ಪರೇಶ ಮೇಸ್ತ ನಿಗೂಢ ಸಾವು, ಶೀಘ್ರ ತನಿಖೆಗೆ ಆಗ್ರಹಿಸಿ ಮನವಿ
Team Udayavani, Dec 28, 2017, 12:27 PM IST
ಬಂಟ್ವಾಳ: ಹಿಂದೂ ನೇತಾರರ ಹತ್ಯೆಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಬಂಟ್ವಾಳದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಡಿ. 27ರಂದು ಮನವಿ ನೀಡಿತು.
ಹೊನ್ನಾವರದ ಕೋಮುಗಲಭೆಯಲ್ಲಿ 18 ವರ್ಷದ ಯುವಕ ಪರೇಶ ಮೇಸ್ತ ಅವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ರಾಜ್ಯ ಸರಕಾರ ಸಹಜ ಸಾವು ಎಂದು ಪ್ರಕರಣವನ್ನು ತಿರುಚಲು ಪ್ರಯತ್ನಿಸಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಹಿಂದೂ ನಾಯಕರ ಹತ್ಯೆಯಾಗಿದೆ. ರಾಜ್ಯ ಸರಕಾರ ಮುಸ್ಲಿಂ ತುಷ್ಟೀಕರಣ ನೀತಿ ಮತ್ತು ಹಿಂದೂ ವಿರೋಧಿ ಧೋರಣೆಯನ್ನೇ ಮುಂದುವರಿಸಿದೆ. ಇದುವರೆಗೆ ನಡೆದ ಹಿಂದೂ ನಾಯಕರ ಹತ್ಯೆಗೆ ವಿಶೇಷ ತನಿಖಾ ದಳ ನೇಮಿಸಬೇಕು. ತನಿಖೆಗಳ ಆಧಾರದಲ್ಲಿ ಹಿಂದೂ ನಾಯಕರಿಗೆ ಸೂಕ್ತ ಭದ್ರತೆಯನ್ನು ಪೊಲೀಸ್ ಇಲಾಖೆ ಕೂಡಲೇ ಕಲ್ಪಿಸಬೇಕು. ತನಿಖೆಗೆ ಸಂಬಂಧಿಸಿದಂತೆ ಪೊಲೀಸರ ಹೇಳಿಕೆ ಮತ್ತು ಅವರ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಲಾಯಿತು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕಿರಣ್ ಕುಮಾರ್, ಬಜರಂಗದಳದ ಅಶೋಕ್ ಸರಪಾಡಿ, ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಲೋಹಿತ್ ಪಣೋಲಿಬೈಲು, ದಕ್ಷಣ್ ಮಿತ್ತಮಜಲು, ಗಣೇಶ್ ಕಾರಾಜೆ, ಗಿರೀಶ್ ಸರಪಾಡಿ, ಅಮೃತ್ ಶಾಂತಿನಗರ, ರಾಮ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
MUST WATCH
ಹೊಸ ಸೇರ್ಪಡೆ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.