ಪೆರ್ಮುದೆ: ಅಪಾರ ಪ್ರಮಾಣದ ಮೀನುಗಳು ಸಾವು
Team Udayavani, Jun 10, 2019, 6:10 AM IST
ಬಜಪೆ: ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯ ಮಳೆ ನೀರು ಹರಿಯುವ ತೋಡುಗಳಲ್ಲಿ ವಿಷಪೂರಿತ ನೀರು ಹರಿದು ತೋಡುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಸಾವನ್ನಪ್ಪಿವೆ. ಇದರಿಂದ ಸ್ಥಳೀಯರು ಆಂತಕಗೊಂಡಿದ್ದಾರೆ.
ಪೆರ್ಮುದೆಯ ಬಬ್ಬರಪಡ್ಪು ಹಾಗೂ ಕೆಂಪರಪಾದೆಯ ತೋಡುಗಳಲ್ಲಿ ಅಪಾರ ಪ್ರಮಾಣ ಸತ್ತಮೀನು ಕಾಣಸಿಕ್ಕಿವೆ. ಕೆಲವು ಮೀನುಗಳು ಒದ್ದಾಡಿ ಸಾವನ್ನಪ್ಪುವ ದೃಶ್ಯ ಮನ ಕಲಕುವಂತಿದೆ. ತೋಡಿನಲ್ಲಿ ಕಿಜನ್, ಅಬ್‌ರೊನಿ, ಎಟ್ಟಿ, ಮರಿಮುಗುಡು, ಕೊಂತಿ, ತೇಡೆ, ಪುರಿಯೊಳು ಹೆಸರಿನ ಮೀನುಗಳು ಸತ್ತಿರುವುದು ಕಾಣ ಸಿಕ್ಕಿದೆ.
ತೋಡಿನ ನೀರು ಮಳೆಗಾಲದಲ್ಲಿ ಬಜಪೆ ವಿಮಾನ ನಿಲ್ದಾಣ, ತೊಟ್ಟಿಲಗುರಿ ಮೂಲಕ ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಮೂಲಕ ಪಂಜದಲ್ಲಿ ನಂದಿನಿ ನದಿಯನ್ನು ಸೇರುತ್ತದೆ.
ಈ ಹಿಂದೆ ತೋಡಿನಲ್ಲಿ ಮಾರ್ಚ್, ಎಪ್ರಿಲ್ ತನಕ ಮಾತ್ರ ನೀರು ಹರಿಯುತ್ತಿತ್ತು. ಆದರೆ ಎಂಎಸ್‌ಈಝಡ್ ಕಂಪೆನಿ ಸ್ಥಾಪನೆಯಾದ ಬಳಿಕ ಕಂಪೆನಿಯೂ ವಿಷಪೂರಿತ ರಾಸಾಯನಿಕಯುಕ್ತ ನೀರನ್ನು ತೋಡಿಗೆ ಹರಿ ಬಿಡುತ್ತಿರುವುದರಿಂದ ಈಗಲೂ ಕೂಡ ತೋಡಿನಲ್ಲಿ ನೀರು ಹರಿಯುತ್ತಿದೆ. ಇದು ಕೂಡ ಮೀನುಗಳ ಸಾವಿಗೆ ಪರೋಕ್ಷ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಜಾನುವಾರಗಳ ಜೀವಕ್ಕೆ ಅಪಾಯ
ಪರಿಸರದ ಜಾನುವಾರುಗಳು ಬಾಯಾರಿಕೆಗೆ ಈ ತೋಡಿನ ನೀರನ್ನು ಆಶ್ರಯಿಸಿದ್ದವು. ಎರಡು ದಿನಗಳಿಂದ ಮೀನು ಸಾಯುತ್ತಿರುವುದರಿಂದ ಜಾನುವಾರುಗಳು ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಅಷ್ಟೇ ಅಲ್ಲದೇ ಮೀನು ಸತ್ತಿರುವ ಕಾರಣ ನೀರು ವಾಸನೆ ಬರುತ್ತಿದೆ.
ಜಿ.ಪಂ. ಸದಸ್ಯೆ ವಸಂತಿ ಕಿಶೋರ್, ಪೆರ್ಮುದೆ ಗ್ರಾ.ಪಂ. ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಕಿಶೋರ್, ಕಾರ್ಯದರ್ಶಿ ನಾಗೇಶ್ ರವಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.