“ಪ್ರತಿ ವಾರ ಪೊಲೀಸ್‌ಲೇನ್ ಸ್ವಚ್ಛಗೊಳಿಸಿ’
ಪಾಂಡೇಶ್ವರ: ಪುಟಾಣಿ ಪಾರ್ಕ್ ಉದ್ಘಾಟನೆ
Team Udayavani, May 6, 2019, 6:00 AM IST
ಪಾಂಡೇಶ್ವರ: ಪೊಲೀಸ್‌ಲೇನ್ ಸ್ವಚ್ಛತೆ ಕಾಪಾಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ ಇಲ್ಲಿನ ನಿವಾಸಿಗಳು ಸ್ವಚ್ಛತಾ ಕಾರ್ಯ ನಡೆಸುವಂತೆ ಅಧಿಕೃತ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಹೇಳಿದರು.
ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ಅಡಿಯಲ್ಲಿ ಪಾಂಡೇಶ್ವರ ಪೊಲೀಸ್ ಲೇನ್‌ನಲ್ಲಿ ನವೀಕೃತ ಚಿಣ್ಣರ ಪಾರ್ಕ್‌ನ್ನು ಅವರು ರವಿವಾರ ಉದ್ಘಾಟಿಸಿದರು.
ಸ್ವಚ್ಛ ಭಾರತಕ್ಕೆ ಕೊಡುಗೆಯಾಗಿ ರಾಮಕೃಷ್ಣ ಮಿಷನ್ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಸ್ವಚ್ಛತೆಯ ವಿಷಯದಲ್ಲಿ ಇಲ್ಲಿ ನಡೆಯುವಂತಹ ಕೆಲಸ ಇನ್ನೆಲ್ಲೂ ಕಾಣ ಸಿಗುವುದಿಲ್ಲ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಸ್ವಚ್ಛ ಸಮಾಜ, ಸ್ವಚ್ಛ ದೇಶ ನಿರ್ಮಾಣ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ನೈರ್ಮಲ್ಯ ಕಾಪಾಡಿ
ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತ ಕಾಮಾನಂದ ಸ್ವಾಮೀಜಿ ಅವರು ಮಾತನಾಡಿ, ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಬೇಕೆಂಬ ಉದ್ದೇಶದಿಂದ ಪಾರ್ಕ್‌ನ್ನು ನವೀಕರಣ ಮಾಡಿ, ಜಾಗೃತಿ ಚಿತ್ರ ಸಂದೇಶಗಳನ್ನು ರಚಿಸಲಾಗಿದೆ. ನಗರದ ನೈರ್ಮಲ್ಯ ಕಾಪಾಡಲು ಸಾರ್ವಜನಿಕರು ಒಂದಾಗಬೇಕು ಎಂದು ಆಶಿಸಿದರು.
ಮಾಜಿ ಕಾರ್ಪೊರೇಟರ್ ದಿವಾಕರ್, ಸಮಾಜ ಸೇವಕ ರಾಜಶೇಖರ್ ಮಳಲಿ, ವಿ.ಪ. ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಸಂಯೋ ಜಕರಾದ ದಿಲ್‌ರಾಜ್ ಆಳ್ವ, ಉಮಾ ನಾಥ್ ಕೋಟೆಕಾರ್ ಉಪಸ್ಥಿತರಿದ್ದರು. ಸಂತೋಷ್ ನಿರೂಪಿಸಿದರು.
ಹಂತ ಹಂತವಾಗಿ ಸ್ವಚ್ಛತೆ
ಸ್ವಚ್ಛ ಮಂಗಳೂರು ಅಭಿಯಾನ ಸಂಯೋಜಕ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರು ಮಾತನಾಡಿ,ನಗರದಲ್ಲಿ ಪಾಳುಬಿದ್ದ ಪುಟಾಣಿ ಪಾರ್ಕ್‌ಗಳು ಇನ್ನೂ ಇವೆ. ಕೆಲವನ್ನು ಈಗಾಗಲೇ ಗುರುತಿಸಲಾಗಿದ್ದು, ಹಂತ ಹಂತವಾಗಿ ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.