ಸಂದಿಗ್ಧ ಕಾಲದಲ್ಲಿ ಜ್ಞಾನಜ್ಯೋತಿಯಾಗಿದ್ದ ಪರೋಕಿಯಲ್ ಹಿ.ಪ್ರಾ.ಶಾಲೆ
ಆರಂಭದಲ್ಲಿ ಚರ್ಚ್ ಎಲಿಮೆಂಟರಿ ಶಾಲೆ ಎಂದು ಹೆಸರು ಪಡೆದಿತ್ತು
Team Udayavani, Nov 25, 2019, 5:54 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಬಜಪೆ: ಇಲ್ಲಿನ ಸೆಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ವಂ| ಬಿ.ಅರಾನ್ಹ ಅವರು ಬಜಪೆ ಚರ್ಚ್ ಎಲಿಮೆಂಟರಿ ಶಾಲೆಯನ್ನು 1893ರ ಜು. 1ರಂದು ಆರಂಭಿಸಿದರು. ಹರಕು, ಮುರುಕು ಕಟ್ಟಡದಲ್ಲಿ ಆರಂಭವಾದ ಬಜಪೆ ಚರ್ಚ್ ಎಲಿಮೆಂಟರಿ ಶಾಲೆಯು ಪ್ರಾರಂಭದಲ್ಲಿ 1ರಿಂದ 5ರ ವರೆಗೆ ಮಾನ್ಯತೆ ದೊರತ್ತಿತ್ತು. ಅಂತೋನಿ ಡಿ’ಕುನ್ಹ ಅವರು ಪ್ರಥಮ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಶತಮಾನೋತ್ಸವ ಸ್ಮಾರಕ ಕಟ್ಟಡ
ಒಂದೆಡೆ ಆಂಗ್ಲರ ದಬ್ಟಾಳಿಕೆ ಮತ್ತೂಂದೆಡೆ ಅನಕ್ಷರತೆ, ಬಡತನ, ಸಾಮಾಜಿಕ ಪಿಡುಗುಗಳಿಂದ ಜನರು ಸಂದಿಗ್ಧ ಪರಿಸ್ಥಿತಿಯ ಕಾಲದಲ್ಲಿ ಈ ಶಾಲೆ ಜ್ಞಾನಜ್ಯೋತಿಯಾಗಿ ಆರಂಭಗೊಂಡಿತ್ತು. ಧರ್ಮಗುರು ವಂ| ಎ. ಕುಲಾಸೊ ಅವರು ಸಂಚಾಲಕತ್ವದಲ್ಲಿ ಸ್ವಂತ ಕಟ್ಟಡವನ್ನು ಹೊಂದಿತ್ತು. 1926ರಲ್ಲಿ ಧರ್ಮಗುರು ವಂ| ಲಿಯೋ ಸಲ್ಡಾನ್ಹಾ ಅವರು ಬಾಲಿಕೆಯರಿಗೆ ಪ್ರತ್ಯೇಕ ವಿದ್ಯಾಸಂಸ್ಥೆಯಾದ ಲಿಟ್ಲ ಫÉವರ್ ಶಾಲೆಯನ್ನು ಸ್ಥಾಪಿಸಿದ್ದರು. 1927 ಬಜಪೆ ಚರ್ಚ್ ಎಲಿಮೆಂಟರಿ ಶಾಲೆಯು ಪರೋಕಿಯಲ್ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣಗೊಂಡಿತು.
1955ರಲ್ಲಿ 6 ಮತ್ತು 7ನೇ ತರಗತಿಗಳಿಗೆ ಸರಕಾರದಿಂದ ಖಾಯಂ ಮಾನ್ಯತೆ ಸಿಕ್ಕಿತು. ವಂ| ಲಿಯೋ ಕರ್ವಾಲೋ ಅವರ ಸಂಚಾಲಕತ್ವದಲ್ಲಿ ಶಾಲಾ ಸಭಾಗೃಹ ಹಾಗೂ ಎಲ್ಲ ತರಗತಿಗಳಿಗೆ ಖಾಯಂ ಮಂಜೂರಾತಿ ದೊರೆಯಿತು. ವಂ| ಅವೆಲಿನ್ ಡಿ’ಸೋಜಾ ಅವರ ಸಂಚಾಲಕತ್ವದಲ್ಲಿ ಶಾಲಾ ಕಟ್ಟಡ ವಿಸ್ತರಿಸಲಾಯಿತು. ಶತಮಾನೋತ್ಸವದ ನೆನಪಿಗೆ 1993ರಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿದ್ದು 1995ರ ಜ. 29ರಂದು ಶತಮನೋತ್ಸವ ಸ್ಮಾರಕ ಕಟ್ಟಡ ಉದ್ಘಾಟನೆಗೊಂಡಿತ್ತು.
ವಂದನೀಯರಾದ ಕಾಶ್ಮೀರ್ ಮಿನೇಜಸ್, ಲಿಯೋ ಕರ್ವಾಲೋ, ಆವೆಲಿನ್ ಡಿ’ಸಿಲ್ವಾ, ನೊರ್ಬರ್ಟ್ ಡಿ’ಸೋಜಾ, ಥೋಮಸ್ ಡೆಸಾ, ಜೆ.ಜೆ. ಸಲ್ಡಾನ್ಹಾ,ಇಜಿದೊರ್ ನೊರಾನ್ಹಾ, ನೋರ್ಬರ್ಟ್ ಲೋಬೋ, ಹೆನ್ರಿ ಮಚಾದೋ, ಮಥಾಯಸ್ ಪಿರೇರಾ, ಲಿಯೋ ಲೋಬೋ ಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಮುಖ್ಯೋಪಾಧ್ಯಾಯರಾಗಿ ಆ್ಯಂಟಿನಿ ಡಿಕುನ್ಹಾ, ಶ್ರೀನಿವಾಸ ರಾವ್, ಫ್ರಾನ್ಸಿಸ್ ಡಿಕ್ರುಜ್, ಜೋನ್ ಬಿ. ಮೊಂತೇರೋ, ಸೆಬೆಸ್ಟಿಯನ್ ಬ್ರಿಟ್ಟೊ,ಲೆತ್ತಿಶಿಯಾ ಸಿಕ್ವೇರ, ಗಟ್ರೂಡ್ ಬ್ರಾಗ್ಸ್, ಜಾರ್ಜ್ ಡಿ’ಸೋಜಾ, ವಿನ್ನಿ ಬ್ರಿಟ್ಟೋ, ರವಿರಾಜ್ ಕಡಂಬ, ಕೊಸೆಸ್ ಡಿಸೋಜ, ಜುಲಿಯಾನ ಡಿಕುನ್ಹಾ ಸೇವೆ ಸಲ್ಲಿಸಿದ್ದಾರೆ.
1972ರ ವೇಳೆ ಸುಮಾರು 900ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಹಾಗೂ 22 ಮಂದಿ ಶಿಕ್ಷಕರು ಈ ಶಾಲೆಯಲ್ಲಿ ಬೋಧಿಸುತ್ತಿದ್ದರು.
ಸದ್ಯ ಈ ಶಾಲೆಯಲ್ಲಿ ಮುಖ್ಯೋಧ್ಯಾಯಿನಿ ಡೈನಾ ರೋಡ್ರಿಗಸ್ ಸಹಿತ 4 ಶಿಕ್ಷಕರು, 244 ವಿದ್ಯಾರ್ಥಿಗಳಿದ್ದಾರೆ. ಈಗ ಈ ಶಾಲೆ ಅನುದಾನಿತ ಪರೋಕಿಯಲ್ ಹಿರಿಯ ಪ್ರಾಥಮಿಕ ಶಾಲೆ ಎಂದು ಕೆರೆಯಲ್ಪಡುತ್ತದೆ. ಕೆಥೋಲಿಕ್ ಶಿಕ್ಷಣ ಮಂಡಳಿಯಿಂದ ನಡೆಸಲ್ಪಡುವ ಶಾಲೆಗಳಲ್ಲಿ ಇದು ಒಂದು.
ಪರಿಸರದಲ್ಲಿ ಈಗ 6 ಶಾಲೆಗಳಿವೆ. ಪೆರ್ಮುದೆ, ಭಟ್ರಕೆರೆ, ಈಶ್ವರ ಕಟ್ಟೆ, ಪೆರಾರ, ಕೊಂಚಾರ್,ಪೊರ್ಕೋಡಿ, ಕೊಳಂಬೆ, ಮರವೂರುಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಕ್ರೀಡೆಯಲ್ಲಿ ತಾಲೂಕು,ಜಿಲ್ಲಾ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಶಾಲೆಯಲ್ಲಿ ಸುಸಜ್ಜಿತ ಮೈದಾನ, ಕಂಪ್ಯೂಟರ್ ಶಿಕ್ಷಣ ಮತ್ತು ಅಕ್ಷರ ದಾಸೋಹ ಸೌಲಭ್ಯವಿದೆ. ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಸಾಧನೆ ಮೆರೆದು ರಾಜ್ಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ.
ಹಳೆ ವಿದ್ಯಾರ್ಥಿಗಳು
ನಿವೃತ್ತ ಸೇನಾನಿಗಳಾದ ಜಯಂತ್ ಸುವರ್ಣ, ಲೋಹಿತ್ ಸುವರ್ಣ, ಉದ್ಯಮಿ ಪ್ರಕಾಶ್ ರಾಯ್ ಸಿಮ್ಸ್‌ನ್, ಶಾಂತಾರಾಮ್ ಕುಡ್ವ ಮೊದಲಾದವರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.
ಶಾಲಾ ಸಂಚಾ ಲಕ ವಂ| ಡಾ| ರೋನಾಲ್ಡ್ ಕುಟಿನ್ಹೊ ಹಾಗೂ ಆಡಳಿತ ಮಂಡಳಿ ಶಾಲಾ ಬೆಳೆವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಜತೆ ಶಿಕ್ಷಕ ವೃಂದ ಸಹಕಾರ ನೀಡುತ್ತಿದೆ. ಶಾಲೆ ಎಲ್ಲ ಸೌಲಭ್ಯಗಳನ್ನು ಹೊಂದಿದೆ.
-ಡೈನಾ ರೊಡ್ರಿಗಸ್,
ಶಾಲಾ ಮುಖ್ಯೋಪಾಧ್ಯಾಯಿನಿ
ಮರದ ನೆರ ಳಿನಲ್ಲಿ ಮತ್ತು ತೋಟ, ಚರ್ಚ್ ನೊಳಗೆ ಶಾಲೆಗಳು ನಡೆಯಿತ್ತಿತ್ತು. ಶಿಸ್ತುಬದ್ಧ ಜೀವನಕ್ಕೆ ಪಂಚಾಗ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಗೌರವದ ಸಂಬಂಧವಿಟ್ಟು ಅದು ಇಂದಿಗೂ ಇದೆ.
– ಜಯಂತ್ ಸುವರ್ಣ ಅಂಬಾಳ್, ಹಳೆ ವಿದ್ಯಾರ್ಥಿ
-ಸುಬ್ರಾಯ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.