ಕರಾವಳಿಯಲ್ಲಿ ಪೆಟ್ರೋಲ್, ಡೀಸೆಲ್ ದರ
Team Udayavani, Nov 5, 2021, 6:32 AM IST
ಮಂಗಳೂರು/ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರವು ತೈಲ ಬೆಲೆಯನ್ನು ಇಳಿಕೆ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ತುಸು ನೆಮ್ಮದಿ ತಂದಿದೆ.
ಬುಧವಾರ ರಾತ್ರಿ ವೇಳೆಗೆ ಕೇಂದ್ರ ಸರಕಾರವು ಪೆಟ್ರೋಲ್‌ಗೆ 5 ರೂ. ಮತ್ತು ಡೀಸೆಲ್‌ಗೆ 10 ರೂ. ಅಬಕಾರಿ ಸುಂಕವನ್ನು ಇಳಿಕೆ ಮಾಡಿದ್ದು, ಅದರಂತೆಯೇ ದ.ಕ. ಜಿಲ್ಲೆಯಲ್ಲಿ ಗುರುವಾರ ನೂತನ ದರದಲ್ಲಿ ತೈಲ ಮಾರಾಟವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್‌ಗೆ ತಲಾ 7 ರೂ. ಅಬಕಾರಿ ಸುಂಕ ಕಡಿತಗೊಳಿಸಿದ್ದರೂ ಈ ದರ ಗುರುವಾರ ಸಂಜೆ 6 ಗಂಟೆಯ ಬಳಿಕವಷ್ಟೇ ಜಿಲ್ಲೆಯಲ್ಲಿ ಜಾರಿಗೆ ಬಂದಿತ್ತು.ಮಂಗಳೂರಿನಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ಪೆಟ್ರೋಲ್‌ಗೆ ಲೀಟರ್‌ಗೆ 106.24 ರೂ. ಮತ್ತು ಡೀಸೆಲ್‌ಗೆ 91.23 ರೂ. ದರ ನಿಗದಿಯಾಗಿತ್ತು. ರಾತ್ರಿ ವೇಳೆಗೆ ದರ ಬದಲಾವಣೆಯಾಗಿದ್ದು, ಪೆಟ್ರೋಲ್‌ಗೆ ಲೀಟರ್‌ಗೆ 99.76 ರೂ. ಮತ್ತು ಡೀಸೆಲ್‌ಗೆ 84.24 ರೂ. ದರ ಜಾರಿಯಾಗಿತ್ತು. ನೂತನ ದರ ರಾತ್ರಿ ವೇಳೆ ಜಾರಿಯಾದ ಪರಿಣಾಮ ರಾತ್ರಿ ವೇಳೆಗೆ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳು ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
ಗೊಂದಲಕ್ಕೆ ಕಾರಣವಾದ ಅಸ್ಪಷ್ಟ ಸೂಚನೆ:
ರಾಜ್ಯ ಸರಕಾರ ಕೂಡ ಪೆಟ್ರೋಲ್, ಡೀಸೆಲ್‌ಗೆ ಪರಿಷ್ಕೃತ ದರವನ್ನು ಬುಧವಾರ ರಾತ್ರಿಯೇ ಘೋಷಿಸಿದ್ದರೂ ನಿರ್ದಿಷ್ಟ ಸಮಯವನ್ನು ಸೂಚಿಸದ ಕಾರಣ ಗೊಂದಲಕ್ಕೆ ಕಾರಣವಾಯಿತು.
ಪರಿಷ್ಕೃತ ದರ ಘೋಷಿಸುವಾಗ ಸರಕಾರವು ಗುರುವಾರ ಸಂಜೆಯಿಂದ ಜಾರಿಗೆ ಬರಲಿದೆ ಎಂದಷ್ಟೇ ತಿಳಿಸಿತ್ತು. ಮಂಗಳೂರು ನಗರದಲ್ಲಿ ಸಂಜೆ 6 ಗಂಟೆಗೆ ಜಾರಿಗೆ ಬಂದರೂ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ತಾಲೂಕು ಸೇರಿದಂತೆ ಕೆಲವು ಕಡೆಗಳ ಬಂಕ್‌ಗಳಲ್ಲಿ ಬೆಳಗ್ಗಿನ ದರದಲ್ಲೇ ಮಾರಾಟ ಮಾಡಲಾಯಿತು. ಇದಕ್ಕೆ ಗ್ರಾಹಕರಿಂದ ವಿರೋಧ ವ್ಯಕ್ತವಾಗಿದ್ದು, ಕೆಲವು ಕಡೆಗಳಲ್ಲಿ ಗ್ರಾಹಕರು ಮತ್ತು ಬಂಕ್ ಸಿಬಂದಿ ನಡುವೆ ವಾಗ್ವಾದಕ್ಕೂ ಕಾರಣವಾಯಿತು.
ಡೀಲರ್‌ಗಳ ಹಸ್ತಕ್ಷೇಪವಿಲ್ಲ:
ಉಡುಪಿ: ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿಯಲ್ಲಿ ಡೀಲರ್‌ಗಳ ಯಾವುದೇ ಹಸ್ತಕ್ಷೇಪವಿಲ್ಲ ಎಂದು ರಾಜ್ಯ ಪೆಟ್ರೋಲಿಯಂ ವಿತರಕರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಆನಂದ ಕಾರ್ನಾಡ್ ತಿಳಿಸಿದ್ದಾರೆ.
ಗುರುವಾರ ಸಂಜೆ 6ಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಿಂದ ರಾಜ್ಯದ ಕೊಡುಗೆಯಾಗಿ ದರವನ್ನು ಪರಿಷ್ಕರಿಸಿದ ಮಾಹಿತಿ ಬಂದಿತ್ತು. ಆದರೆ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ರಾತ್ರಿ 8.30ಕ್ಕೆ ಸಂದೇಶ ಬಂದಿತ್ತು. ಆದರೆ ದರ ಗುರುವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯ ಎಂದು ಬಂದಿದೆ. ನಮಗೆ ಅಧಿಕೃತ ಆದೇಶಗಳು ಬಾರದೆ ದರವನ್ನು ಪರಿಷ್ಕರಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.