ಒಂದೂವರೆ ನಿಮಿಷದಲ್ಲಿ ಪೆನ್ಸಿಲ್ ಮೊನೆಯಲ್ಲಿ ಕಲಾಕೃತಿ
Team Udayavani, Apr 4, 2018, 1:44 PM IST
ಬೆಳ್ತಂಗಡಿ: ಕೇವಲ ಒಂದೂವರೆ ನಿಮಿಷದಲ್ಲಿ ಪೆನ್ಸಿಲ್ ಮೊನೆಯಲ್ಲಿ ಒಂದು ಮಿ.ಮೀ. ಎತ್ತರದ 3 ಕಲಾಕೃತಿ ರಚಿಸುವ ಮೂಲಕ ವಿಶ್ವದಾಖಲೆ ಬರೆದು ಗುರುತಿಸಿಕೊಂಡಿದ್ದಾರೆ ಉಡುಪಿಯ ಸಂಜಯ್ ದಯಾನಂದ್.
ಏಷ್ಯಾದ 100 ಮಂದಿ ವಿಶ್ವದಾಖಲೆ ಮೆರೆದ ಸಾಧಕ ಪಟ್ಟಿಯಲ್ಲಿ ಸಂಜಯ್ ಹೆಸರು ಇದ್ದು, 2017ರ ನ.11ರಂದು ಹೊಸ ದಿಲ್ಲಿಯಲ್ಲಿ ವರ್ಡ್ಸ್‌ಕಿಂಗ್ಸ್ ವಿಶ್ವದಾಖಲೆ ಪ್ರಮಾಣಪತ್ರ ಪಡೆದಿದ್ದಾರೆ. ಇಂಡಿಯನ್ ಸ್ಟಾರ್‌ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ರೆಕಾರ್ಡ್, ಏಷಿಯಾ, ನೇಪಾಳ, ಬಾಂಗ್ಲಾ, ಇಂಡೋನೇಶಿಯಾ, ವಿಯೆಟ್ನಾಂ ಮೊದಲಾದ ವಿಶ್ವದಾಖಲೆಗಳ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ವರ್ಡ್ಸ್ ಕಿಂಗ್ ವಿಶ್ವದಾಖಲೆ ಬರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು.
ಅಕ್ಕಿಯಿಂದ ಆರಂಭ
ಮೊದಲು ಅಕ್ಕಿಯಲ್ಲಿ ವರ್ಣಾಲಂಕಾರ ಬಿಡಿಸುವುದನ್ನು ಗಮನಿಸಿ ಅಕ್ಕಿಯಲ್ಲಿ ಕಲಾಕೃತಿ ಬಿಡಿಸಲು ಪ್ರಯತ್ನಿಸಿದರು. ಇದರಲ್ಲಿ ಸಫಲರಾಗಿ ಮುಂದೆ ಪೆನ್ಸಿಲ್ ಮೊನೆಯಲ್ಲಿ ಕಲಾಕೃತಿ ಕೆತ್ತನೆ ನಡೆಸಿದರು. ಸೂಕ್ತ ಪ್ರೋತ್ಸಾಹ ದೊರಕದಿದ್ದಾಗ ತಮ್ಮ ಹವ್ಯಾಸಕ್ಕೆ ಬ್ರೇಕ್ ನೀಡಿದ್ದರು. ಬಳಿಕ ಮತ್ತೆ ಇವರ ಕನಸು ಚಿಗುರಿದ್ದು, ಯಾವುದೇ ಮಸೂರಗಳನ್ನು ಬಳಸದೆ ಅತೀ ಶೀಘ್ರವಾಗಿ ಕಲಾಕೃತಿ ರಚಿಸುತ್ತಾರೆ. ಸಂಜಯ್ ಕೃಷ್ಣ, ಮಂಜುನಾಥ ಸ್ವಾಮಿ, ಐಫೆಲ್ ಟವರ್ ಮೊದಲಾದ ಕಲಾಕೃತಿ ರಚಿಸಿದ್ದಾರೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನ ಮೈಕ್ರೋ ಆರ್ಟ್ ವಿಭಾಗದಲ್ಲಿ ಗಣಪತಿ ಕಲಾಕೃತಿಗೆ ಪ್ರಮಾಣಪತ್ರ ನೀಡಲಾಗಿದೆ.
ಪುಣೆಯಲ್ಲಿ ಜೀವನ
ಮೊದಲು ಪುಣೆಯ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ತನ್ನ ಸಾಧನೆಗೆ ಪ್ರೋತ್ಸಾಹಕರನ್ನು ಹುಡುಕುತ್ತಿದ್ದಾರೆ. ಇವರ ತಂದೆ ದಯಾನಂದ ಶಾಲಾ ಬಸ್ ಚಾಲಕರಾಗಿದ್ದು, ತಾಯಿ ಸುನೀತಾ ಗೃಹಿಣಿಯಾಗಿದ್ದಾರೆ.
ಸಿನೆಮಾ ಮಾಡುವ ಕನಸು
ಈಗಾಗಲೇ ಕಿರು ಚಿತ್ರವೊಂದನ್ನು ಮಾಡಿದ್ದಾರೆ. ಮತ್ತೂಂದು ಕಿರುಚಿತ್ರ ‘ವಿಕ್ಟರಿ ಬಾಯ್ಸ’ ಧರ್ಮಸ್ಥಳದಲ್ಲಿ ಸೋಮವಾರ ಸಂಜೆ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಿಸುವ ಕನಸು ಹೊಂದಿದ್ದಾರೆ.
ಹೆಗ್ಗಡೆ ಪ್ರೋತ್ಸಾಹ
ನಿರಾಶಾದಾಯಕ ಮನಃಸ್ಥಿತಿ ಹೊಂದಿದ್ದಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಪ್ರೋತ್ಸಾಹ ತುಂಬಿದ್ದರು. ಈಗ ಕಲೆಯ ಬಗ್ಗೆ ಹಾಗೂ ವಿಶ್ವದಾಖಲೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಇದರಿಂದ ಉತ್ತಮ ಸಾಧನೆಗೆ ನೆರವಾಗುತ್ತಿದೆ.
-ಸಂಜಯ್ ದಯಾನಂದ್,
ಸೂಕ್ಷ್ಮಕಲಾಕೃತಿ ಕೆತ್ತನೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.