ತಾಳ್ಮೆಯಿಂದ ಸಾಧನೆ ಸುಲಭ
Team Udayavani, Apr 2, 2018, 3:34 PM IST
ಯಾವುದೇ ತೀರ್ಮಾನ ಮಾಡುವಾಗ ತಾಳ್ಮೆಯಿಂದ ಸಣ್ಣ ಸಣ್ಣ ಗುರಿಯನ್ನು ಇಟ್ಟುಕೊಂಡು ಮುಂದುವರಿದರೆ ದೊಡ್ಡ ಧ್ಯೇಯವನ್ನು ಸಾಧಿಸಬಹುದು.
ಸುಂದರ ಬದುಕು ದಿಢೀರೆಂದು ಅನುಭವಕ್ಕೆ ಬರುವುದಿಲ್ಲ. ಪ್ರೀತಿ, ಸಂತೋಷ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳನ್ನು ನಾವೇ ಸಾಧಿಸಿಕೊಳ್ಳಬೇಕು. ಹಾಗಾಗಿ ತಾಳ್ಮೆ ಬಾಳಿಗೆ ಅತೀ ಅಗತ್ಯ. ಅದಕ್ಕಾಗಿಯೇ ‘ತಾಳಿದವನು ಬಾಳಿಯಾನು’ ಎನ್ನುವ ಗಾದೆ ಮಾತೇ ರೂಢಿಯಲ್ಲಿ ಬಂದಿದೆ. ತಾಳ್ಮೆ, ಸಹನೆ, ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಎಲ್ಲ ಉತ್ತಮ ಮೌಲ್ಯಗಳು ಅನುಸರಿಸುವುದು ಕಷ್ಟ, ಆದರೆ ಸಹಿಸಿಕೊಂಡು ಯಾರು ಬದುಕು ನಡೆಸ್ತಾರೋ, ಅವರು ನಿಜವಾದ ವಿಜಯಿಗಳಾಗುತ್ತಾರೆ.
ತಂಗಾಳಿಯು ತನುವನ್ನು ತಂಪಾಗಿಸುವ ತೆರದಿ ತಾಳ್ಮೆಯು ಮನವನ್ನು ತಂಪಾಗಿಸಬಲ್ಲದು. ಯಶಸ್ಸಿನ ಶಿಖರವನ್ನೇರಲು
ಕೇವಲ ಛಲ ಮತ್ತು ಪರಿಶ್ರಮಗಳೆಂಬ ಸಲಕರಣೆಗಳಿದ್ದರೆ ಸಾಕಾಗದು, ಅವುಗಳೊಟ್ಟಿಗೆ ತಾಳ್ಮೆ ಎಂಬ ಸದ್ಗುಣವೂ ಅಗತ್ಯ.
ತಾಳ್ಮೆ ಎಂದರೆ ಕೇವಲ ಕಾಯುವಿಕೆ ಅಲ್ಲ, ಅದು ಕಾಯುವಿಕೆಯ ಪ್ರಕ್ರಿಯೆಯಲ್ಲಿನ ನಮ್ಮ ಉತ್ತಮ ನಡವಳಿಕೆ ಕೂಡ ಹೌದು. ಮೇಲ್ನೋಟಕ್ಕೆ ಅದು ಕಹಿ ಎಂದು ಕಂಡರೂ ನೀಡುವ ಫಲ ಮಾತ್ರ ಸದಾ ಸಿಹಿ. ಒಂದು ಕ್ಷಣದ ತಾಳ್ಮೆ, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ.
ತಾಳ್ಮೆ, ಸಹನೆಯನ್ನು ದೌರ್ಬಲ್ಯ ಎಂದು ಹೇಳುವವರೂ ಇದ್ದಾರೆ. ಆದರೆ ಚಿಂತಿಸಬೇಕಿಲ್ಲ. ಅದುವೇ ನಮ್ಮ ಶಕ್ತಿ ಎಂದು ಭಾವಿಸಿ ಮುಂದುವರಿಯಬೇಕು ಯಶಸ್ಸು ಲಭಿಸುತ್ತದೆ, ಸಾಮರ್ಥ್ಯದ ಬಗ್ಗೆ ಭರವಸೆ ಮೂಡುತ್ತದೆ. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರವಿದೆ ಎಂಬ ಭಾವನೆಯಿಂದ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಗಳನ್ನು ಶಾಂತಚಿತ್ತದಿಂದ ಪರಿಶೀಲಿಸಿ, ಪರಿಹರಿಸಲು ಪ್ರಯತ್ನಿಸಬೇಕು. ಆಗ ಯಶಸ್ಸು ತನ್ನಿಂದ ತಾನಾಗಿಯೇ ದೊರೆಯುತ್ತದೆ.
ಮಕ್ಕಳಿಗೆ ತಾಳ್ಮೆಯ ಮಹತ್ವ ತಿಳಿಸಿ
ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃ ಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ. ಅದಕ್ಕಾಗಿ ಚಿಕ್ಕಂದಿನಲ್ಲೇ ಮಕ್ಕಳಿಗೆ ತಾಳ್ಮೆಯ ಮಹತ್ವ ತಿಳಿಸಬೇಕಾದದ್ದು ಅತೀ ಅಗತ್ಯ. ಅದು ಅವರಿಗೆ ಹೊಸ ವಿಚಾರಗಳನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ. ಮಕ್ಕಳು ತರಗತಿಯ ಹೊರಗೆ ಕೆಲವು ವಿಚಾರಗಳನ್ನು ಕಲಿಯುತ್ತಾರೆ. ಇದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ.
ಗಣೇಶ ಕುಳಮರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.