ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ನಲ್ಲಿ ಬೆಂಕಿ


Team Udayavani, Feb 1, 2019, 6:12 AM IST

february-6.jpg

ಪೆರಾಜೆ: ನಗರದ ಕಸ, ತ್ಯಾಜ್ಯ ಸಂಗ್ರಹದ ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ನಲ್ಲಿ ಗುರುವಾರ ಮುಂಜಾನೆ ವೇಳೆ ಬೆಂಕಿ ಅವಘಡ ಬೆಳಕಿಗೆ ಬಂದಿದ್ದು, ಕಸ, ತ್ಯಾಜ್ಯ, ಪ್ಲಾಸ್ಟಿಕ್‌ ರಾಶಿ ಬೆಂಕಿಗೆ ಆಹುತಿಯಾಗಿದೆ. ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿಕೊಂಡಿರುವ ಕಾರಣ ಪದೇ ಪದೇ ಬೆಂಕಿ ಏಳುತ್ತಿದ್ದು, ಸ್ಥಳೀಯ ಪರಿಸರದಲ್ಲಿ ಆತಂಕ ಮನೆ ಮಾಡಿದೆ.

ಗುರುವಾರ ನಸುಕಿನ ವೇಳೆ ಬೆಂಕಿ ತಗಲಿರುವ ಸಾಧ್ಯತೆ ಇದ್ದು, ಘಟನೆಗ ಕಾರಣ ತಿಳಿದು ಬಂದಿಲ್ಲ. ನಗರಾಡಳಿತ, ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಜೆಸಿಬಿ ಯಂತ್ರಗಳ ಮೂಲಕ ತ್ಯಾಜ್ಯ ರಾಶಿ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಕಾಡಿಗೆ ಬೆಂಕಿ ಹಬ್ಬದಂತೆ ಎಚ್ಚರಿಕೆ ವಹಿಸಲಾಗಿದೆ. ನೀರು ಹಾಯಿಸಲು ಟ್ಯಾಂಕರ್‌ ಬಳಸಲಾಗಿದೆ.

ಡಂಪಿಂಗ್‌ ಯಾರ್ಡ್‌ನ ಒಂದು ಭಾಗದ ಕಸದ ರಾಶಿ ಹೊತ್ತಿ ಉರಿದು ಎಕರೆಗಟ್ಟಲೆ ಪ್ರದೇಶವನ್ನು ವ್ಯಾಪ್ತಿಸಿದೆ. ಮಧ್ಯದಲ್ಲಿದ್ದ ಆಳೆತ್ತರದ ಮರಗಳು ಬೆಂಕಿಗೆ ಆಹುತಿಯಾಗಿವೆ. ಅವು ಧರೆಗೆ ಉರುಳುವ ಸಾಧ್ಯತೆ ಇರುವುದರಿಂದ ಹತ್ತಿರದ ಹಲವು ಮನೆಗಳಿಗೆ ಆತಂಕ ಉಂಟಾಗಿದೆ.ಬೆಂಕಿ ಸಂಪೂರ್ಣ ಹತೋಟಿಗೆ ಬಂದ ಬಳಿಕ ವೇ ಮರ ತೆರವು ಕಾರ್ಯಾಚರಣೆ ಸಾಧ್ಯ ವಾಗಲಿದೆ.

ನಿಯಂತ್ರಣ ಸವಾಲು
ಹತ್ತಿರದ ಕಾಡಿಗೆ ಹಬ್ಬುವ ಮೊದಲು ರಕ್ಷಣಾ ಕಾರ್ಯ ನಡೆದ ಕಾರಣ ಅನಾಹುತ ವೊಂದು ತಪ್ಪಿತ್ತು. ಬೆಂಕಿ ಹಬ್ಬದಂತೆ ಸುತ್ತಲೂ ಅಗಳು ನಿರ್ಮಿಸಲಾಗಿದೆ. ಮಣ್ಣು ಹಾಕಲಾ ಗುತ್ತಿದೆ. ಆದರೆ ಭಾರೀ ಪ್ರಮಾಣದ ತ್ಯಾಜ್ಯ, ಪ್ಲಾಸ್ಟಿಕ್‌ ತುಂಬಿ ರುವ ಕಾರಣ ಮೇಲ್ಭಾಗದಲ್ಲಿ ಬೆಂಕಿ ಹತೋಟಿಗೆ ಬಂದರೂ ತ್ಯಾಜ್ಯ ರಾಶಿಯ ಮಧ್ಯಭಾಗದಿಂದ ಬೆಂಕಿ ಕಾಣಿಸು ಕೊಳ್ಳುತ್ತಿದೆ. ನಿಯಂತ್ರಣ ಕ್ರಮದ ಮಧ್ಯೆ ಹಠಾತ್‌ ಬೆಂಕಿ ಕಾಣಿಸಿಕೊಂಡ ಕಾರಣ ಅಗ್ನಿಶಾಮಕ ದಳದ ವಾಹನ ಕರೆಯಿಸಿ ಬೆಂಕಿ ನಂದಿಸಲಾಯಿತು. ಪ್ಲಾಸ್ಟಿಕ್‌ಗೆ ಬೆಂಕಿ ತಗಲಿರುವ ಕಾರಣ ನಿಯಂತ್ರಣ ಸವಾಲಾಗಿದೆ.

ಕಸ ಪೂರೈಕೆ ಸ್ಥಗಿತವಾಗಿತ್ತು
ಡಂಪಿಂಗ್‌ ಯಾರ್ಡ್‌ನಲ್ಲಿ ತ್ಯಾಜ್ಯದ ಪ್ರಮಾಣ ಮಿತಿಗಿಂತ ಅಧಿಕವಾಗಿದ್ದ ಕಾರಣ ಕೆಲ ತಿಂಗಳ ಹಿಂದೆ ಕಸ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಹಸಿ, ಒಣ ಕಸ, ಪ್ಲಾಸ್ಟಿಕ್‌ ಪ್ರತ್ಯೇಕಿಸದೆ ಎಲ್ಲವನ್ನೂ ಡಂಪ್‌ ಮಾಡಲಾಗುತ್ತಿತ್ತು. ಇದರಿಂದ ಮಳೆಗಾಲದಲ್ಲಿ ತ್ಯಾಜ್ಯ ನೀರು ಪಯಸ್ವಿನಿ ಪಾಲಾಗುತ್ತಿತ್ತು. ಹತ್ತಿರದ ನಿವಾಸಿಗಳಿಗೆ ರೋಗ ಭೀತಿ ಉಂಟಾಗಿತ್ತು. ನ.ಪಂ., ಆಲೆಟ್ಟಿ ಗ್ರಾ.ಪಂ. ಸಭೆಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೆ ನನಗರ ಪಂಚಾಯತ್‌ ಕಸ ಪೂರೈಕೆ ಸ್ಥಗಿತಗೊಳಿಸಿ ನ.ಪಂ. ಕಚೇರಿ ಆವರಣದಲ್ಲಿ ಕಸ, ತ್ಯಾಜ್ಯ ಸಂಗ್ರಹಿಸಲಾಗಿತ್ತು.

ನಿಯಂತ್ರಣಕ್ಕೆ ಕ್ರಮ
ಎರಡು ಜೆಸಿಬಿ, ಹಿಟಾಚಿ ಬಳಸಿ ಬೆಂಕಿ ಹಬ್ಬಿರುವ ಪ್ರದೇಶಕ್ಕೆ ಮಣ್ಣು ಹಾಕಲಾಗುತ್ತಿದೆ. ಅಗ್ನಿಶಾಮಕ ದಳ, ಟ್ಯಾಂಕರ್‌ ನೀರು ಬಳಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಪ್ಲಾಸ್ಟಿಕ್‌ಗೆ ಬೆಂಕಿ ತಗಲಿರುವ ಕಾರಣ ನಿಯಂತ್ರಣ ಸ್ವಲ್ಪ ಕಠಿನವಾಗಿದೆ. ಫೆ. 4ರಂದು ಖಾಸಗಿ ಸಂಸ್ಥೆಯೊಂದು ಹಸಿ ಕಸ ಖರೀದಿಗೆ ಮುಂದಾಗಿದ್ದು, ವಿಂಗಡಣೆ ಬಳಿಕ ವಿಲೇವಾರಿಗೆ ಯೋಜನೆ ರೂಪಿಸಿದ್ದೆವು. ಅದು ಪೂರ್ಣಗೊಳ್ಳುವ ಮೊದಲೇ ಬೆಂಕಿ ತಗುಲಿದೆ.
– ಮತ್ತಡಿ
ಮುಖ್ಯಾಧಿಕಾರಿ, ನ.ಪಂ. ಸುಳ್ಯ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.