ಕಾನಕೆರೆ ಬಾವಿಯ ತೈಲ ಬಂಕ್‌ ಟ್ಯಾಂಕ್‌ನಿಂದ ಸೋರಿದ್ದು

Team Udayavani, Nov 20, 2018, 9:52 AM IST

ullala.jpg

ಉಳ್ಳಾಲ: ದೇರಳಕಟ್ಟೆಯ ಕಾನಕೆರೆ ಬಾವಿಯಲ್ಲಿ ಪತ್ತೆಯಾದ ತೈಲಕ್ಕೆ ಸಂಬಂಧಿಸಿ ಪರಿಸರ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳೀಯ ಪೆಟ್ರೋಲ್‌ ಪಂಪ್‌ನ ಟ್ಯಾಂಕ್‌ ಮರು ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್‌ ಪಂಪ್‌ನಿಂದ ಸೋರಿಕೆಯೇ ಬಾವಿ ನೀರಿಗೆ ತೈಲ ಮಿಶ್ರಣಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಪತ್ತೆಯಾಗಿದ್ದು, ಮಂಗಳವಾರ ಐಒಸಿಎಲ್‌ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಲಿದ್ದಾರೆ.

ಎರಡು ವಾರಗಳ ಹಿಂದೆ ಕಾನಕೆರೆಯ ಮೂರು ಬಾವಿಗಳಲ್ಲಿ ತೈಲ ಅಂಶ ಪತ್ತೆಯಾಗಿ ಜನರು ಆತಂಕಪಟ್ಟಿದ್ದರು. ಸ್ಥಳೀಯ ಪೆಟ್ರೋಲ್‌ ಪಂಪ್‌ ಇದಕ್ಕೆ ಕಾರಣ ಎಂಬ ಹಿನ್ನೆಲೆಯಲ್ಲಿ ಒಂದು ದಿನ ವ್ಯವಹಾರ ಸ್ಥಗಿತಗೊಳಿಸಿ ಪರಿಶೀಲನೆ ನಡೆಸಲಾಗಿತ್ತು. ಆಗ ಸೋರಿಕೆ ಕಂಡು ಬರದಿದ್ದುದರಿಂದ ಪಂಪ್‌ ವ್ಯವಹಾರ ಆರಂಭಿಸಿತ್ತು. 

ಮೂರೂ ಬಾವಿಗಳ ನೀರು ಖಾಲಿ ಮಾಡಿಸಿ ಮತ್ತೆ ನೀರು ತುಂಬಿದಾಗ ಒಂದು ಬಾವಿಯಲ್ಲಿ ಪೆಟ್ರೋಲ್‌ ಅಂಶ ಕಂಡುಬಂದಿತ್ತು. ಈ ನಿಟ್ಟಿನಲ್ಲಿ ಮೂರು ಬಾವಿಗಳನ್ನು ಪಂಚಾಯತ್‌ ವಶಕ್ಕೆ ಪಡೆದಿತ್ತು. ಕಳೆದ ಶನಿವಾರ ಮತ್ತೆ ಬಂಕ್‌ ಬಂದ್‌ ಮಾಡಲಾಗಿದ್ದು, ಡೀಸೆಲ್‌ ಮತ್ತು ಪೆಟ್ರೋಲ್‌ ಟ್ಯಾಂಕ್‌ ಖಾಲಿ ಮಾಡಿ ನೀರು ತುಂಬಲಾಗಿತ್ತು. ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಟ್ಯಾಂಕ್‌ ತೆರೆದಾಗ ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಸೋರಿಕೆಯಾಗಿದ್ದು ಕಂಡು ಬಂತು. ಬಿಸಿಲಿನಿಂದ ಇದಾಗಿದೆ ಎಂದು ಅಂದಾಜಿಸಲಾಯಿತಾದರೂ ಅನುಮಾನ ಪರಿಹಾರಕ್ಕಾಗಿ ಟ್ಯಾಂಕ್‌ನೊಳಗೆ ಕಂಪ್ರಸರ್‌ ಬಳಸಿ ಗಾಳಿ ತುಂಬಿಸಿದಾಗ ನೀರು ರಭಸವಾಗಿ ಹೊರಬಂತು. ಮತ್ತೂಮ್ಮೆ ಗಾಳಿ ತುಂಬಿಸಿ ನೀರು ಹಾಕಿದಾಗ ಸೋರಿಕೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ್‌ ನಾಯಕ್‌, ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಸೋರಿಕೆ ಇರುವ ಕಾರಣ ಅದನ್ನು ಬದಲಾಯಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಐಒಸಿಎಲ್‌ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

3

Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.