ಹೆಲ್ಮೆಟ್ ಧರಿಸಿ ಬಂದರಷ್ಟೇ ಬಂಕ್‌ಗಳಲ್ಲಿ ಪೆಟ್ರೋಲ್
ಜಾಗೃತಿ ಆಂದೋಲನಕ್ಕೆ ಸಂಚಾರ ಪೊಲೀಸರ ಚಿಂತನೆ
Team Udayavani, Aug 6, 2019, 7:16 AM IST
ಮಹಾನಗರ: ದ್ವಿಚಕ್ರ ವಾಹನಗಳ ಅಪಘಾತಗಳಿಂದಾಗುವ ಅನಾಹುತ ತಪ್ಪಿಸುವುದಕ್ಕೆ ನಗರದಲ್ಲಿಯೂ ‘ಹೆಲ್ಮೆಟ್ ಧರಿಸಿ ಬಂದರಷ್ಟೇ ಬಂಕ್‌ಗಳಲ್ಲಿ ಪೆಟ್ರೋಲ್’ ಎನ್ನುವ ಜಾಗೃತಿ ಆಂದೋಲನವನ್ನು ಪ್ರಾರಂಭಿಸುವುದಕ್ಕೆ ಸಂಚಾರಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿ ಅಪಘಾತಗಳಾಗಿ ಸಾವು-ನೋವು ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಸುರಕ್ಷತೆಯ ಉದ್ದೇಶದಿಂದ ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಹಾಕಿದರೆ ಮಾತ್ರ ಪೆಟ್ರೋಲ್ ಎಂಬ ಜಾಗೃತಿ ಕಾರ್ಯವನ್ನು ಸಂಚಾರಿ ಪೊಲೀಸರು ಕೈಗೆತ್ತಿಗೊಂಡಿದ್ದು, ಅದಕ್ಕೆ ಉತ್ತಮ ಜನಮನ್ನಣೆ ಲಭಿಸಿದೆ.
ಈಗ ಈ ನಿಯಮವನ್ನು ನಗರದಲ್ಲಿಯೂ ಅಳವಡಿಸಲು ಸಂಚಾರಿ ಪೊಲೀಸ್ ಇಲಾಖೆಯು ಚಿಂತಿಸುತ್ತಿದ್ದು, ಅದಕ್ಕೆ ಸಾಥ್ ನೀಡಲು ದ.ಕ. ಮತ್ತು ಉಡುಪಿ ಪೆಟ್ರೋಲ್ ಮಾಲಕರ ಸಂಘ ಕೂಡ ಉತ್ಸುಕದಲ್ಲಿದೆ.
ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಳ
ನಗರದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಈ ವರ್ಷ 79 ಮಾರಣಾಂತಿಕ ಅಪಘಾತ ಮತ್ತು 525 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ.
‘ನೋ ಹೆಲ್ಮೆಟ್ ನೋ ಪೆಟ್ರೋಲ್’ ಎಂಬ ನಿಯಮ ಈಗಾಗಲೇ ಕೇರಳ, ಆಂಧ್ರಪ್ರದೇಶ ಸಹಿತ ಕೆಲವೊಂದು ರಾಜ್ಯಗಳಲ್ಲಿ ಮತ್ತು ಬೆಂಗಳೂರಿನ ಜಾರಿಯಲ್ಲಿವೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಬೇಕು ಅಂದರೆ ಹೆಲ್ಮೆಟ್ ಇರಲೆಬೇಕು. ಹೆಲ್ಮೆಟ್ ಇಲ್ಲದಿದ್ದರೆ ಬಂಕ್ ಸಿಬಂದಿ ಪೆಟ್ರೋಲ್ ಹಾಕುವುದಿಲ್ಲ.
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.