ಕೋಸ್ಟಲ್‌ವುಡ್‌ಗೆ ಬರಲಿದ್ದಾರೆ ‘ಪೆಟ್ ಕಮ್ಮಿ’ಗಳು !
Team Udayavani, Mar 29, 2018, 3:41 PM IST
‘ಅಪ್ಪೆ ಟೀಚರ್’ ಅಧ್ಯಾಯ ಕರಾವಳಿಯಲ್ಲಿ ತುಳು ಸಿನೆಮಾ ಇಂಡಸ್ಟ್ರಿಗೆ ಸಾಕಷ್ಟು ಮಾರ್ಕ್ ತರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ‘ತೊಟ್ಟಿಲ್’ ಸಿನೆಮಾ ಕೂಡ ಪೂರಕವಾಗಿ ಹೆಸರು ಮಾಡಿದೆ. ಹೀಗಾಗಿ ಕೋಸ್ಟಲ್‌ವುಡ್ ಅಂಗಳ ಮೆಲ್ಲನೆ ಹೊಸ ಲುಕ್ ಪಡೆದುಕೊಳ್ಳುತ್ತಿದೆ. ಕೆಲವು ದಿನದಿಂದ ಸ್ವಲ್ಪ ಮಟ್ಟಿಗೆ ಬಿಕೋ ಎನ್ನುತ್ತಿದ್ದ ತುಳು ಸಿನೆಮಾ ಲೋಕದಲ್ಲಿ ಈಗ ಸ್ವಲ್ಪ ಚೇತರಿಕೆ ಬಂದಂತಾಗಿದೆ.
ಇದೇ ಮೂಡ್‌ನಲ್ಲಿ ಇನ್ನೊಂದು ವಿಭಿನ್ನ ಟೈಟಲ್‌ನ ಸಿನೆಮಾವೊಂದು ರಿಲೀಸ್‌ಗಾಗಿ ಕಾಯುತ್ತಿದೆ. ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಕಥೆ ಹಾಗೂ ಹೊಸ ಕಲಾವಿದರ ಜತೆಗೆ ಹೆಣೆದ ವಿನೂತನ ಶೈಲಿಯ ‘ಪೆಟ್‌ಕಮ್ಮಿ’ ಈಗಾಗಲೇ ಸೆನ್ಸಾರ್ ಪಡೆದು, ಎ. 13ರ ಸುಮಾರಿಗೆ ರಿಲೀಸ್ ಮಾಡುವ ಬಗ್ಗೆ ಪೂರ್ವಭಾವಿ ಸೂಚನೆಯನ್ನು ಕೋಸ್ಟಲ್‌ವುಡ್‌ನಲ್ಲಿ ಹರಿಯಬಿಟ್ಟಿದೆ.
ತುಳು ಸಿನೆಮಾ ನಿರ್ಮಾಪಕರ ಸಂಘ ಈಗಾಗಲೇ ಘೋಷಣೆ ಮಾಡಿದಂತೆ ಒಂದು ಸಿನೆಮಾ ರಿಲೀಸ್ ಆಗಿ ಮೂರು ವಾರಗಳ ಗ್ಯಾಪ್ ಕೊಟ್ಟು ಬಳಿಕ ಇನ್ನೊಂದು ತುಳು ಸಿನೆಮಾ ರಿಲೀಸ್ ಆಗಬೇಕು ಎಂಬ ಸೂಚನೆಯನ್ನು ನೀಡಿತ್ತು. ಇದು ತುಳು ಸಿನೆಮಾ ಲೋಕ ಹಾಗೂ ಪ್ರೇಕ್ಷಕರ ಹಿತದೃಷ್ಟಿಯಿಂದ ಕೂಡ ಉತ್ತಮ ನಿರ್ಧಾರವಾಗಿತ್ತು. ಆದರೆ, ಕೆಲವರು ಇದನ್ನು ಮೀರಿ ಒಂದೇ ದಿನ ಎರಡು ಸಿನೆಮಾ ರಿಲೀಸ್‌ಗೆ ಸಿದ್ಧರಾಗಿದ್ದರು. ಆದರೆ, ಇಂತಹ ತಪ್ಪುಗಳು ನಡೆಯಬಾರದು ಎಂಬ ಕಾಳಜಿಯಿಂದ ಹಾಗೂ ತುಳು ಸಿನೆಮಾದೊಳಗೆಯೇ ಯಾವುದೇ ಸ್ಪರ್ಧೆ ನಡೆಯಬಾರದು ಎಂಬ ಕಾರಣದಿಂದ ‘ಅಪ್ಪೆ ಟೀಚರ್’ ರಿಲೀಸ್ ಆಗಿ ಮೂರು ವಾರದ ಬಳಿಕವಷ್ಟೇ ‘ಪೆಟ್‌ಕಮ್ಮಿ’ ರಿಲೀಸ್‌ಗೆ ನಿರ್ಧರರಿಸಲಾಗಿದೆ.
ಸುದೀರ್ಘ ವರ್ಷ ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಉಡುಪಿ ಮೂಲದ ಅಶೋಕ್ ಶೆಟ್ಟಿ ನಿರ್ಮಿಸಿದ ‘ಪೆಟ್ ಕಮ್ಮಿ’ ರಿಲೀಸ್ ಬಗ್ಗೆ ‘ಕುಡ್ಲ ಟಾಕೀಸ್’ ಜತೆಗೆ ಅವರು ಮಾತನಾಡಿದ್ದಾರೆ. ‘ಅಪ್ಪೆ ಟೀಚರ್’ ಸದ್ಯ ಉತ್ತಮವಾಗಿ ರೆಸ್ಪಾನ್ಸ್ ಪಡೆಯುತ್ತಿದೆ. ಮೂರು ವಾರ ಆದ ಬಳಿಕ ನಾವು ತೆರೆಗೆ ಬರಲಿದ್ದೇವೆ. ಒಂದು ವೇಳೆ ‘ಅಪ್ಪೆ ಟೀಚರ್’ ಇನ್ನಷ್ಟು ದಿನ ಸಕ್ಸಸ್ ಆಗುತ್ತಿದ್ದರೆ ನಮ್ಮ ದಿನಾಂಕದಲ್ಲಿ ಬದಲಾವಣೆ ಮಾಡಲು ರೆಡಿಯಾಗಿದ್ದೇವೆ. ಯಾಕೆಂದರೆ, ಸಿನೆಮಾ ಮಾಡಿದವರಿಗೆ ಹಾಗೂ ಪ್ರೇಕ್ಷಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಹೀಗಾಗಿ ನಾವು ಸೆನ್ಸಾರ್ ಪಡೆದು ರೆಡಿಯಾಗಿದ್ದರೂ, ಸ್ಪರ್ಧೆಗೆ ಇಳಿಯುವುದಿಲ್ಲ ಎನ್ನುತ್ತಾರೆ.
‘ಪೆಟ್ ಕಮ್ಮಿ’ ತುಳು ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಗೆ ಕಾರಣವಾದ ಹಾಗೂ ಒಂದಿಷ್ಟು ವಿವಾದವನ್ನೂ ಹುಟ್ಟು ಹಾಕಿದ ಚಿತ್ರ. ಮಾಲ್ಗುಡಿ ಡೇಸ್ ಬ್ಯಾನರ್‌ನಡಿ ಈ ಚಿತ್ರ ರೆಡಿಯಾಗಿದೆ. ತುಳು ಲಿಪಿಯಲ್ಲಿ ತುಳು ಚಿತ್ರದ ಟೈಟಲ್ ಮಾಡುವ ಮೂಲಕ ಮೊದಲ ಬಾರಿಗೆ ಸುದ್ದಿಗೆ ಬಂದ ಪೆಟ್ ಕಮ್ಮಿ ಅನಂತರ ಒಂದೊಂದೇ ರೀತಿಯ ಅವತಾರಗಳ ಮೂಲಕ ಗಮನ ಸೆಳೆಯಿತು. ಈ ಚಿತ್ರದ ಟ್ರೈಲರ್ ಕೂಡ ಹೊಸ ನಿರೀಕ್ಷೆ ಮೂಡಿಸಿದೆ.
ಮನುಷ್ಯ ತನ್ನ ಜೀವನ ಮೌಲ್ಯವನ್ನೇ ತಿಳಿಯದೆ ಅರೆಹುಚ್ಚನಂತೆ ಹೇಗೆ ವಿನಾಶದ ಹಾದಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಸಾರ. ಆರು ಮಂದಿ ಗೆಳೆಯರು ಒಟ್ಟು ಸೇರಿದಾಗ ಏನೆಲ್ಲ ಮಾಡುತ್ತಾರೆ? ಅವರೊಳಗೆ ಏನೆಲ್ಲ ಆಗಲಿದೆ? ಮುಂದೆ ಏನಾಗುತ್ತೆ? ಹೀಗೆ ನೂರೊಂದು ವಿಚಾರಗಳ ಬಗ್ಗೆ ಸಿನೆಮಾ ಬೆಳಕು ಚೆಲ್ಲುತ್ತದೆ. ಭೂಕಂಪ, ಸುನಾಮಿ, ಬರಗಾಲ, ಹೆಚ್ಚಿದ ತಾಪಮಾನ ಹೀಗೆ ನೂರೊಂದು ಪ್ರಾಕೃತಿಕ ಸಮಸ್ಯೆಯಿಂದ ಜನ ಸತ್ತರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕಾದೀತು? ಇರುವ ಮರ ಗಿಡವನ್ನೆಲ್ಲ ಕಡಿದು, ಪರಿಸರವನ್ನೇ ಹಾಳು ಮಾಡುವಾಗ ಈ ಬಗ್ಗೆ ಒಂದಿನಿತು ಬೇಸರ ಪಟ್ಟುಕೊಳ್ಳದ ನಾವು ಪ್ರಾಕೃತಿಕ ವಿಕೋಪದಿಂದ ಸಾವು- ನೋವು ಆದಾಗ ಬೊಬ್ಬೆ ಹಾಕಿ ಕಿರುಚುತ್ತೇವೆ. ಇಂತಹ ಸಂಗತಿಗಳು ನಮಗೆ ಯಾಕೆ ಮುಖ್ಯವಾಗುವುದಿಲ್ಲ ಎಂಬ ಆಶಯವಿರಿಸಿ ‘ಪೆಟ್ಟ್ ಕಮ್ಮಿ’ ರೆಡಿ ಮಾಡಲಾಗಿದೆ ಎಂಬುದು ವಿಶೇಷ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.