ಜನ ಸಂತಸದಿಂದ ಮಂಗಳೂರಿಗೆ ಬರುವಂತಾಗಬೇಕು: ಪ್ರಥಮ್
Team Udayavani, Jan 8, 2018, 10:40 AM IST
ಸುರತ್ಕಲ್ : ಜನ ಸಂತಸದಿಂದ ಮಂಗಳೂರಿನ ಪ್ರಸಿದ್ಧ ಸ್ಥಳ ನೋಡಲು ಬರುವ ಹಾಗಾಗಬೇಕು. ಭಯದಿಂದ ಬರುವ ಹಾಗೆ ಆಗಬಾರದು ಎಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದರು.
ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶೀಘ್ರ ಭೇಟಿ ಮಾಡಲಿದ್ದು, ತನ್ನ ಉಗ್ರ ನಿಲುವು ಹಾಗೂ ಆಕ್ರಮಣಕಾರಿ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಪಿಎಫ್‌ಐ ಸಂಘಟನೆಯನ್ನು ನಿಷೇ ಧಿಸುವಂತೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಮಾನವ ಮಾನವನ ಮೇಲೆ ಕ್ರೌರ್ಯ ತೋರಿಸುತ್ತಿರುವುದು ಆತಂಕಕಾರಿ.ಇದಕ್ಕೆ ಒಂದು ವರ್ಗದ ಓಲೈಕೆ, ರಾಜಕೀಯ ನಿಲುವುಗಳು ಕಾರಣವಾಗುತ್ತಿವೆ. ಆಡಳಿತದಲ್ಲಿರುವ ಸಚಿವರೊಬ್ಬರು ಅಪರಾಧಿ ಗಳೊಂದಿಗೆ ಫೋಟೋ ತೆಗೆದುಕೊಂಡು ಅವರಿಗೆ ಶಕ್ತಿ ತುಂಬುವ ಬದಲು ಅವರು ರಾಜೀನಾಮೆ ನೀಡುವುದಲ್ಲ ರಾಜಕೀಯ ಸನ್ಯಾಸ ಸ್ವೀಕರಿಸುವುದು ಒಳಿತು. ಐಶ್ವರ್ಯಾ ರೈ ಅವರು ಪ್ರತಿಭೆಯಿಂದ ಮಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ್ದಾರೆ. ಜನಪ್ರತಿನಿಧಿಗಳು ಓಟು ಹಾಕಿದ ಮತದಾರರಿಗೆ ರಕ್ಷಣೆ ನೀಡಲು ಮೊದಲು ಮುಂದಾಗಬೇಕು. ನಾನು ಅಲ್ಪಸಂಖ್ಯಾಕರ ವಿರೋಧಿ ಅಲ್ಲ. ಓಲೈಕೆಯ ವಿರೋಧಿ . ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಕೃತ್ಯಗಳು ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಮಂಗಳೂರು ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ಡಾ| ಭರತ್ ಶೆಟ್ಟಿ, ಕಿಶೋರ್ ಕುಮಾರ್, ತಿಲಕ್ ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.