ಫಲ್ಗುಣಿ ನದಿ: ಗರಿಗೆದರಿದ ಹಿನ್ನೀರ ಟೂರಿಸಂ


Team Udayavani, Feb 7, 2019, 4:49 AM IST

february-2.jpg

ಮಹಾನಗರ: ಇತ್ತೀಚೆಗೆ ನಡೆದ ಯಶಸ್ವಿ ರಿವರ್‌ ಫೆಸ್ಟ್‌ ಬೆನ್ನಲ್ಲೇ ಇದೀಗ ಫಲ್ಗುಣಿ ನದಿಯಲ್ಲಿ ಕ್ರೂಸ್‌ ರೆಸ್ಟೋರೆಂಟ್‌, ವಾಟರ್‌ ನ್ಪೋರ್ಟ್ಸ್ ಆರಂಭಿಸುವುದಕ್ಕೆ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಹಿನ್ನೀರ ಪ್ರವಾಸೋದ್ಯಮ ಗರಿಬಿಚ್ಚಿಕೊಳ್ಳುತ್ತಿದೆ.

ಪ್ರಾರಂಭಿಕ ಹಂತದಲ್ಲಿ ಫಲ್ಗುಣಿ ನದಿಯಲ್ಲಿ ಕ್ರೂಸ್‌ ರೆಸ್ಟೋರೆಂಟ್‌, ವಾಟರ್‌ ಸ್ಪೋರ್ಟ್ಸ್ ಪ್ರಾರಂಭಿಸುವುದಕ್ಕೆ ಈಗಾಗಲೇ ಎರಡು ಸಂಸ್ಥೆಗಳು ಆಸಕ್ತಿ ತೋರಿಸಿದ್ದು, ಅದರಂತೆ ಜಿಲ್ಲಾಡಳಿತವು 5 ವರ್ಷಗಳ ಅವಧಿಗೆ ಅನುಮತಿ ನೀಡಿದೆ. ವಿಶೇಷ ಅಂದರೆ, ನದಿ ಉತ್ಸವದ ಬಳಿಕ ಇನ್ನಷ್ಟು ಸಂಸ್ಥೆಗಳು ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಲು ಆಸಕ್ತಿ ತೋರಿಸಿರುವುದು ಗಮನಾರ್ಹ. ಹೀಗಾಗಿ ಜಿಲ್ಲೆಯಲ್ಲಿ ಜಲ ಪ್ರವಾಸೋದ್ಯಮದ ಹೊಸ ಅಧ್ಯಾಯಕ್ಕೆ ಚಾಲನೆ ದೊರಕಿರುವುದು ಶ್ಲಾಘನೀಯ.

ಫಲ್ಗುಣಿಯಲ್ಲಿ ಕುಳೂರಿನಿಂದ ತಣ್ಣೀರುಬಾವಿವರೆಗೆ ವಾಟರ್‌ ಸ್ಪೋರ್ಟ್ಸ್ ಆರಂಭಿಸಲು ಒಟ್ಟು 4 ಸಂಸ್ಥೆಗಳು ಅನುಮತಿ ಕೋರಿದ್ದು, ಆ ಪೈಕಿ ಆರಂಭಿಕವಾಗಿ ಮುರ್ಡೇಶ್ವರದ ನೇತ್ರಾಣಿ ಸ್ನೋರ್ಕೆಲಿಂಗ್‌ ಅಡ್ವೆಂಚರ್‌, ಮಂ ಳೂರಿನ ವಂಡರ್‌ ಸ್ಲ್ಯಾಶ್‌ ಎಂಬ ಎರಡು ಸಂಸ್ಥೆಗಳಿಗೆ ಜನವರಿ 1ರಿಂದ ಅನ್ವಯವಾಗುವಂತೆ 5 ವರ್ಷಗಳ ಅವಧಿಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅನುಮತಿ ನೀಡಿದೆ. ಇದರಲ್ಲಿ ವಂಡರ್‌ ಸ್ಲ್ಯಾಶ್‌ ಸಂಸ್ಥೆ ಫಲ್ಗುಣಿಯಲ್ಲಿ ಕ್ರೂಸ್‌ ರೆಸ್ಟೋರೆಂಟ್‌ (ತೇಲುವ ಹೊಟೇಲ್‌) ನಡೆಸಲು ಕೂಡ ಅನುಮತಿ ಪಡೆದಿದೆ. ಜಲ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದರಲ್ಲಿ 1 ವರ್ಷ ಅವಧಿಯನ್ನು ಪ್ರೊವಿಜನಲ್‌ ವರ್ಷ ಎಂದು ಪರಿಗಣಿಸಿ ಆಯೋಜಕರಿಗೆ ಯಾವುದೇ ವಾರ್ಷಿಕ
ಲೈಸೆನ್ಸ್‌ ಶುಲ್ಕವನ್ನು ವಿಧಿಸಿಲ್ಲ. ಒಂದು ವರ್ಷದ ಪ್ರಗತಿಯನ್ನು ಪರಿಶೀಲಿಸಿ ಶುಲ್ಕ, ಪರವಾನಿಗೆ ಸ್ವರೂಪವನ್ನು ನಿರ್ಧರಿಸಲು ಸಮಿತಿ ತೀರ್ಮಾನಿಸಿದೆ.

ಜಲಕ್ರೀಡೆ ಚಟುವಟಿಕೆ
ಫಲ್ಗುಣಿ ನದಿಯಲ್ಲಿ ಕೂಳೂರಿನಿಂದ ತಣ್ಣೀರುಬಾವಿಯಲ್ಲಿರುವ ವಿಮಾನ ದುರಂತದಲ್ಲಿ ಮಡಿದವರ ಸ್ಮಾರಕದ ಹಿಂಬದಿಯ ನದಿದಂಡೆಯವರೆಗೆ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಜಲಕ್ರೀಡೆಗಳನ್ನು
‌ನಡೆಸಬಹುದಾಗಿದೆ. 

ಇದರಲ್ಲಿ ಸ್ಪೀಡ್‌ಬೋಟು, ಜೆಟ್‌ಸ್ಕಿ , ಬನಾನ ಆ್ಯಂಡ್‌ ಬಂಪಿ ರೈಡ್‌, ಫ್ಲೈ ಫಿಶ್‌, ಪೆಡಲ್‌ ಬೋಟು, ಕಯಾಕ್‌, ಇನ್‌ ಪ್ಲೆಟೆಬಲ್‌ ಟೊವೆಬಲ್‌, ಸ್ಲಿàಪರ್‌ ಬಂಪರ್‌, ಸ್ನೊರ್ಕೆಲಿಂಗ್‌ ಕ್ರೀಡೆಗಳು ನಡೆಸಲು ಉದ್ದೇಶಿ ಸಲಾಗಿದೆ. ವಂಡರ್‌ ಸ್ಲ್ಯಾಶ್‌ ಸಂಸ್ಥೆ ಈಗಾಗಲೇ ಗೋವಾ, ಕಾರವಾರಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಸುಮಾರು 30 ವರ್ಷಗಳು ಅನುಭವ ಹೊಂದಿದೆ.

30 ಬೋಟು
ನದಿ ಉತ್ಸವದ ಸಂದರ್ಭ ಮಂಗಳೂರಿನಲ್ಲಿ ಸ್ಪೀಡ್‌ಬೋಟು, ಜೆಟ್‌ಸ್ಕಿ, ಫೆರ್ರಿ ಬೋಟು ಗಳು ಸಹಿತ ಸುಮಾರು 30 ಬೋಟುಗಳನ್ನು ಹಾಕಿದ್ದರು.

ನೇತ್ರಾಣಿ ಸ್ನೊರ್ಕೆಲಿಂಗ್‌ ಅಡ್ವೆಂಚರ್‌ ಈಗಾಗಲೇ ಮುರ್ಡೆಶ್ವರ, ಮಲ್ಪೆಯಲ್ಲಿ ವಾಟರ್‌ ಸ್ಪೋರ್ಟ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನದಿ ಉತ್ಸವದಲ್ಲಿ ಪಾಲ್ಗೊಂಡು ವಾಟರ್‌ ಸ್ಪೋರ್ಟ್ಸ್ ಗಳನ್ನು 
ಆಯೋಜಿಸಿತ್ತು. ರೆಗ್ಯುಲರ್‌ ಆಗಿ ಈಗಾಗಲೇ ಕುಳೂರು ಬಳಿ ಫಲ್ಗುಣಿ ನದಿಯಲ್ಲಿ ವಾಟರ್‌ ಸ್ಪೋರ್ಟ್ಸ್ ಗಳನ್ನು ಆರಂಭಿಸಿದೆ.

ಜಲ ಪ್ರವಾಸೋದ್ಯಮ
ಆದರೆ ಇದಕ್ಕೆ ಪ್ರಚಾರ ದೊರೆಯಬೇಕಾಗಿದೆ. ಇಲ್ಲಿ ಜಲ ಪ್ರವಾಸೋದ್ಯಮ ಜನಪ್ರಿಯವಾಗುವ
ವಿಶ್ವಾಸವಿದೆ. ಎಪ್ರಿಲ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಇಲ್ಲಿ ವಾಟರ್‌ ಸ್ಪೋರ್ಟ್ಸ್ 
ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಪಾಲುದಾರ ಹರೀಶ್‌ ಹರಿಕಾಂತ್‌ ಹೇಳುತ್ತಾರೆ.

ಮೂಲಸೌಕರ್ಯ ಅಭಿವೃದ್ಧಿಗೆ 5 ಕೋ.ರೂ. ಪ್ರಸ್ತಾವ 
ಫಲ್ಗುಣಿ ನದಿಯಲ್ಲಿ ತಣ್ಣೀರು ಬಾವಿಯವರೆಗೆ ಜಲಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರದ ಸ್ವದೇಶ್‌ ದರ್ಶನ್‌ ಕೋಸ್ಟಲ್‌ ಟೂರಿಸಂ ಯೋಜನೆಯಡಿ ಈಗಾಗಲೇ 5 ಕೋ. ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಜತೆಗೆ ಸಸಿಹಿತ್ಲು ನದಿಕಿನಾರೆ ಅಭಿವೃದ್ಧಿಗೂ 4.83 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಪ್ರಸ್ತಾವ ಕಳುಹಿಸಲಾಗಿದೆ. ಕೂಳೂರಿನಿಂದ ತಣ್ಣೀರುಬಾವಿವರೆಗಿನ ನದಿ ಕಿನಾರೆಯಲ್ಲಿ ಲ್ಯಾಂಡ್‌ಸ್ಕೇಪಿಂಗ್‌, ಪಾಥ್‌ ವೇ, ಪಾದಚಾರಿಗಳ ನಡೆದಾಡಲು ಪಾದಚಾರಿ ಮಾರ್ಗ, ಜಲಶುದ್ಧೀಕರಣ ಸ್ಥಾವರ, ತಾತ್ಕಾಲಿಕ ವಿಶ್ರಾಂತಿ ಕೊಠಡಿ, ಕೂಳೂರು ಸೇತುವೆ, ಸುಲ್ತಾನ್‌ ಬತ್ತೇರಿ, ಕೂಳೂರು ಬೆಂಗ್ರೆಯಲ್ಲಿ ಜೆಟ್ಟಿ ನಿರ್ಮಾಣವು ಒಳಗೊಂಡಿದೆ. 13 ಜೆಟ್ಟಿಗಳ ನಿರ್ಮಾಣಕ್ಕೆ ರಾಜ್ಯ ಸರಕಾರದ ಬಜೆಟ್‌ನಲ್ಲಿ ಅನುದಾನ ಒದಗಿಸುವುದಕ್ಕೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

 ಜಲಪ್ರವಾಸೋದ್ಯಮಕ್ಕೆ ಒಲವು
ನದಿ ಉತ್ಸವದ ಬಳಿಕ ಮಂಗಳೂರಿನಲ್ಲಿ ಜಲಪ್ರವಾಸೋದ್ಯಮಕ್ಕೆ ಒಲವು ಹೆಚ್ಚುತ್ತಿದೆ. ಫಲ್ಗುಣಿ ನದಿಯಲ್ಲಿ ವಾಟರ್‌ ನ್ಪೋರ್ಟ್ಸ್ ಸಹಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಲು 4 ಸಂಸ್ಥೆಗಳು ಮುಂದೆ ಬಂದಿವೆ. ಇದರಲ್ಲಿ ಎರಡಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ವ್ಯವಸ್ಥಿತ ಜೆಟ್ಟಿ, ಮೂಲಸೌಕರ್ಯಗಳ ನಿರ್ಮಾಣಕ್ಕೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಜಲಪ್ರವಾಸೋದ್ಯಮ ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.
– ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ

ಜಲಪ್ರವಾಸೋದ್ಯಮಕ್ಕೆ ಅವಕಾಶ 
ಮಂಗಳೂರಿನಲ್ಲಿ ಜಲಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ವಾಟರ್‌ಸ್ಪೋರ್ಟ್ಸ್,  ಪ್ರವಾಸೋದ್ಯಮ ಚಟುವಟಿಕೆಗಳನ್ನು ಮುಂದಿನ ತಿಂಗಳು ಆರಂಭಿಸಲಾಗುವುದು. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ದೇಶದ ಇತರ ವಾಟರ್‌  ಸ್ಪೋರ್ಟ್ಸ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಸಹಿತ ಕೆಲವು ಯೋಜನೆಗಳು ಅಗತ್ಯ ಎಂದು ಸಂಸ್ಥೆಯ ಆಡಳಿತ ಪಾಲುದಾರ ರವಿ ಪೌಲ್‌ ತಿಳಿಸಿದ್ದಾರೆ.

ಕೇಶವ ಕುಂದರ್‌

ಟಾಪ್ ನ್ಯೂಸ್

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.