ಬದಲಾವಣೆಯನ್ನು ಜನರೇ ಬಯಸಿದ್ದಾರೆ: ಖಾದರ್
Team Udayavani, Apr 15, 2019, 6:29 AM IST
ಸುಳ್ಯ: ಒಂದೆಡೆ ವಿಫಲ ಸಂಸದ. ಇನ್ನೊಂದೆಡೆ ವಿಫಲ ಕೇಂದ್ರ ಸರಕಾರ. ಇವೆರೆಡನ್ನು ತಿರಸ್ಕರಿಸಿ ಸಮರ್ಥ ಆಡಳಿತ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ.
ಬದಲಾವಣೆಯ ಈ ಬಿರುಗಾಳಿ ಸುಳ್ಯದಿಂದಲೇ ಪ್ರಾರಂಭವಾಗಿದ್ದು, ಇದನ್ನು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಸುಳ್ಯದ ಕಾಂಗ್ರೆಸ್ ಚುನಾವಣ ಕಚೇರಿಯಲ್ಲಿ ರವಿವಾರ ಅವರು ಮಾತನಾಡಿದರು. ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಈ ರೀತಿಯ ರಾಜಕೀಯ ಗಿಮಿಕ್‌ಗಳಿಗೆ ಜನರು ಆಸ್ಪದ ನೀಡದೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ಕಷ್ಟಕ್ಕೆ ಸ್ಪಂದಿಸುವವರು ಬೇಕು. ಅಭಿವೃದ್ಧಿ ಕೆಲಸ ಮಾಡುವಂತಹ ಛಲ ಇರುವ ಮಿಥುನ್ ರೈ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಟ್‌ಪೇಸ್ಟ್ ಪ್ರಣಾಳಿಕೆ
ಬಿಜೆಪಿ ಪ್ರಣಾಳಿಕೆ ಕಟ್‌ಪೇಸ್ಟ್. ಇದರಲ್ಲಿ ಯಾವುದೇ ಸಾಧನೆಗಳಿಲ್ಲ. ಹಳೆಯ ವಿಚಾರಗಳನ್ನೇ ಮತ್ತೆ ಪ್ರಸ್ತಾವಿಸಲಾಗಿದೆ. ಐದು ವರ್ಷಗಳಲ್ಲಿ ಆಗದ್ದು ಈ ಸಲ ಹೇಗೆ ಆಗುತ್ತೆ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.
ಜನ ನಾವೂ ಸೇರಿಸಿದ್ದೆವು
ಮಂಗಳೂರಿನಲ್ಲಿ ಮೋದಿ ಸಭೆಗೆ ಅತ್ಯಧಿಕ ಜನರು ಆಗಮಿಸಿದ್ದಾರೆ ಎನ್ನುವುದು ಸುಳ್ಳು. ರಾಹುಲ್ ಗಾಂಧಿ ಬಂದಿದ್ದಾಗ ಅದಕ್ಕಿಂತ ಅಧಿಕ ಜನರು ಭಾಗವಹಿಸಿದ್ದರು. ದ.ಕ., ಉಡುಪಿ, ಕಾಸರಗೋಡು, ಕೊಡಗಿನಲ್ಲಿ ಒಟ್ಟು 40 ಲಕ್ಷ ಮತದಾರರಿದ್ದು, ಅದರಲ್ಲಿ 40 ಸಾವಿರ ಜನರನ್ನು ಸೇರಿಸುವುದು ದೊಡ್ಡ ಸಂಗತಿ ಅಲ್ಲ ಎಂದು ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ಅಲ್ಪಸಂಖ್ಯಾಕ ಘಟಕದ ಪ್ರದಾನ ಕಾರ್ಯದರ್ಶಿ ಡೆನ್ನಿಸ್ ಡಿ’ಸೋಜಾ, ಕೆಪಿಸಿಸಿ ಅಲ್ಪಸಂಖ್ಯಾಕ ಘಟಕದ ಸಂಯೋಜಕ ನೂರುದ್ದೀನ್ ಸಾಲ್ಮರ, ನ.ಪಂ. ಮಾಜಿ ಸದಸ್ಯ ಕೆ.ಎಂ. ಮುಸ್ತಾಫ, ಸಂಶುದ್ದೀನ್, ಪ್ರೇಮಾ ಟೀಚರ್, ನಂದರಾಜ್ ಸಂಕೇಶ, ಜೂಲಿಯಾನ ಕ್ರಾಸ್ತಾ, ಶ್ರೀಲತಾ ಬೂಡು ಉಪಸ್ಥಿತರಿದ್ದರು.
ಇಂದು ಡಿಕೆಶಿ ಗುತ್ತಿಗಾರಿಗೆ
ಎ. 15ರಂದು ಗುತ್ತಿಗಾರಿಗೆ ಡಿ.ಕೆ. ಶಿವಕುಮಾರ್ ಬರಲಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಹಲವು ಕಡೆಗಳಲ್ಲಿ ಮನೆ-ಮನೆಗೆ ಭೆೇಟಿ ನೀಡಿ ಮತಯಾಚನೆ ಮಾಡುತ್ತಿದ್ದೇವೆ. ಜನರ ಒಲವು ತೋರಿಸುತ್ತಿದ್ದಾರೆ ಎಂದು ಖಾದರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.