ಮತದಾನದ ಹಕ್ಕು ಬಗ್ಗೆ ಜನರು ಹೆಚ್ಚು  ಜಾಗೃತರಾಗುತ್ತಿದ್ದಾರೆ

Team Udayavani, May 7, 2018, 12:08 PM IST

7-May-5.jpg

ಕೈಕಂಬ: ‘ರೀ ಮನೆಗೆ ಪಕ್ಷದವರು ಓಟು ಕೇಳಲು ಬಂದಿದ್ದಾರೆ; ಏನು ಹೇಳಬೇಕು ಈಗ?’ ಎಂದು ಗುರುಪುರ ಕೈಕಂಬದ ಗೂಡಂಗಡಿ ಮುಂದೆ ಸ್ನೇಹಿತರೊಂದಿಗೆ ಮಾತನಾಡುತ್ತ ಕುಳಿತಿದ್ದ ಪಡ್ಡಾಯಿ ಪದವಿನ ರಿಚಾರ್ಡ್‌ ಮೊಬೈಲಿಗೆ ಮನೆಯಿಂದ ಕರೆ ಬಂದಿತ್ತು. ಕರೆ ಮಾಡಿದ್ದ ಪತ್ನಿಗೆ ರಿಚಾರ್ಡ್‌, ‘ನೋಡು, ನಮ್ಮ ಮನೆಯ ಹತ್ತಿರದ ರಸ್ತೆ ಪೂರ್ತಿ ಹಾಳಾಗಿ ಹೋಗಿದೆ. ಮೊದಲು ಅದನ್ನು ರಿಪೇರಿ ಮಾಡಿಸುವುದಕ್ಕೆ ಹೇಳು ಅವರಿಗೆ’ ಎಂದು ಪ್ರತ್ಯುತ್ತರ ನೀಡಿದರು.

ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳ ಮನೆಮನೆ ಭೇಟಿ ಕಾರ್ಯಕ್ರಮದ ಸಂದರ್ಭ ನಡೆದ ಸ್ವಾರಸ್ಯಕರ, ಅಷ್ಟೇ ಅರ್ಥಪೂರ್ಣವಾದ ಸಂಭಾಷಣೆ. ಇದು ಉದಯವಾಣಿ ಕ್ಷೇತ್ರ ಸಂಚಾರ ಸಮಾಚಾರ ತಂಡದ ಗಮನಸೆಳೆಯಿತು.

ಗುರುಪುರ ಕೈಕಂಬದ ಹಾರ್ಡ್‌ವೇರ್‌ ಅಂಗಡಿಯೊಂದರ ಬದಿಯಲ್ಲಿ ಚಹಾ ಕುಡಿಯುತ್ತ ಇಬ್ಬರು ಕೂಲಿ ಕಾರ್ಮಿಕ ಜತೆ ಕುಳಿತುಕೊಂಡಿದ್ದ ಕುಪ್ಪೆಪದವಿನ ಭರತೇಶ ಅವರನ್ನು ಚುನಾವಣೆಯ ಮೂಡ್‌ ಬಗ್ಗೆ ಕೇಳಿದೆವು. ‘ಇತ್ತೆ ಪೂರಾ ಚೇಂಜ್‌ ಆತ್‌ಂಡ್‌. ಅಂಚ ಚೇಂಜ್‌ ಆವೊಡುಲಾ… (ಈಗ ಚುನಾವಣೆಯಲ್ಲಿ ಎಲ್ಲವೂ ಬದಲಾಗಿದೆ, ಮತ್ತದು ಹಾಗೆ ಆಗಬೇಕು ಕೂಡ) ಎಂದು ಉತ್ತರಿಸಿದರು.

ಅದು ಇದು ಗಡಿಬಿಡಿ ನಡುವೆ ಚುನಾವಣೆ!
ಅಲ್ಲಿಂದ ‘ಉದಯವಾಣಿ’ ತಂಡ ಕುಪ್ಪೆಪದವಿಗೆ ಹೋಗುವ ಬಸ್‌ ಮೂಲಕ ಪ್ರಯಾಣಿಸಿ ಮತದಾರರ ಅಭಿಪ್ರಾಯ-ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಮಾಡಿತು. ಕೈಕಂಬ ಬಸ್ಸು ನಿಲ್ದಾಣ ಬಸ್‌ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಜನರು ಮೆಹಂದಿ, ಮದುವೆ ಸಮಾರಂಭ, ಭೂತದ ಕೋಲ, ನೇಮ ಈ ವಿಚಾರವನ್ನೇ ಮಾತನಾಡುತ್ತ ನಿಂತಿದ್ದರು. ಸೆಕೆಯ ಕಿರಿಕಿರಿಗೆ ಹಿಡಿಶಾಪ ಹಾಕುತ್ತ ಪಿಯು – ಎಸೆಸ್ಸೆಲ್ಸಿ ಫಲಿತಾಂಶ, ಮಕ್ಕಳ ಅಡ್ಮಿಶನ್‌ ನಡುವೆ ಚುನಾವಣೆಯೂ ಬಂದಿದೆ ಎನ್ನುತ್ತ ಯಾವುದಕ್ಕೂ ಪುರುಸೊತ್ತೇ ಇಲ್ಲ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.

ಮುತ್ತೂರು ಮಾರ್ಗಂಗಡಿಯಲ್ಲಿ ಕುಳವೂರಿನ ಎಚ್‌.ವಿ. ಹಸನಬ್ಬ ಅವರಲ್ಲಿ ಈ ಬಾರಿ ಚುನಾವಣಾ ಪ್ರಚಾರ ಹಾಗೂ ವಾತಾವರಣದ ಬಗ್ಗೆ ಕೇಳಿದಾಗ ‘ಪ್ರಚಾರ ಅಷ್ಟು ಜೋರಾಗಿಲ್ಲ. ಈಗಾಗಲೇ ಹಲವೆಡೆ ವಿವಿಧ ಪಕ್ಷಗಳ ಸಣ್ಣಗೆ ಪ್ರಚಾರ ಆರಂಭವಾಗಿದೆ. ಈ ಬಾರಿ ಪರಸ್ಪರ ಪ್ರೀತಿಯ ವಾತಾವರಣವಿದ್ದು, ಎಲ್ಲಿಯೂ ಜಗಳ ನಡೆದಿಲ್ಲ. ಇದರಿಂದ ಹೆಚ್ಚಿನ ಪ್ರಮಾಣದ ಮತದಾನವಾಗಬಹುದು’ ಎಂದರು.

ಮತಗಟ್ಟೆ ಒಳಗೆ ಯಾರಿಗೆ ಮತ -ಗೊತ್ತೇ ಆಗಲ್ಲ!
ಅಲ್ಲಿಯೇ ಇದ್ದ ಕುಳವೂರಿನ ಫ‌ಕ್ರುದ್ದೀನ್‌ ಅವರನ್ನು ಮಾತನಾಡಿಸಿದಾಗ ‘ಇಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಮತದಾನ ಕೇಂದ್ರದ ಒಳಗೆ ಹೋದ ಮೇಲೆ ಮತದಾರ ಓಟು ಯಾರಿಗೆ ಕೊಡುತ್ತಾನೆ ಎಂಬುದು ಹೇಳಲು ಸಾಧ್ಯವಿಲ್ಲ. ಅದು ಗುಟ್ಟಾಗಿ ಇರುತ್ತದೆ’ ಎಂದರು.  ಅಲ್ಲಿಂದ ರಿಕ್ಷಾ ಏರಿ ಕುಪ್ಪೆಪದವಿನ ದಾರಿಯಲ್ಲಿ ಸಾಗುತ್ತಾ ಚಾಲಕರನ್ನು ಮಾತಿಗೆಳೆದಾಗ ‘ಎಲ್ಲವೂ ಮಾಮೂಲು ಆಗಿ ಇದೆ’ ಎಂದಷ್ಟೇ ಹೇಳಿದರು.

ಕುಪ್ಪೆಪದವು ಬಸ್ಸು ನಿಲ್ದಾಣದ ಬಳಿ ಅಂಗಡಿಯಲ್ಲಿ ಕುಳಿತಿದ್ದ ನಾಲ್ವರು ಮಾತಿಗೆ ಸಿಕ್ಕಿದರು. ‘ಮೂಲು ಮೂಜಿ ಪಾರ್ಟಿ ಪ್ರಚಾರ ಮಲ್ತೊಂದು  ಉಂಡು. ಈ ಸರ್ತಿ ಮಾತ್ರ ಯಾನ್‌ ವೋಟ್‌ ಪಾಡಂದೆ ಕುಲ್ಲುಜ್ಜಿ. ಆನಿ ರಜೆ ಪಾಡ್ದಾಂಡಲಾ ಓಟು ಪಾಡರ ಪೋಪೆ’ (ಈ ಬಾರಿ ಮಾತ್ರ ಮತದಾನ ಮಾಡಿಯೇ ಮಾಡುತ್ತೇನೆ. ರಜೆ ಹಾಕಿದ್ರೂ ಪರವಾಗಿಲ್ಲ ಓಟು ಮಿಸ್‌ ಮಾಡಲ್ಲ) ಎಂದರು ಒಬ್ಬರು. ಎಡಪದವು, ಗಂಜಿಮಠದ ಮಳಲಿ ಕ್ರಾಸ್‌ ರಸ್ತೆಯ ಪ್ರದೇಶದಲ್ಲಿ ಮತದಾರರು ಮತದಾನದ ಬಗ್ಗೆ ಜಾಗೃತಿ ವ್ಯಕ್ತಪಡಿಸಿದರು. ಓಟು ಮಿಸ್‌ ಮಾಡಿಕೊಳ್ಳುವುದಿಲ್ಲ ಎಂದರು.

ಬಹುತೇಕ ಭಾಗ ಸುತ್ತಾಡಿ, ಬಜಪೆ ಪೊಲೀಸ್‌ ಠಾಣೆ ರಸ್ತೆಯಾಗಿ ನಡೆದುಕೊಂಡು ಮುರನಗರಕ್ಕೆ ಹೋಗುತ್ತಿರಬೇಕಾದರೆ, ಆದ್ಯಪಾಡಿಯ ಯಶೋದಾ ಕಾಣಿಸಿದರು. ಚುನಾವಣೆ ಬಗ್ಗೆ ಅವರನ್ನು ಕೇಳಿದಾಗ ‘ವೋಟು ಬನ್ನಗ ಕೈಲಾ, ಕಾರ್‌ಲಾ ಪತ್ತುವೆರ್‌! ವೋಟ್‌ ಕೇನೆರೆ ಬರ್ಪುನಕ್ಲೆನ ಕಾರುಬಾರು ಮೂಲು ಜೋರು ಉಂಡು’ (ಚುನಾವಣೆ ಬಂದಾಗ ಕೈಯೂ ಕಾಲೂ ಹಿಡಿಯುತ್ತಾರೆ. ಇಲ್ಲಿಯೂ ಓಟು ಕೇಳುವವರ ಕಾರುಬಾರು ಜೋರು ಇದೆ.) ಎನ್ನುತ್ತ ಆದ್ಯಪಾಡಿಯತ್ತ ಬಸ್‌ ಏರಿದರು.

ಗುಟ್ಟನ್ನು ಬಿಟ್ಟು ಕೊಡುವುದಿಲ್ಲ
ಇಲ್ಲಿ ಪ್ರಮುಖ ಪಕ್ಷಗಳು ಒಂದೇ ತರಹ ಪ್ರಚಾರ ಮಾಡುತ್ತಿವೆ. ಮನೆ-ಮನೆ ಪ್ರಚಾರ ಮಾತ್ರ ಇದೆ. ಮತದಾರರಲ್ಲಿಯೂ ಬದಲಾವಣೆ ಆಗಿದ್ದು, ತಮ್ಮ ಮತದಾನದ ಗುಟ್ಟನ್ನು ಯಾರು ಬಿಟ್ಟುಕೊಡುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ.
 – ಸಿಲ್ವೆಸ್ಟರ್‌ ಫೆರ್ನಾಂಡಿಸ್‌, ಮಳಲಿ
    ಕ್ರಾಸ್‌ ನಿವಾಸಿ

ನಾವು ಕೂಲಿ ಕಾರ್ಮಿಕರು, ಬಡವರು. ಕೆಲಸ ಮಾಡಿಯೇ ಜೀವನ ಸಾಗಿಸುವವರು. ಯಾರು ಬಂದರೂ ನಮಗೆ ಒಂದೇ. ಚುನಾವಣೆಯ ದಿನ ಬೆಳಗ್ಗೆ ಬೇಗ ಹೋಗಿ ಅಥವಾ ರಜೆ ಮಾಡಿಯಾದರೂ ಮತದಾನ ಮಾಡುತ್ತೇವೆ . ನಮ್ಮ ಓಟಿನಿಂದಲೇ ಜಯ ಗಳಿಸುತ್ತಾರೆ, ಮತ್ತೆ ನಮ್ಮನ್ನು ಮರೆಯುತ್ತಾರೆ.
-ಭರತೇಶ್‌, ಗುರುಪುರ ಕೈಕಂಬ

ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.