಟಿ. ಆಂಗ್ಲ ಮಾಧ್ಯಮ ಶಾಲೆ – ತೃತೀಯ.
ಭಾಷಣ (ಪ್ರೌಢ): ಅನನ್ಯಾ ಐತಾಳ್, ಹೋಲಿ ಫ್ಯಾಮಿಲಿ ಪ್ರೌಢಶಾಲೆ ಸುರತ್ಕಲ್ – ಪ್ರಥಮ, ಪ್ರದ್ಯುಮ್ನ ಮೂರ್ತಿ, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದಿರೆ – ದ್ವಿತೀಯ, ಶಿವರಾಮ್ ಐತಾಳ್, ಎನ್. ಎಂ.ಪಿ.ಟಿ. ಪ್ರೌಢಶಾಲೆ, ಸುರತ್ಕಲ್ – ತೃತೀಯ.
ಗಾನ ನೃತ್ಯಾಭಿನಯ
(ಅಂಗನವಾಡಿ): ತಕ್ಷಿಲಾ ಎಂ. ದೇವಾಡಿಗ, ವೃಂದಾವನ ಪ್ಲೇ ಸ್ಕೂಲ್, ಕೊಂಚಾಡಿ – ಪ್ರಥಮ, ಸಚಿ, ರಾಮಕೃಷ್ಣ ಶಾಲೆ, ಮಂಗಳೂರು- ದ್ವಿತೀಯ, ಹಂಸಿಕಾ, ಕೆನರಾ, ಉರ್ವ- ತೃತೀಯ.
ರಸಪ್ರಶ್ನೆ
ಪ್ರದ್ಯುಮ್ನ ಮೂರ್ತಿ ಮತ್ತು ರೋಹಿತ್ ಪರ್‌ಡೇಕರ್, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡಬಿದಿರೆ – ಪ್ರಥಮ,
ಶಿವಶಂಕರ್ ಮತ್ತು ತರುಣ ರೈ, ಎನ್. ಎಂ.ಪಿ.ಟಿ. ಆಂಗ್ಲ ಮಾಧ್ಯಮ ಶಾಲೆ, ಪಣಂಬೂರು – ದ್ವಿತೀಯ, ಅನ್ವಿತಾ ಮತ್ತು
ದೇವಿಕಾ, ವಿದ್ಯಾದಾಯಿನಿ ಪ್ರೌಢಶಾಲೆ, ಸುರತ್ಕಲ್ – ತೃತೀಯ.
ಚಿತ್ರರಚನೆ
(ಅಂಗನವಾಡಿ): ಸಚಿ ಕೆ., ಆದರ್ಶ ವಿದ್ಯಾನಿಕೇತನ – ಪ್ರಥಮ, ವೈ. ಹಂಸಿಕಾ, ಕೆನರಾ ಉರ್ವ – ದ್ವಿತೀಯ, ಶ್ರಾವ್ಯಾ ನಾಯಕ್, ಡೆಲ್ಲಿ ಪಬ್ಲಿಕ್ ಸ್ಕೂಲ್, ಮಂಗಳೂರು – ತೃತೀಯ.
ಪೌರಾಣಿಕ ವೇಷ ಸ್ಪರ್ಧೆ
ಹಿರಿಯ ಪ್ರಾಥಮಿಕ: ಮಂದಾರ, ರೋಟರಿ ಸ್ಕೂಲ್, ಮೂಡಬಿದಿರೆ-ಪ್ರಥಮ, ನಂದನೇಶ ಹೆಬ್ಟಾರ್, ಎನ್‌ಐಟಿಕೆ ಸುರತ್ಕಲ್ – ದ್ವಿತೀಯ, ಅಭಿನವಿ ಹೊಳ್ಳ, ಅಂಕುರ್ ಸ್ಕೂಲ್, ಕುಳಾಯಿ – ತೃತೀಯ.
ಪ್ರೌಢಶಾಲೆ: ಸುಹಾಸ್, ಡಿ. ಮಧು ಸೂದನ್ ಕುಶೆ, ಹೈಸ್ಕೂಲ್ – ಪ್ರಥಮ, ಅನಂತಕೃಷ್ಣ ಹೊಳ್ಳ, ವಿದ್ಯಾದಾಯಿನಿ
ಸುರತ್ಕಲ್ – ದ್ವಿತೀಯ, ಟಿ.ಎಂ. ಶ್ರವಣ್, ಎನ್.ಐ.ಟಿ.ಕೆ. ಸುರತ್ಕಲ್ – ತೃತೀಯ.
ಸಮ್ಮಾನ
ಕಿತ್ತೂರು ರಾಣಿ ಚೆನ್ನಮ್ಮ ಯುವ ಪ್ರಶಸ್ತಿ ವಿಜೇತೆ, ದ.ಕ. ರಾಜ್ಯೋತ್ಸವ ಜಿಲ್ಲಾ ಪುರಸ್ಕಾರ ವಿಜೇತ ಯುವ ಪ್ರತಿಭೆ ಪಿ.ಅನನ್ಯಾ ಐತಾಳ್ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.