ಕಾಮಗಾರಿಗಳು ಪ್ರಗತಿ ಹಂತದಲ್ಲೇ ಬಾಕಿ!
ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸುವ ಸವಾಲು
Team Udayavani, Mar 17, 2020, 5:55 AM IST
ಮಹಾನಗರ: ನಗರದ ವಿವಿಧೆಡೆ ಆರಂಭಗೊಂಡಿರುವ/ ಪ್ರಗತಿಯಲ್ಲಿರುವ ರಸ್ತೆ, ಚರಂಡಿ ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿಗಳು ಭಾರೀ ನಿಧಾನವಾಗಿ ಸಾಗುತ್ತಿರುವ ಬಗ್ಗೆ ಸಾರ್ವ ಜನಿಕರಿಂದ ದೂರುಗಳು ಕೇಳಿಬಂದಿದ್ದು, ಕಾಮಗಾರಿಗಳಿಗೆ ವೇಗ ನೀಡುವ ಆವಶ್ಯಕತೆ ಇದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಹಾಗೂ ಪಾಲಿಕೆಯ ಅನುದಾನದಲ್ಲಿ ಕಾಮಗಾರಿ ಗಳು ನಡೆಯುತ್ತಿವೆ. ಹಲವೆಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿವೆ. ಇನ್ನು ಕೆಲವೆಡೆ ರಸ್ತೆ ವಿಸ್ತರಣೆ, ಫುಟ್‌ಪಾತ್ ರಚನೆ ನಡೆಯುತ್ತಿವೆ. ಇವುಗಳಲ್ಲಿ ಕೆಲವೇ ಕೆಲವು ಕಾಮಗಾರಿಗಳು ಮಾತ್ರ ವೇಗವಾಗಿ ಸಾಗುತ್ತಿವೆ. ಇನ್ನುಳಿದ ಕಾಮಗಾರಿಗಳು ಆಮೆಗತಿಯಲ್ಲಿವೆ. ಕೆಲವು ಕಾಮಗಾರಿಗಳು 6-7 ತಿಂಗಳುಗಳಿಂದ ನಡೆಯುತ್ತಲೇ ಇವೆ. ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ಲಭ್ಯವಾಗುತ್ತಿಲ್ಲ.
ಬಂದರು ರಸ್ತೆ
ಬಂದರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ರಸ್ತೆಗಳಾದ ಅಜೀಜುದ್ದೀನ್ ರಸ್ತೆ ಮತ್ತು ಮಿಶನ್ ಸ್ಟ್ರೀಟ್ಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿವೆ. ಅಜೀಜುದ್ದೀನ್ ರಸ್ತೆಯ ಬಹುತೇಕ ಭಾಗದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇನ್ನೊಂದು ಬದಿಯಲ್ಲಿ ಕ್ಯೂರಿಂಗ್ ನಡೆಯುತ್ತಿದೆ. ಇಲ್ಲಿ ಭಾರೀ ಪ್ರಮಾಣದ ಕೇಬಲ್‌ನ್ನು ತೆರವುಗೊಳಿಸಬೇಕಾಗಿದ್ದ ಕಾರಣ ಕಾಮಗಾರಿ ವಿಳಂಬವಾಯಿತು ಎನ್ನುತ್ತಾರೆ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್.
ರಸ್ತೆಯ ಕೊನೆಯ ಭಾಗದಲ್ಲಿ (ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎದುರು) ಅಂದರೆ, ಬಂದರು ಮುಖ್ಯರಸ್ತೆ ಸಂಪರ್ಕಿಸುವಲ್ಲಿ ಬಾಕಿಯಾಗಿದೆ. ಅಂಡರ್‌ಗ್ರೌಂಡ್ ಟವರ್ ಇದ್ದುದರಿಂದ ಅದನ್ನು ತೆರವುಗೊಳಿಸಲು ಸಮಾಯವಕಾಶ ಬೇಕಾಗಿದೆ. ಬಂದರು ಪ್ರದೇಶ ವಾಹನ ನಿಬಿಢತೆಯಿಂದ ಕೂಡಿರುವುದು ಕೂಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ತೊಡಕಾಗಿದೆ. ಇಲ್ಲಿ ಪುಟ್‌ಪಾತ್, ಚರಂಡಿ ಕಾಮಗಾರಿಯೂ ನಡೆಯಬೇಕಿದೆ. ಇತ್ತ ರಾವ್ ಆ್ಯಂಡ್ ರಾವ್ ಸರ್ಕಲ್ ಸಮೀಪದ ಮೆಶಿನ್ ಸ್ಟ್ರೀಟ್ಸ್ ರಸ್ತೆ ಕಾಮಗಾರಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿದ್ದು ಒಂದು ಬದಿ ಕಾಂಕ್ರೀಟ್ ಕಾಮಗಾರಿ ಪೂರ್ಣ ವಾಗಿದೆ. ಮತ್ತೂಂದು ಬದಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿಯೇ ಪಕ್ಕದಲ್ಲಿರುವ 4ನೇ ಅಡ್ಡರಸ್ತೆಯ ಕಾಮಗಾರಿ ಒಂದು ವಾರದ ಹಿಂದೆ ಆರಂಭಿಸಲಾಗಿದೆ.
ಆರ್ಯ ಸಮಾಜ ರಸ್ತೆಯ ಒಂದು ಭಾಗ (ಕದ್ರಿ ಮುಖ್ಯರಸ್ತೆ ಕಡೆಯಲ್ಲಿ) ಹಾಗೆಯೇ ಬಾಕಿಯಾಗಿದೆ. ಜ್ಯೂಸ್ ಜಂಕ್ಷನ್ ಕಡೆಯಿಂದ ರಸ್ತೆ ಬಹುತೇಕ ಪೂರ್ಣಗೊಂಡಿದ್ದರೂ ಚರಂಡಿ, ಪುಟ್‌ಪಾತ್ ಕೆಲಸಗಳು ಆಗಿಲ್ಲ. ಬ್ರಿಡ್ಜ್ ರೋಡ್‌ನ ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. ಗುಜ್ಜರಕೆರೆ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಕ್ಯೂರಿಂಗ್ ನಡೆಯುತ್ತಿದೆ. ಚರಂಡಿ, ಫುಟ್‌ಪಾತ್ ಕೆಲಸ ಬಾಕಿಯಾಗಿದೆ. ಪುರಭವನ ಪಕ್ಕದ ಅಂಡರ್‌ಪಾಸ್‌ನ ಒಂದು ಭಾಗ ಕೂಡ ಪೂರ್ಣಗೊಂಡಿಲ್ಲ. ಎರಡು ತಿಂಗಳುಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ.
ಮಳೆಗಾಲ ಮೊದಲು ಅನುಮಾನ
ಹೆಚ್ಚಿನ ಕಾಮಗಾರಿಗಳು ಮಳೆಗಾಲಕ್ಕೆ ಪೂರ್ಣಗೊಳ್ಳುವುದು ಅನುಮಾನ. ಕಾಂಕ್ರೀಟ್ ರಸ್ತೆಗಳಾದರೂ ಚರಂಡಿಗಳಾಗದೆ ಇರುವುದರಿಂದ ಮಳೆಗಾದಲ್ಲಿ ತೊಂದರೆಯುಂಟಾಗುವ ಸಾಧ್ಯತೆ ಇದೆ. ಕೆಲವು ಅಂಗಡಿ ಮುಂಗಟ್ಟು, ಮನೆ ಯಂಗಳಕ್ಕೆ ನೀರು ನುಗ್ಗುವ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ/ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸಮರೋ ಪಾದಿಯಲ್ಲಿ ಪೂರ್ಣಗೊಳಿಸಬೇಕಾಗಿದೆ.
ಕಾಮಗಾರಿ ಪೂರ್ಣ
ಹಳೆ ಬಂದರು ಪ್ರದೇಶದಲ್ಲಿ ತುಂಬಾ ಹಳೆಯ ಕಾಲದ ಕೇಬಲ್‌ಗಳು ಕೂಡ ಭಾರೀ ಪ್ರಮಾಣದಲ್ಲಿದ್ದು ತೆರವುಗೊಳಿಸಲು ವಾರಕ್ಕೂ ಅಧಿಕ ಸಮಯ ಬೇಕಾಯಿತು. ಈಗ ರಸ್ತೆ ಕಾಂಕ್ರೀಟ್ ಬಹುತೇಕ ಪೂರ್ಣಗೊಂಡಿದೆ. ಇನ್ನು ಫುಟ್‌ಪಾತ್, ಚರಂಡಿಗೆ ಕೆಲವು ಅಂಗಡಿ ಯವರು ಜಾಗ ಬಿಟ್ಟು ಕೊಡಬೇಕಿದೆ. ಅವರು ಶೀಘ್ರ ತೆರವು ಮಾಡುವ ಭರವಸೆ ನೀಡಿದ್ದಾರೆ. ಅನಂತರ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿವೆ.
- ಅಬ್ದುಲ್ ಲತೀಫ್, ಮನಪಾ ಸದಸ್ಯರು, 45ನೇ ಪೋರ್ಟ್ ವಾರ್ಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.