ನಾರಾವಿ ಪರುಷಗುಡ್ಡೆ ಬಸದಿ: ಸರ್ವಧರ್ಮ ಸಮ್ಮಿಲನ
Team Udayavani, Feb 22, 2017, 3:04 PM IST
ಬೆಳ್ತಂಗಡಿ : ಭಾರತೀಯ ಜೈನ್‌ಮಿಲನ್ ಮತ್ತು ಯುವ ಜೈನ್‌ಮಿಲನ್ ಪರುಷಗುಡ್ಡೆ ಶಾಖೆ ಇದರ ವತಿಯಿಂದ ಫೆಬ್ರವರಿ ತಿಂಗಳ ಮಿಲನ್ ಸಭೆ ಹಾಗೂ ಸರ್ವಧರ್ಮ ಸಮ್ಮಿಲನ-2017 ಎಂಬ ಕಾರ್ಯಕ್ರಮ ಪರುಷಪದ್ಮಾಂಬ ಸಭಾಭವನದಲ್ಲಿ ಜರಗಿತು.
ಪ್ರಮುಖ ನಾಲ್ಕು ಧರ್ಮಗಳಾದ ಕ್ರೈಸ್ತ ಧರ್ಮದ ಕುರಿತಾಗಿ ನಾರಾವಿ ಸಂತ ಅಂತೋನಿ ಮಹಾವಿದ್ಯಾಲಯದ ಪ್ರಾಂಶುಪಾಲ ಫಾ| ಅರುಣ್ ವಿಲ್ಸನ್ ಲೋಬೋ, ಹಿಂದೂ ಧರ್ಮದ ಕುರಿತಾಗಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ| ಎ. ಕೃಷ್ಣಪ್ಪ ಪೂಜಾರಿ, ಇಸ್ಲಾಂ ಧರ್ಮದ ಕುರಿತಾಗಿ ತಾ| ಸುನ್ನೀ ಸಂಯುಕ್ತ ಜಮಾಅತ್ ಮಾಧ್ಯಮ ಕಾರ್ಯದರ್ಶಿ ಅಚ್ಚು ಮುಂಡಾಜೆ, ಜೈನ ದರ್ಮದ ಕುರಿತಾಗಿ ಜೈನ ವಿದ್ವಾಂಸ ಮುನಿರಾಜ ರೆಂಜಾಳ ಅವರು ಧರ್ಮ ಸಂದೇಶ ಸೂಕ್ಷ್ಮತೆಯನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಪರುಷಗುಡ್ಡೆ ಜೈನ್ ಮಿಲನ್ ಅಧ್ಯಕ್ಷ ವಜ್ರಕುಮಾರ್ ಅಜ್ರಿ ಸ್ವಾಗತಿಸಿದರು. ಹಿರಿಯರಾದ ಗುಣಪಾಲ ಪೂವಣಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮ್ಮಾನ
ಈ ಸಂದರ್ಭ ಎಪಿಎಂಸಿ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಜೀವಂಧರ್ ಕುಮಾರ್ ನಾರಾವಿ, ವರ್ತಕರ ಕ್ಷೇತ್ರದಿಂದ ಚುನಾಯಿತರಾದ ಪುಷ್ಪರಾಜ್ ಹೆಗ್ಡೆ ಮಡಂತ್ಯಾರು ಅವರನ್ನು ಸಮ್ಮಾನಿಸಲಾಯಿತು. ವಿಶೇಷ ಉಪನ್ಯಾಸಕ್ಕಾಗಿ ಆಗಮಿಸಿದ್ದ ನಾಲ್ಕೂ ಧರ್ಮದ ಪ್ರತಿನಿಧಿಗಳನ್ನೂ ಈ ಸಂದರ್ಭ ಗೌರವಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ಸಂಯೋಜಿಸಿದರು. ವಲಯ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭ ಕೋರಿದರು. ಭಾರತಿ ಅಶೋಕ್ ಬಲ್ಲಾಳ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಅಶೋಕ್ ಕುಮಾರ್ ಜೈನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.