ಕಲಾಪೋಷಣೆ ಇದ್ದಲ್ಲಿ ಪ್ರತಿಭೆಗೆ ಅವಕಾಶ: ಅಭಯಚಂದ್ರ
ಪಾವಂಜೆ ಮೇಳದ ಎರಡನೇ ವರ್ಷದ ಯಕ್ಷಗಾನ ತಿರುಗಾಟ ಆರಂಭ
Team Udayavani, Nov 18, 2021, 4:17 AM IST
ಹಳೆಯಂಗಡಿ: ಕಲಾಪೋಷಣೆ ಇದ್ದಲ್ಲಿ ಮಾತ್ರ ಕಲಾವಿದರೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ. ಯಕ್ಷಗಾನ ತುಳುನಾಡಿನ ಶ್ರೀಮಂತ ಕಲೆಯಾಗಿರುವುದರಿಂದ ಎಲ್ಲರೂ ಪ್ರೋತ್ಸಾಹಿಸೋಣ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಹೇಳಿದರು.
ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಎರಡನೇ ವರ್ಷದ ತಿರುಗಾಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ ವೇದಕೃಷಿಕ ಕೆ.ಎಸ್. ನಿತ್ಯಾನಂದ, ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್, ಮೊಕ್ತೇಸರ ಶಶೀಂದ್ರಕುಮಾರ್ ಅವರು ಗೆಜ್ಜೆ ಹಾಗೂ ಹಿಮ್ಮೇಳದ ಸಾಧನಗಳನ್ನು ನೀಡಿ ಪ್ರಸಾದ ವಿತರಿಸಿದರು. ಸನ್ನಿ ಧಿಯಲ್ಲಿ ಕಲಾವಿದರು ಗೆಜ್ಜೆ ಸೇವೆ ನೀಡಿದರು. ಚೌಕಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪೂನಾದ ದಾನಿಯೊಬ್ಬರು ಬೆಳ್ಳಿಯ ತ್ರಿಶೂಲವನ್ನು ಹಸ್ತಾಂತರಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರು ವಿ.ವಿ.ಯ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ| ಗಣೇಶ್ ಅಮೀನ್ ಸಂಕಮಾರ್ ಮಾತನಾಡಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಐಎಸ್‌ಐ ಉಗ್ರ ಸೆರೆ
ಸೀತಾರಾಮ ಶೆಟ್ಟಿ ಸವಣೂರು, ಡಾ| ಎಂ.ಎಲ್. ಸಾಮಗ, ಡಾ| ಎಂ. ಪ್ರಭಾಕರ ಜೋಶಿ, ಮಟ್ಟಾರು ರತ್ನಾಕರ ಹೆಗ್ಡೆ, ರವೀಂದ್ರ ಉಳಿದೊಟ್ಟು, ಗುರ್ಮೆ ಸುರೇಶ್ ಶೆಟ್ಟಿ, ಸೌಂದರ್ಯ ರಮೇಶ್, ಪಟ್ಲಗುತ್ತು ಮಹಾಬಲ ಶೆಟ್ಟಿ, ನಕ್ರೆ ಬಾಲಕೃಷ್ಣ ಭಟ್, ರವಿಶಂಕರ್ ಶೆಟ್ಟಿ ಬಡಾಜೆ, ಯೋಗೀಂದ್ರ ಭಟ್ ಉಳಿ, ಪ್ರಸಾದ್ ಶೆಟ್ಟಿ, ಸಿ.ಎ.ದಿವಾಕರ ರಾವ್, ಡಾ| ಮನು, ಸಿ.ಎ. ಸುದೇಶ್‌ಕುಮಾರ್, ಶಂಭು ಶೆಟ್ಟಿ, ಅಡ್ಯಾರು ಮಾಧವ ನಾೖಕ್, ಸುಧಾಕರ್ ಎಸ್. ಪೂಂಜ, ಕುಡಾಲ ವೆಂಕಟ್ರಾಯ ಪೂನಾ, ಪೂರ್ಣಿಮಾ, ಜೀವನ್ ಪ್ರಕಾಶ್, ಸುಕೇಶ್ ಪಾವಂಜೆ, ಅಶ್ವಿನ್ ದೇವಾಡಿಗ, ಕುದ್ರೋಳಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಯಕ್ಷಧೃವ ಪಟ್ಲ ಫೌಂಡೇಶನ್‌ನ ಪ್ರಮುಖರು ಶುಭ ಹಾರೈಸಿದರು.
ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು. ಮೇಳದ ಕಲಾವಿದರಿಂದ ಪಾಂಡವಾಶ್ವಮೇಧ ಪ್ರಸಂಗ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.