ನೋ ಪಾರ್ಕಿಂಗ್‌ನಲ್ಲೇ ವಾಹನ ನಿಲುಗಡೆ
Team Udayavani, Mar 7, 2018, 12:49 PM IST
ನಗರ : ಸೂಚನ ಫಲಕ ಅಳವಡಿಕೆಗೆ ನಗರಸಭೆ ಒಂದಷ್ಟು ಅನುದಾನ ಮೀಸಲಿರಿಸಿದೆ. ಆದರೆ ಅದು ಯಾವಾಗ ಜಾರಿ ಬರುತ್ತದೋ ಗೊತ್ತಿಲ್ಲ. ಆದರೆ ಇರುವ ಸೂಚನ ಫಲಕಗಳು ದಾರಿ ತಪ್ಪಿಸುವಂತಿವೆ.
ಪುತ್ತೂರಿನ ಕಿಲ್ಲೆ ಮೈದಾನದಿಂದ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯ ಅವಸ್ಥೆ ಇದು. ತುರ್ತು ಸಂದರ್ಭಕ್ಕೆ 108 ಆ್ಯಂಬುಲೆನ್ಸ್ ಸೇರಿದಂತೆ ಇತರ ವಾಹನಗಳು ತೆರಳಲೇ ಬೇಕಾದ ಅಗತ್ಯ ರಸ್ತೆಯಿದು. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಇದು ಸಂಚಾರಕ್ಕೆ ಮುಕ್ತ ಆಗಿರಬೇಕು. ಆದರೆ ಇದಕ್ಕೆ ವಿರುದ್ಧ ಪರಿಸ್ಥಿತಿ ಇದೆ. ಎರಡೂ ಬದಿಯೂ ವಾಹನ ಪಾರ್ಕಿಂಗ್ ಮಾಡಿರುವುದರಿಂದ ವಾಹನಗಳೆರಡು ಎದುರು- ಬದುರು ಬಂದರೆ ಜಾಗವೇ ಇಲ್ಲ. ಸೋಮವಾರ ಸಂತೆಯ ದಿನವಂತೂ ಇಲ್ಲಿಯ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ.
ಆಸ್ಪತ್ರೆ ಎಂಬ ಕಾರಣಕ್ಕೋ ಏನೋ ಈ ರಸ್ತೆಯಲ್ಲಿ ನೋ ಪಾರ್ಕಿಂಗ್ ಸೂಚನ ಫಲಕ ಹಾಕಲಾಗಿದೆ. ಆದರೆ ಅದನ್ನು ರಸ್ತೆಗೆ ಬೆನ್ನು ಹಾಕಿ ನಿಲ್ಲಿಸಲಾಗಿದೆ. ತುಂಡಾದ ಕಾರಣ, ಪಕ್ಕದ ಆವರಣ ಗೋಡೆಗೆ ಕಬ್ಬಿಣದ ಸರಿಗೆಯಿಂದ ಬಿಗಿದು ಹಾಕಲಾಗಿದೆ. ಹೊಸತಾಗಿ ಬರುವವರಿಗೆ ಇದು ನೋ ಪಾರ್ಕಿಂಗ್ ಜಾಗ ಎಂದು ತಿಳಿಯುವುದೇ ಇಲ್ಲ. ಒಂದೊಮ್ಮೆ ಹೊರಜಿಲ್ಲೆಯ ಪೊಲೀಸರು ಇದೇ ಜಾಗದಲ್ಲಿ ವಾಹನ ನಿಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.