ಕಾಳುಮೆಣಸು ಧಾರಣೆ- ಆತಂಕ ಬೇಡ: ಕೊಂಕೋಡಿ ಪದ್ಮನಾಭ
Team Udayavani, Jan 15, 2018, 10:32 AM IST
ಮಂಗಳೂರು: ಕಾಳುಮೆಣಸಿನ ಆಮದು ಮೇಲೆ ಕೆ.ಜಿ.ಗೆ 500 ರೂ. ಕನಿಷ್ಠ ಆಮದು ಸುಂಕ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳ ದಾರಿಯನ್ನು ಕಂಡುಹಿಡಿದಿದ್ದಾರೆ. ವಿಯೆಟ್ನಾಂ ದೇಶದ ಕಳಪೆ ಕಾಳುಮೆಣಸನ್ನು ಕೆ.ಜಿ.ಗೆ 130 ರೂ. ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದು, ಅಲ್ಲಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂ.ಗಳ ತೆರಿಗೆ ವಂಚನೆ ಮಾಡುತ್ತಾ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವುದು ಭಾರತದಲ್ಲಿ ಕಾಳುಮೆಣಸಿನ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂದು ಕಾಳುಮೆಣಸು ಸಮನ್ವಯ ಸಮಿತಿಯ ಸಂಚಾಲಕ-ಅಡಿಕೆ ಮಾರಾಟ ಫೆಡರೇಶನ್‌ನ ಅಧ್ಯಕ್ಷ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.
ಈ ಬಗ್ಗೆ ದಿಲ್ಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿಯ ನಿಯೋಗ ಇತ್ತೀಚೆಗೆ ಭೇಟಿ ಮಾಡಿ ಚರ್ಚೆ ನಡೆಸಿದೆ. ನಿಯೋಗದಲ್ಲಿ ಕೊಂಕೋಡಿ ಪದ್ಮನಾಭ, ಮಂಜುನಾಥ, ಪ್ರದೀಪ್ ಪೂವಯ್ಯ, ಜಯರಾಂ, ಎಡಗೆರೆ ಸುಬ್ರಹ್ಮಣ್ಯ, ದಯಾನಂದ ಹೆಗ್ಡೆ, ಪ್ರಮೋದ, ಜಿ.ಎಂ. ಹೆಗಡೆ, ಎಂ.ಆರ್. ಹೆಗಡೆ ಇದ್ದರು.
ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ, ವಿಯೆಟ್ನಾನಿಂದ ಶ್ರೀಲಂಕಾ ಮೂಲಕ ಆಮದಾಗುವ ಕಾಳುಮೆಣಸಿನಲ್ಲಿ ವಿಷಕಾರಕ ಅಂಶಗಳಿರುವುದರಿಂದ ಅದನ್ನು ಕಡ್ಡಾಯವಾಗಿ ರಾಸಾಯನಿಕ ಪರೀಕ್ಷೆಗೊಳಪಡಿಸಬೇಕು. ಶ್ರೀಲಂಕಾ ದಿಂದ ಅಮದಾಗುವ ಕಾಳುಮೆಣಸು ವಾಸ್ತವವಾಗಿ ವಿಯೆಟ್ನಾಂ ಕಾಳುಮೆಣಸು ಆಗಿದ್ದು, ಅದರ ಮೂಲವನ್ನು ಪರಿಶೋಧಿಸಬೇಕು ಎಂದು ಒತ್ತಾಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ
Lakshmi Hebbalkar: “ಎಪಿಎಲ್, ಬಿಪಿಎಲ್‌ನವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತೆ’
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.