ಸೇವೆಯ ಮೂಲಕ ಮಹಿಳೆಯರ ಅನನ್ಯತೆಯ ಪ್ರದರ್ಶನ


Team Udayavani, Mar 5, 2018, 3:35 PM IST

seve.jpg

ಮಂಗಳೂರು: ಮಹಿಳೆಯರು ಸೇವೆಯ ಮೂಲಕ ತಮ್ಮ ಅನನ್ಯತೆಯನ್ನು ಎದ್ದು ಕಾಣಿಸಿದ್ದಾರೆ ಎಂದು ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಹೇಳಿದರು.

ಅವರು ರವಿವಾರ ನಗರದ ಬೆಂದೂರಿನ ಸೈಂಟ್‌ ಆ್ಯಗ್ನೆಸ್‌ ಸ್ಪೆಷಲ್‌ ಸ್ಕೂಲ್‌ ಆವರಣದಲ್ಲಿ ಕೆಥೋಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ ನೇತೃತ್ವದಲ್ಲಿ ಕೆಥೋಲಿಕ್‌ ಸಭಾ ಉಡುಪಿ ಪ್ರದೇಶ್‌ ಮತ್ತು ಮಂಗಳೂರು ಧರ್ಮ ಪ್ರಾಂತದ ಮಹಿಳಾ
ಮಂಡಳಿಯ ಸಹಯೋಗದಲ್ಲಿ “ಪ್ರಗತಿಪರ ಸಮಾಜಕ್ಕಾಗಿ ಕೆನರಾ ಕೆಥೋಲಿಕ್‌ ಸ್ತ್ರೀಯರ ನಾಯಕತ್ವ’ ಎಂಬ ಧ್ಯೇಯದಡಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕಾಸರಗೋಡು ತಾಲೂಕನ್ನು ಒಳಗೊಂಡ ಕೆನರಾ ಪ್ರದೇಶದ ಕೆಥೋಲಿಕ್‌ ಮಹಿಳೆಯರ ಬೃಹತ್‌ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಕೆಥೋಲಿಕ್‌ ಸಭಾ ಸ್ತ್ರೀ ಸಾಧನ್‌ ಪ್ರಶಸ್ತಿ’ ಸ್ವೀಕರಿಸಿದ 10 ಮಂದಿ ಮಹಿಳೆಯರನ್ನು ಅಭಿನಂದಿಸಿದರು.

ಬೆಥನಿ ಸಂಸ್ಥೆಯ ಸಹ ಮುಖ್ಯಸ್ಥರಾದ ಸಿ|ಲಿಲ್ಲಿಸ್‌ ಮತ್ತು ಐಆರ್‌ಎಸ್‌ ಅಧಿಕಾರಿ ಕಸ್ಟಮ್ಸ್‌ ಆ್ಯಂಡ್‌ ಸೆಂಟ್ರಲ್‌ ಎಕ್ಸೈಸ್‌ ಅಸಿಸ್ಟೆಂಟ್‌ ಕಮಿಷನರ್‌ ಕ್ವೀನಿ ಮಿಶಲ್‌ ಡಿ’ಕೋಸ್ತಾ ಸಮಾವೇಶವನ್ನು ಉದ್ಘಾಟಿಸಿದರು. ಮಹಿಳೆಯರು ದಿಟ್ಟತನದಿಂದ ಮುಂದೆ ಬಂದು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯ ಸೇವೆ ಒದಗಿಸಿ ಸಶಕ್ತರಾಗಬೇಕು. ಪುರುಷರು ಅವರಿಗೆ ಬೆಂಬಲ ನೀಡಬೇಕು ಎಂದು ಸಿ| ಲಿಲ್ಲಿಸ್‌ ಕರೆ ನೀಡಿದರು. ನಾವು ಬದುಕನ್ನು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ನೋಡದೆ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಕ್ವೀನಿ ಮಿಶಲ್‌ ಡಿ’ಕೋಸ್ತಾ ಹೇಳಿದರು.

ಸೇವೆ ಮೂಲಕ ಅತ್ಯುತ್ತಮ ನಾಯಕತ್ವ
ಸಮಾಜ ಸೇವಾ ಕಾರ್ಯಕರ್ತರಾದ ಕೆಪಿಸಿಸಿ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೊ ದಿಕ್ಸೂಚಿ ಭಾಷಣ ಮಾಡಿದರು. ಕ್ರೈಸ್ತ ಸಮುದಾಯದಲ್ಲಿ ಮಹಿಳೆಯರಿಗೆ ಸಮಾನ ಗೌರವವಿದ್ದು, ಎಲ್ಲರಂಗಗಳಲ್ಲೂ ಅತ್ಯುತ್ತಮ ನಾಯಕತ್ವ ವಹಿಸುತ್ತಿದ್ದಾರೆ. ತಮ್ಮ ಸೇವೆಯ ಮೂಲಕ ಉತ್ತಮ ಕುಟುಂಬಗಳನ್ನು ಕಟ್ಟುತ್ತಿದ್ದು, ಜತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ, ಸ್ವಸಹಾಯ ಸಹಕಾರಿ ರಂಗದಲ್ಲೂ ಪ್ರಭಾವಿ ನಾಯಕತ್ವವನ್ನು ವಹಿಸಿ ಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಶಾಸಕ ಜೆ.ಆರ್‌. ಲೋಬೊ ಮತ್ತು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿದರು.

ಕೃತಿ ಬಿಡುಗಡೆ: ಪ್ರೊ| ಸ್ಟೀವನ್‌ ಕ್ವಾಡ್ರಸ್‌ ಅವರು ಬರೆದ “ಸ್ತ್ರೀಯರಿಗಾಗಿ ಸರಕಾರ’ ಕೃತಿಯನ್ನು ಬಿಷಪ್‌ ಅಲೋಶಿಯಸ್‌ ಪಾವ್‌É ಡಿ’ಸೋಜಾ ಬಿಡುಗಡೆ ಮಾಡಿದರು.

ಸಮ್ಮಾನ: ಕೆಥೋಲಿಕ್‌ ಸಭಾ ವತಿಯಿಂದ ಬಿಷಪ್‌ ಅಲೋಶಿಯಸ್‌ ಪಾವ್‌É ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

ಮಹಿಳೆಯರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕಿಯರಾದ ಪಾವಿÉನ್‌ ಫ್ಲೋಸ್ಸಿ ಪಿಂಟೊ ತಾಕೊಡೆ (ಕೃಷಿ), ಜೆಸ್ಲಿನ್‌ ಎಲಿಜಬೆತ್‌ ಮೇರಿ ಲುವಿಸ್‌ (ವಿಶೇಷ ಸಾಮರ್ಥ್ಯದ ಮಹಿಳೆ), ಜುಲಿಯಾನಾ ಲೋಬೊ ದೇರೆಬೈಲ್‌ (ಶಿಕ್ಷಣ), ಯುಲಾಲಿಯಾ ಡಿ’ಸೋಜಾ ಬಿಜೈ (ಉದ್ಯಮ), ಲಿನೆಟ್‌ ಕ್ಯಾಸ್ತೆಲಿನೋ ನಿತ್ಯಾಧರ್‌ನಗರ (ಸರಕಾರಿ ಸೇವೆ), ಮೇರಿ ವಾಸ್‌ ದೇರೆಬೈಲ್‌ (ಆರೋಗ್ಯ), ಮರ್ಲಿನ್‌ ರಸ್ಕಿನ್ಹಾ ನಾಗುರಿ (ಸಾಹಿತ್ಯ ಮತ್ತು ಕಲೆ), ವಾಯ್ಲೆಟ್‌ ಜೆ. ಪಿರೇರಾ ಬೆಂದುರ್‌ (ವೃತ್ತಿಪರ ಕ್ಷೇತ್ರ), ರೆಮಿಡಿಯಾ ಡಿ’ಸೋಜಾ ಬೆಳ್ಮಣ್‌ (ಸಮಾಜ ಸೇವೆ), ಜೋಯ್ಲಿÉನ್‌ ಮ್ಯೂರಲ್‌ ಲೋಬೊ ಶಿರ್ತಾಡಿ (ಕ್ರೀಡೆ) ಅವರಿಗೆ “ಕೆಥೋಲಿಕ್‌ ಸಭಾ ಸ್ತ್ರೀ ಸಾಧನ್‌ ಪ್ರಶಸ್ತಿ 2018′ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಶಾಲು, ಸಮಾನ‌ಪತ್ರ, ಸ್ಮರಣಿಕೆ ಹಾಗೂ 10,000 ರೂ. ನಗದು ಒಳಗೊಂಡಿದೆ. ಸಮ್ಮಾನಿತರ ಪರವಾಗಿ ಲಿನೆಟ್‌ ಕ್ಯಾಸ್ತೆಲಿನೋ ಮಾತನಾಡಿದರು.

ಅತಿಥಿಯಾಗಿದ್ದ ಮುಂಬಯಿನ ಮೋಡೆಲ್‌ ಕೋ- ಆಪರೇಟಿವ್‌ ಬ್ಯಾಂಕ್‌ನ ಚೇರ್‌ಮನ್‌ ಆಲ್ಬರ್ಟ್‌ ಡಿ’ಸೋಜಾ ಅವರು ಕೆಥೋಲಿಕ್‌ ಸಭಾ ಅಜೀವ ಸದಸ್ಯತ್ವ ಕಾರ್ಡ್‌ ಅನಾವರಣಗೊಳಿಸಿದರು.

ಕೆಥೋಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್‌ ಲೋಬೊ ಸ್ವಾಗತಿಸಿ ಪ್ರಸ್ತಾವನೆಗೈದರು.ಮಂಗಳೂರು ಧರ್ಮಪ್ರಾಂತದ ಪಾಲನ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಎಪಿಸ್ಕೋಪಲ್‌ ಸಿಟಿ ವಲಯದ ಪ್ರಧಾನ ಧರ್ಮಗುರು ಫಾ| ಜೆ.ಬಿ. ಕ್ರಾಸ್ತಾ, ಕೆಥೋಲಿಕ್‌ ಸಭಾ ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥ್ಯೂ ವಾಸ್‌, ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್‌ ಡಿ’ಸೋಜಾ, ಕೆಥೊಲಿಕ್‌ ಸಭಾ ಉಡುಪಿ ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಅಧ್ಯಕ್ಷ ವಲೇರಿಯನ್‌ ಆರ್‌. ಫೆರ್ನಾಂಡಿಸ್‌, ಕಾರ್ಯದರ್ಶಿ ಜೆಸಿಂತಾ ಕುಲಾಸೊ, ಮಹಿಳಾ ಮಂಡಳಿಯ ಆಧ್ಯಾತ್ಮಿಕ ನಿರ್ದೇಶಕ ಫಾ| ಫ್ರಾನ್ಸಿಸ್‌
ಡಿ’ಸೋಜಾ, ಅಧ್ಯಕ್ಷ ಟೆರಿ ಪಾಯ್ಸ, ಕಾರ್ಯ ದರ್ಶಿ ಗ್ರೆಟ್ಟಾ ಪಿಂಟೊ, ಕೆಥೋಲಿಕ್‌ ಸಭಾ ವಲಯಾಧ್ಯಕ್ಷರು, ವಲಯ ಮಹಿಳಾ ಹಿತಸಮಿತಿ ಸಂಚಾಲಕಿಯರು ಉಪಸ್ಥಿತ‌ರಿದ್ದರು. ಶರಲ್‌ ಡಿ’ಸೋಜಾ ವಂದಿಸಿದರು. ಡೋಲ್ಫಿ ಸಲ್ಡಾನಾ ಮತ್ತು ಸುಜಾತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.