ಪುನರೂರು ಪಟೇಲ್ ವೆಂಕಟೇಶ್ ರಾವ್ ನಿಧನ
Team Udayavani, Jul 24, 2019, 8:43 PM IST
ಕಿನ್ನಿಗೋಳಿ: ಪುನರೂರು ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್(91ವರ್ಷ) ಅವರು ಜು. 24 ರಂದು ಪುನರೂರು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಂಗಳೂರಿನ ನ್ಯೂಸ್ವಾಗತ್ ಹೊಟೇಲುಗಳ ಮಾಲಿಕ ವಾಸುದೇವ ರಾವ್ ಸಹಿತ ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಏಳು ದಶಕಗಳಿಂದ ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ತಮ್ಮ ನೇತೃತ್ವದಲ್ಲಿ ಪುನರೂರು ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನಾಲ್ಕು ಬ್ರಹ್ಮಕಲಶಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಹಿಂದೆ ತಾಳಿಪಾಡಿ ಗ್ರಾಮದ ಪಟೇಲರಾಗಿದ್ದರು. ಅಲ್ಲಿನ ಪುನರೂರು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆಗಿ ವೃತ್ತಿ ನಿರ್ವಸಿದ್ದಾರೆ. ತಮ್ಮ ಸಹೋದರ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಸಹಭಾಗಿತ್ವದಲ್ಲಿ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಡಾ. ಮೋದಿಯ ಕಣ್ಣಿನ ಚಿಕಿತ್ಸೆ ಶಿಬಿರ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಪಟೇಲರ ನೇತೃತ್ವದಲ್ಲಿ ಪುನರೂರಿನಲ್ಲಿ ಹತ್ತಾರು ಸಾಹಿತ್ಯ ಸಮ್ಮೇಳನಗಳು ಲೆಕ್ಕವಿಲ್ಲದಷ್ಟು ವಿವಿಧ ಇಲಾಖೆಗಳ ಕಾರ್ಯಾಗಾರಗಳು, ಶಿಬಿರಗಳಿಗೆ ಆಶ್ರಯದಾತರಾಗಿದ್ದ ವೆಂಕಟೇಶ ರಾಯರು ಎಲೆ ಮರೆಯ ಕಾಯಿಯಂತೆ ಇದ್ದವರು. ಒಂದೇ ದಿನ ಆರು ಮದುವೆ ನಡೆಸುವ ಕಲ್ಯಾಣ ಮಂಟಪಗಳ ವ್ಯವಸ್ಥೆಯನ್ನು ಮಾಡಿದ್ದರು. ಪುನರೂರು ದೇವಸ್ಥಾನದಲ್ಲಿ ಅಷ್ಟಮಿ ಮೊಸಡು ಕುಡಿಕೆ ಇನ್ನಿತರ ಪರ್ವಕಾಲದಲ್ಲಿ,ವಿಷೇಶ ಪೂಜೆ ನಡೆಸಿಕೊಂಡು ಬಂದಿದ್ದಾರೆ. ಉತ್ತಮ ಕೃಷಿಕರಾಗಿದ್ದರು. ಪುನರೂರಿನಲ್ಲಿ ಹವ್ಯಾಸಿ ಪುನರೂರು ಮೇಳವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪುನರೂರು ದೇವಸ್ಥಾನದಲ್ಲಿ ಅನೇಕ ಬಡಕುಟುಂಬಗಳ ಮದುವೆಗಳನ್ನು ಉಚಿತವಾಗಿ ಮಾಡಿಸಿದ ಧರ್ಮಾತ್ಮರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.