ಪಿಡಿಒ, ಕಾರ್ಯದರ್ಶಿ ವರ್ಗ-ನಿಯೋಜನೆಗೆ ಬ್ರೇಕ್
Team Udayavani, Dec 11, 2018, 10:36 AM IST
ಮಂಗಳೂರು: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಬೇರೆಡೆಗೆ ನಿಯೋಜನೆ ಯಾ ವರ್ಗಾವಣೆ ಆಗುವುದರಿಂದ ಗ್ರಾ.ಪಂ.ಗಳಲ್ಲಿ ಕೃತಕ ಸಿಬಂದಿ ಕೊರತೆ ಸೃಷ್ಟಿಯಾಗಿ ಜನರ ಕೆಲಸಗಳು ವಿಳಂಬವಾಗುವುದಕ್ಕೆ ಇನ್ನು ತಡೆ ಬೀಳಲಿದೆ.
ಗ್ರಾ.ಪಂ.ಗೆ ನೇಮಕವಾದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕಸಹಾಯಕರನ್ನು ಇನ್ನು ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ ಅಥವಾ ನಿಯೋಜನೆ ಮಾಡುವಂತಿಲ್ಲ. ಈಗಾಗಲೇ ವರ್ಗ ಅಥವಾ ನಿಯೋಜನೆಗೊಂಡವರನ್ನು ತತ್‌ಕ್ಷಣವೇ ಮೂಲ ಸ್ಥಾನಗಳಿಗೆ ಹಿಂದಿರುಗಬೇಕೆಂದು ಸರಕಾರ ನೀಡಿರುವ ಆದೇಶ ಇದಕ್ಕೆ ಕಾರಣ. ಕಾರ್ಯದರ್ಶಿ ಯಾ ಪಿಡಿಒ ಇಲ್ಲ ಎಂಬ ಸಬೂಬಿಗೆ ಇನ್ನು ಮುಕ್ತಿ ದೊರೆಯಲಿದೆ.
ಗ್ರಾ.ಪಂ.ಗೆ ನೇಮಕವಾದ ಸಿಬಂದಿಯನ್ನು ಜಿ.ಪಂ. ಅಥವಾ ತಾ.ಪಂ.ಗಳಲ್ಲಿ ಸಿಬಂದಿ ಕೊರತೆಯ ನೆಪ ಹೇಳಿ ಅಲ್ಲಿಗೆ ನೇಮಿಸಲಾದ ಪ್ರಕರಣಗಳು ಎಷ್ಟೋ ಇವೆ. ಸರಕಾರದ ಇತರ ಇಲಾಖೆಗಳಿಗೂ ನೇಮಕ ಮಾಡಿದ ಬಗ್ಗೆ ದೂರುಗಳಿದ್ದವು. ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 25ರಷ್ಟು ಗ್ರಾ.ಪಂ.ಗಳಲ್ಲಿ ಇಂತಹ ಸಮಸ್ಯೆ ಇದೆ. ರಾಜಕೀಯ ಒತ್ತಡ ಸಹಿತ ಹಲವು ಕಾರಣಗಳಿಂದ ಗ್ರಾ.ಪಂ. ಅಧಿಕಾರಿಗಳ ಸ್ಥಳೀಯ ವರ್ಗಾವಣೆಯೂ ಸ್ಥಳೀಯಾ ಡಳಿತಗಳಿಂದ ನಡೆಯುತ್ತಿದೆ. ಇದ ರಿಂದ ಗ್ರಾ.ಪಂ.ಗಳಲ್ಲಿ ಸಿಬಂದಿ ಕೊರತೆ ಉಂಟಾಗಿ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಇದನ್ನು ಮನಗಂಡಿ ರುವ ಸರಕಾರ ಈ ಆದೇಶ ಹೊರಡಿಸಿದೆ.
ಒಂದು ವೇಳೆ ಹುದ್ದೆಗಳು ಖಾಲಿ ಇದ್ದು, ಕಾರ್ಯನಿರ್ವಹಣೆಗೆ ತೊಂದರೆ ಯಾಗಿದ್ದಲ್ಲಿ ಸಮಾಂತರ ವೇತನ ಶ್ರೇಣಿ ಹೊಂದಿರುವ ಪಿಡಿಒಗಳು, ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ದ್ವಿ. ದರ್ಜೆ ಲೆಕ್ಕಸಹಾಯಕರನ್ನು ಸೀಮಿತವಾಗಿ ನಿಯೋಜಿಸುವಂತೆ ಸೂಚಿಸಲಾಗಿದೆ.
ಅನುಮತಿ ಅಗತ್ಯ
ಅನ್ಯ ಇಲಾಖೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಗ್ರಾ.ಪಂ. ಸಿಬಂದಿಯ ನಿಯೋಜನೆಯೂ ರದ್ದಾಗಿ ಅವರು
ಮೂಲಸ್ಥಾನಗಳಲ್ಲಿ ವರದಿ ಮಾಡಿಕೊಳ್ಳ ಬೇಕಿದೆ. ಹೊರಜಿಲ್ಲೆಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಸರಕಾರಿ ಆದೇಶದ ಅನ್ವಯ ನಿಯೋಜನೆ ಮೇಲೆ ಕಾರ್ಯನಿರ್ವಹಿ ಸುವ ಹಾಗೂ ಜಿಲ್ಲೆಯ ಒಳಗೆ ತಾಲೂಕು ಹಾಗೂ ಇತರ ಗ್ರಾ.ಪಂ.ನಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಸಿಬಂದಿಗೂ ಈ ಆದೇಶ ಅನ್ವಯವಾಗು
ತ್ತದೆ. ಇನ್ನು ಮುಂದೆ ಸರಕಾರದ ಪೂರ್ವ ಅನುಮೋದನೆ ಇಲ್ಲದೆ ಜಿ.ಪಂ./ತಾ. ಪಂ. ಮಟ್ಟದಲ್ಲಿ ಯಾವುದೇ ರೀತಿಯ ವರ್ಗಾವಣೆ ಯಾ ನಿಯೋಜನೆ ಮಾಡಬಾರದು ಎಂದೂ ಸೂಚನೆ ನೀಡಲಾಗಿದೆ.
ಯಾರಿಗೆಲ್ಲ ರಿಯಾಯಿತಿ?
ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು, ಸಚಿವರು, ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಮಂಜೂರಾದ ಹುದ್ದೆಯಡಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪಿಡಿಒ/ಕಾರ್ಯದರ್ಶಿ ಹಾಗೂ ದ್ವಿ.ದ. ಲೆಕ್ಕ ಸಹಾಯಕರಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ.
ಪಿಡಿಒ “ಪ್ರಭಾರ’ ಕಾರ್ಯಕ್ಕೆ ಸಮ್ಮತಿ
ಸರಕಾರದ ಹೊಸ ಆದೇಶದಂತೆ, ಪಿಡಿಒ ಹುದ್ದೆ ನಿವೃತ್ತಿ, ಅಮಾನತು ಹಾಗೂ ಇತರ ಕಾರಣಗಳಿಗೆ ತೆರವಾದಲ್ಲಿ, ಆ ಗ್ರಾ.ಪಂ.ನಲ್ಲಿ ಗ್ರೇಡ್-1 ಕಾರ್ಯದರ್ಶಿ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಪ್ರಭಾರವಾಗಿ ಪಿಡಿಒ ಹುದ್ದೆಯನ್ನು ವಹಿಸಬಹುದು. ಪೂರ್ಣಕಾಲಿಕ ಗ್ರೇಡ್-1 ಕಾರ್ಯದರ್ಶಿ ಇಲ್ಲದಿದ್ದಲ್ಲಿ ಹತ್ತಿರದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಹೆಚ್ಚುವರಿ ಪ್ರಭಾರ ವಹಿಸಬಹುದು. ಆದರೆ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿ. ದರ್ಜೆ ಲೆಕ್ಕ ಸಹಾಯಕರಿಗೆ ಪಿಡಿಒ ಹುದ್ದೆ ಪ್ರಭಾರ ವಹಿಸುವಂತಿಲ್ಲ.
ಒಂದೆರಡು ತಿಂಗಳಲ್ಲಿ ಪರಿಹಾರ
ಪಿಡಿಒ, ಕಾರ್ಯದರ್ಶಿ ಗಳನ್ನು ಸ್ಥಳೀಯ ಮಟ್ಟ ದಲ್ಲಿ ವರ್ಗಾವಣೆ, ನಿಯೋಜನೆ ಮಾಡುವಂತಿಲ್ಲ ಎಂದು ಸರಕಾರದ ಆದೇಶ ಬಂದಿದೆ. ಹೀಗಾಗಿ ಜಿ.ಪಂ., ತಾ.ಪಂ.ನಲ್ಲಿ ನಿಯೋಜನೆಗೊಂಡ ಪಂಚಾಯತ್ ಅಧಿಕಾರಿಗಳ ವಿವರವನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲಿಗೆ ಪರ್ಯಾಯವಾಗಿ ಇತರರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದೆರಡು ತಿಂಗಳಿನಲ್ಲಿ ಈ ವಿಚಾರ ಪರಿಹಾರವಾಗಲಿದೆ.
ಡಾ| ಸೆಲ್ವಮಣಿ, ಜಿ.ಪಂ. ಸಿಇಒ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.