ಪೆರಾಜೆ ಗ್ರಾ.ಪಂ. ಗ್ರಾಮಸಭೆ: ಮದ್ಯದಂಗಡಿಗೆ ವಿರೋಧ; ನಿರ್ಣಯ
Team Udayavani, Jul 14, 2017, 2:55 AM IST
ಬಂಟ್ವಾಳ : ಪೆರಾಜೆ ಗ್ರಾಮದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆಯಲ್ಲಿ ಪೆರಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸ್ಥಳೀಯ ಪೆರಾಜೆ ಮಠದ ಸನಿಹ ವೈನ್‌ಶಾಪ್ ತೆರೆಯುವ ಯತ್ನದ ಬಗ್ಗೆ ಪ್ರಸ್ತಾಪಿಸಿ “ನೆಮ್ಮದಿಯಿಂದ ಬದುಕುವ ಗ್ರಾಮಕ್ಕೆ ಸಮಸ್ಯೆಯನ್ನು ತಂದು ಶಾಂತಿಯನ್ನು ಕದಡಬೇಡಿ. ನಮ್ಮ ಗ್ರಾಮದಲ್ಲಿ ಅಮಲು ಪದಾರ್ಥ ಮಾರಾಟಕ್ಕೆ ಅವಕಾಶ ನೀಡಬೇಡಿ. ಒಳ್ಳೆಯ ಊರಿನಲ್ಲಿ ಅನಪೇಕ್ಷಿತ ವಿಚಾರಕ್ಕೆ ಅನುಮತಿ ಬೇಡ’ ಎಂದು ಒತ್ತಾಯಿಸಿದರು. “ವೈನ್‌ಶಾಪ್ ಉದ್ದೇಶಕ್ಕೆ ಅನುಮತಿ ನೀಡುವುದಿಲ್ಲ’ ಎಂದು ನಿರ್ಣಯಿಸಲಾಯಿತು.
ಗುಂಡಿ ಮುಚ್ಚಲು ಸೂಚನೆ
ಪೆರಾಜೆ ಗ್ರಾಮದ ಕೆಲವು ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಶಾಲಾ ಮಕ್ಕಳಿಗೆ ಇನ್ನೂ ಕೂಡ ಪಠ್ಯ ಪುಸ್ತಕ ಸಿಗದೇ ಮಕ್ಕಳು ತೊಂದರೆಗೊಳಪಟ್ಟಿದ್ದಾರೆ ಎಂದು ಶಿಕ್ಷಣ ಇಲಾಖೆಯ ಬಗ್ಗೆ ಆರೋಪ ವ್ಯಕ್ತಪಡಿಸಿದರು.
ಪಾಲ್ಗೊಳ್ಳುವಿಕೆ ಮುಖ್ಯ
ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಇಲ್ಲಿನ ಗ್ರಾಮದ ಹಿರಿಯ ವ್ಯಕ್ತಿಗಳಿಗೆ ಸಾಕಷ್ಟು ಅನುಭವವಿದೆ. ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಜನರು ಮಾಡುತ್ತಿದ್ದಾರೆ. ಗ್ರಾಮಸಭೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಕಾನೂನಿಗೆ ವಿರೋಧವಾಗಿರುವಂತಹ ಯಾವುದೇ ಕೆಲಸಗಳನ್ನು ಗ್ರಾಮದಲ್ಲಿ ಮಾಡುವುದಿಲ್ಲ. ಪ್ರತಿ ಮನೆಯವರು ಸ್ವತ್ಛತೆಯ ಬಗ್ಗೆ ಹೆಚ್ಚು ನಿಗಾ ವಹಿಸಿದರೆ ಸ್ವತ್ಛ ಗ್ರಾಮವಾಗುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಗ್ರಾಮ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು ಎಂದರು.
ತಾ.ಪಂ. ಸದಸ್ಯೆ ಮಂಜುಳಾ ಕುಶಾಲ, ಗ್ರಾ.ಪಂ. ಉಪಾಧ್ಯಕ್ಷೆ ಗುಲಾಬಿ, ತಾ.ಪಂ. ಮಾಜಿ ಸದಸ್ಯ ಕುಶಲ ಎಂ, ನೋಡಲ್ ಅಧಿಕಾರಿ ಸಿಡಿಪಿಒ ಸುಧಾ ಜೋಷಿ , ಗ್ರಾ.ಪಂ. ಸದಸ್ಯರಾದ ತಿಮ್ಮಪ್ಪ ಗೌಡ, ನೀಲಯ್ಯ ಪೂಜಾರಿ, ಮೋಹಿನಿ, ಇಂದಿರಾ, ಉಮ್ಮರ್, ಪ್ರಮುಖರಾದ ಶ್ರೀಕಾಂತ ಆಳ್ವ, ಅಪ್ರಾಯ ಬಿ.ಪೈ, ಬಿ.ಟಿ. ನಾರಾಯಣ ಭಟ್, ಎಸ್. ಉಮ್ಮರ್, ಜನಾರ್ದನ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.ಪಿಡಿಒ ಶಂಭು ಶರ್ಮ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಉಮೇಶ್ ಪಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೌಕ್ರಾಡಿ: ತಹಶೀಲ್ದಾರ್ ನೇತೃತ್ವದಲ್ಲಿ ಗುಡಿಸಲು ತೆರವು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.