ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
Team Udayavani, Apr 21, 2019, 6:00 AM IST
ನೇತ್ರಾವತಿ ನದಿ ಮಧ್ಯಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾಕ್‌ವೆಲ್.
ಪುಂಜಾಲಕಟ್ಟೆ: ಮಂಗಳೂರು, ಬಂಟ್ವಾಳ ಸಹಿತ ಮುಖ್ಯ ಪಟ್ಟಣಗಳು ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಅವಲಂಬಿಸಿದ್ದರೆ, ಬಂಟ್ವಾಳ ತಾಲೂಕಿನ ಸರಪಾಡಿ ಮತ್ತು ಇತರ ಗ್ರಾಮಗಳಿಗೆ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಪಾಡಿಯಲ್ಲಿ ಸಿದ್ಧಗೊಳ್ಳುತ್ತಿದೆ. ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿ ಯುವ ನೀರು ಸರಬರಾಜು ಯೋಜನೆ ಸರಪಾಡಿಯಲ್ಲಿ ಅನುಷ್ಠಾನಗೊಂಡಿದ್ದು, 32.90 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದೆ. ಇದರಿಂದ ಈ ಭಾಗದ ಜನ ತೆಯ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ವಾಗಿ ಪರಿಹಾರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
45 ಸಾವಿರ ಮನೆಗಳಿಗೆ ಶುದ್ಧನೀರು
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ-ಬೀಯಪಾದೆಯಲ್ಲಿ ಸರಪಾಡಿ ಮತ್ತು ಇತರ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಶೀಘ್ರ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದಾರೆ. ಇದರಿಂದ ಈ ಭಾಗದ 45 ಸಾವಿರ ಮನೆಗಳಿಗೆ ಶುದ್ಧ ನೀರು ಪೂರೈಕೆಯಾಗ ಲಿದೆ. ಯೋಜನೆ ಅನುಷ್ಠಾನದಿಂದ ಕೊಳವೆ ಬಾವಿಯ ಬಳಕೆ ಕಡಿಮೆಯಾಗಲಿದ್ದು, ಅಂತರ್ಜಲವೂ ವೃದ್ಧಿ ಯಾಗುತ್ತದೆ. ಆದರೆ ಕುಡಿಯುವ ನೀರನ್ನು ಕೃಷಿ ಕಾರ್ಯ ಸಹಿತ ಇತರ ಕಾರ್ಯಗಳಿಗೆ ಬಳಸದೆ ಯೋಜನೆಯ ಯಶಸ್ಸಿಗೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಇಲಾಖಾ ಎಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆ.
ಸರಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿಕರೇ ಹೆಚ್ಚಿದ್ದು, ಕೃಷಿ ಚಟುವ ಟಿಕೆಗಳಿಗೆ ಕೊಳವೆ ಬಾವಿ ಯನ್ನು ಅವಲಂಬಿಸಿದ್ದಾರೆ. ಕುಡಿಯುವ ನೀರಿಗೆ ಖಾಸಗಿ ಬಾವಿಗಳಿದ್ದರೂ ಹೆಚ್ಚಿನ ಗ್ರಾಮಸ್ಥರು ಸರಕಾರಿ ಸಾರ್ವಜನಿಕ ಕುಡಿ ಯುವ ನೀರನ್ನೇ ಅವಲಂಬಿಸಿದ್ದಾರೆ. ಬೇಸಗೆಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಕೊರತೆಯಾಗುವುದರಿಂದ ನೀರಿನ ಸಮಸ್ಯೆ ಉಂಟಾಗುತ್ತದೆ. ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಅಲ್ಲಿಪಾದೆ ಮೊದಲಾದೆಡೆ ಕೃಷಿ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಕೊಳವೆ ಬಾವಿ ಬತ್ತಿ ಹೋಗಿದೆ. ಸದ್ಯ ನೀರಿನ ಪರ್ಯಾಯ ವ್ಯವಸ್ಥೆಗೆ ಗ್ರಾ.ಪಂ. ಮುಂದಾಗಿದೆ. ಮುಂದೆ ಯೋಜನೆಯಿಂದ ಶಾಶ್ವತ ಪರಿಹಾರ ದೊರಕಬಹುದು.
ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಗ್ರಾಮ ಪಂಚಾಯತ್‌ಗಳು- 9
( ಸರಪಾಡಿ, ಉಳಿ, ಬಡಗಕಜೆಕಾರು, ನಾವೂರು, ಮಣಿನಾಲ್ಕೂರು, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು, ಇರ್ವತ್ತೂರು).
ಗ್ರಾಮಗಳು- ಸರಪಾಡಿ, ದೇವಶ್ಯಮೂಡೂರು, ಉಳಿ, ಬಡಗಕಜೆಕಾರು, ತೆಂಕಕಜೆಕಾರು, ನಾವೂರು, ಮಣಿನಾಲ್ಕೂರು, ಪಿಲಾತಬೆಟ್ಟು, ಕಾವಳಮೂಡೂರು, ದೇವಸ್ಯಪಡೂರು, ಕಾವಳಪಡೂರು, ಕಾಡಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ
ಜನವಸತಿ ಪ್ರದೇಶ – 97.
ಮನೆಗಳು- 45 ಸಾವಿರ.
ಓವರ್‌ಹೆಡ್ ಟ್ಯಾಂಕ್-3.
ಆಗಸ್ಟ್‌ನಲ್ಲಿ ಪೂರ್ಣ
ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಲ ಸಂಪನ್ಮೂಲಕ್ಕೆ ಪೆರ್ಲ ಬೀಯಪಾದೆಯಲ್ಲಿ ನೇತ್ರಾವತಿ ನದಿ ಮಧ್ಯದಲ್ಲಿ ಜಾಕ್‌ವೆಲ್ ನಿರ್ಮಿಸಿ ನೀರೆತ್ತಲಾಗುವುದು. ಬಳಿಕ ತೆಕ್ಕಿಕಾಡುವಿನ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧಗೊಂಡು ಫಲಾನುಭವಿ ಗ್ರಾಮಗಳಿಗೆ ಪೂರೈಸಲಾಗುವುದು. ಎಂ.ಆರ್.ಪಿ.ಎಲ್. ಅಣೆಕಟ್ಟು ಇರುವ ಕಾರಣ ನೀರಿನ ಸಮಸ್ಯೆಯಾಗದು. ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕೃಷ್ಣ ಮಾನಪ್ಪ , ಕಿರಿಯ ಎಂಜಿನಿಯರ್, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ಬಂಟ್ವಾಳ
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.