ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಆರಂಭವಾದ ಸಂಘ
ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘ
Team Udayavani, Feb 17, 2020, 5:23 AM IST
ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿಗೆ ಹಟ್ಟಿಗೊಬ್ಬರ, ಅದಾಯಕ್ಕೆ ಹಾಲು ಎಂಬ ಮೂಲ ಉದ್ದೇಶದಿಂದ ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಿಸಲಾಯಿತು. ಗ್ರಾಮೀಣ ಭಾಗದ ಜನರನ್ನು ಸಂಘಟಿಸಿ ಹಾಲಿಗೆ ಉತ್ತಮ ದರವನ್ನು ಸಂಘವು ಒದಗಿಸುತ್ತಿದೆ.ಹೈನುಗಾರಿಕೆ,ಗ್ರಾಮೀಣ ಭಾಗ,
ಬಜಪೆ: ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು 1991ರಲ್ಲಿ ಇಲ್ಲಿನ ಎಕ್ಕಾರು ಗ್ರಾ.ಪಂ.ನ ಮೀನು ಮಾರುಕಟ್ಟೆಯ ಸಮೀಪದ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಯಿತು. ಭತ್ತ ಬೇಸಾಯ, ತರಕಾರಿ ಕೃಷಿಗೆ ಪೂರಕವಾಗಿ ಹೈನುಗಾರಿಕೆ ಇದ್ದಲ್ಲಿ ಮಾತ್ರ ಕೃಷಿಕರು ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದನ್ನು ಮನಗೊಂಡು ಸಂಘವನ್ನು ಆರಂಭಿಸಲಾಗಿತ್ತು.
ಕೇವಲ 2,717 ರೂ. ಪಾಲು ಬಂಡವಾಳದಲ್ಲಿ ಪ್ರಾರಂಭಗೊಂಡಿದ್ದ ಈ ಸಂಘವು ಆರಂಭದಲ್ಲಿ 57 ಸದಸ್ಯರನ್ನೊಳಗೊಂಡಿತ್ತು. 1992ರಲ್ಲಿ 78 ಸದಸ್ಯರನ್ನೊಳಗೊಂಡಿತ್ತು. ಖಾಸಗಿ ಹಾಲು ಮಾರಾಟಗಾರದ ಸ್ಪರ್ಧೆಯನ್ನು ಎದುರಿಸುವಂತಾಗಿತ್ತು. ದಿನಕ್ಕೆ 52 ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ವರ್ಷಕ್ಕೆ 19,232.30 ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿತ್ತು. ಕಳೆದ 15 ವರ್ಷಗಳಿಂದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಹಕಾರ ಸಂಘದ ಸದಸ್ಯರಲ್ಲಿ 150 ದನಗಳಿವೆ. ಸೈವಲ್, ಗಿರ್ ತಳಿಯ ದನಗಳು ಕೆಲವರಲ್ಲಿವೆ. ಇದರ ಹಾಲು “ಎ’ 2 ಗ್ರೇಡ್‌ನ್ನು ಪಡೆದಿದೆ. ಇದರ ಹಾಲಿಗೆ ಹೆಚ್ಚು ಬೇಡಿಕೆ ಇದೆ. ಸಂಘದ ಇನ್ನು ಕೆಲವರು ಈ ತಳಿಯ ದನವನ್ನು ತರಲು ಮುಂದಾಗಿದ್ದಾರೆ. ದಿನಕ್ಕೆ 550ರಿಂದ 600 ಲೀ. ಹಾಲು ಉತ್ಪಾದನೆಯಾಗುತ್ತಿದೆ. ಪ್ರಸ್ತುತ 119 ಸದಸ್ಯರಿದ್ದು ಇದರಲ್ಲಿ 62 ಸದಸ್ಯರು ಸಕ್ರಿಯವಾಗಿ ಸಂಘಕ್ಕೆ ಹಾಲು ನೀಡುತ್ತಿದ್ದಾರೆ. 26 ಮಂದಿ ಮಹಿಳಾ ಸದಸ್ಯರಿದ್ದಾರೆ. ಹಾಲು ಉತ್ಪಾದನೆಯಲ್ಲಿ ಅಧ್ಯಕ್ಷ ಲೋರೆನ್ಸ್ ಡಿ’ಕುನ್ಹಾ ಅವರು ಪ್ರಥಮ. ದಿನಕ್ಕೆ 100 ಲೀ. ಹಾಲು ಸಹಕಾರ ಸಂಘಕ್ಕೆ ನೀಡುತ್ತಿದ್ದಾರೆ. ಸದಸ್ಯರಿಗೆ ಪ್ರತಿ ಬಾರಿ ಬೋನಸ್, ಡಿವಿಡೆಂಡ್ ನೀಡಲಾಗುತ್ತದೆ. ಹೆಚ್ಚು ಹಾಲು ಉತ್ಪಾದನೆ ಮಾಡಿದವರಿಗೆ ಮಹಾಸಭೆಯಲ್ಲಿ ಉಡುಗೊರೆಯನ್ನು ನೀಡಲಾಗುತ್ತದೆ.
ಒಗ್ಗಟ್ಟಿನಿಂದ ಸಂಘ ಆರಂಭ
ಪಿ.ಬಿ. ಪಿಂಟೋ ಅವರು ಊರಿನ ಕೃಷಿಕರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಬೆಳೆಸಲು ಹಾಗೂ ಲಾಭದಾಯಕವಾಗಲು ಹಾಲು ಉತ್ಪಾದನೆಗೆ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಗ್ರಾಮದವರನ್ನು ಒಟ್ಟು ಸೇರಿಸಿ ಈ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಕಾರಣರಾಗಿದ್ದರು.
ಇತರ ಸೇವಾ ಕಾರ್ಯಗಳು
ಸಂಘದ ಸದಸ್ಯರ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ವರ್ಷದಲ್ಲಿ ರೇಬಿಸ್ ವಿರುದ್ಧ ಲಸಿಕೆ, 6ತಿಂಗಳಿಗೊಮ್ಮೆ ಕಾಲುಬಾಯಿ ಚುಚ್ಚುಮದ್ದು, ಜಂತುಹುಳು ಮಾತ್ರೆ ವಿತರಣೆ, ಕ್ಯಾಲ್ಸಿಯಂ ನೀಡಲಾಗುತ್ತದೆ. ಕೆ.ಎಂ.ಎಫ್. ಹಿಂಡಿಯೊಂದಿಗೆ ಲೋಕಲ್ ಆಗಿ ತಯಾರಿಸಿದ ವಿವಿಧ ಕಾಳುಗಳನ್ನು ಹೊಂದಿದ ಹಿಂಡಿಯನ್ನು ನೀಡಲಾಗುತ್ತದೆ. ದನಗಳಿಗೆ ವಿಮೆಯನ್ನು ಕೂಡ ಮಾಡಲಾಗಿದೆ. ಇದಕ್ಕೆ ಕೆಎಂಎಫ್ ಸಹಕಾರ ನೀಡುತ್ತಿದೆ. ವರ್ಷಕ್ಕೆ ತಲಾ 3 ಲಕ್ಷದಂತೆ ಸಂಘ ಲಾಭ ಗಳಿಸುತ್ತಾ ಬಂದಿದೆ. ಹಾಲು “ಎ’ ಗ್ರೇಡ್ ಪಡೆದಿದೆ. ಆಡಿಟ್‌ನಲ್ಲಿಯೂ ಕೂಡ ಸಂಘ “ಎ” ಗ್ರೇಡ್ ಪಡೆದಿದೆ. ಹಾಲು “ಎ’ ಗ್ರೇಡ್ ಇದ್ದ ಕಾರಣ ಸ್ಥಳೀಯ ಗ್ರಾಹಕರಿಂದ ಒಳ್ಳೆಯ ಬೇಡಿಕೆ ಇದೆ.
ಸಂಘದ ಎಲ್ಲ ಸದಸ್ಯರ ದನಗಳು ಆರೋಗ್ಯವಂತಾಗಿರಲು ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತದೆ. ಇದರಿಂದ ಹಾಲು ಆರೋಗ್ಯಪೂರ್ಣವಾಗಿರಲಿದ್ದು ಉತ್ತಮ ದರ ಕೂಡ ಸಿಗಲಿದೆ. ಸಂಘವೂ ಲಾಭದಾಯಕವಾಗುತ್ತದೆ. ಸದಸ್ಯರೆಲ್ಲರ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ.
– ಲೋರೆನ್ಸ್ ಡಿ’ಕುನ್ಹಾ,ಅಧ್ಯಕ್ಷರು, ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘ.
ಅಧ್ಯಕ್ಷರು
ಅಲೊ³àನ್ಸ್ ಫೆರ್ನಾಂಡಿಸ್ ,ಆಲ್ಬರ್ಟ್ ಪಿಂಟೋ ಅವರು ಅಧ್ಯಕ್ಷರಾಗಿದ್ದರು. ಪ್ರಸ್ತುತ ಲೋರೆನ್ಸ್ ಡಿಕುನ್ಹಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯದರ್ಶಿ
ಸ್ಥಾಪನೆಯಾದ ದಿನದಿಂದ ಇಂದಿನ ತನಕ ಸ್ಟೇನಿ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-ಸುಬ್ರಾಯ ನಾಯಕ್, ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.