ಮಳವೂರಿನಿಂದ 13 ಗ್ರಾಮಗಳಿಗೆ ಜೀವ ನದಿಯಾದ ಫಲ್ಗುಣಿ
ಬಹುಗ್ರಾಮ ಕುಡಿಯುವ ನೀರು ಯೋಜನೆ
Team Udayavani, May 19, 2019, 6:05 AM IST
ಮಳವೂರಿನಲ್ಲಿರುವ ಫಲ್ಗುಣಿ ನದಿ.
ಬಜಪೆ: ಮಳವೂರು ವೆಂಟೆಡ್ ಡ್ಯಾಂ ನಿರ್ಮಾಣದ ಬಳಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಫಲ್ಗುಣಿ ನದಿ ಈಗ ಎಂಟು ಗ್ರಾಮ ಪಂಚಾಯತ್ ಳ 13 ಗ್ರಾ ಹಾಗೂ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದನಗರ ಪ್ರದೇಶದವರಿಗೆ ಜೀವನದಿಯಾಗಿದೆ.ಇದರಿಂದಾಗಿ ಈ ಭಾಗದ ಜನರ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗಿದೆ.
ಮಳವೂರು, ಬಜಪೆ, ಪೆರ್ಮುದೆ, ಎಕ್ಕಾರು, ಸೂರಿಂಜೆ, ಬಾಳ, ಜೋಕಟ್ಟೆ, ಮೂಡು ಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ 13 ಗ್ರಾಮ ಹಾಗೂ ಕಂದಾವರ ಗ್ರಾಮದ ಸೌಹಾರ್ದ ನಗರದ ಒಟ್ಟು 76 ಸಾವಿರ ಜನರು ಈಗ ಇದೇ ನೀರನ್ನು ಅವಲಂಭಿಸಿದ್ದಾರೆ.
ದಿನವೊಂದಕ್ಕೆ 5ಎಂಎಲ್‌ಡಿ (50 ಲಕ್ಷ ಲೀಟರ್) ನೀರು ಈ ವೆಂಟೆಡ್ ಡ್ಯಾಂನಿಂದ 120 ಅಶ್ವಶಕ್ತಿವುಳ್ಳ ಪಂಪ್‌ನಿಂದ ಸರಬರಾಜು ಮಾಡಲಾಗುತ್ತದೆ. ಈ ಪಂಪ್ ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಚಾಲನೆಯಲ್ಲಿರುತ್ತದೆ.
ಹೆಚ್ಚಿನ ಗ್ರಾ.ಪಂ.ಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿ ಯನ್ನೇ ಆಧರಿಸಿದ್ದವು.ಈ ಬಾರಿ ಅಂತರ್ಜಲ ಕುಸಿತ ದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಈ ಪ್ರದೇಶಗಳಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಾಗಿದೆ. ಹೊಸ ಕೊಳವೆ ಬಾವಿಗಳನ್ನು 600 ರಿಂದ 700 ಅಡಿಗಳಷ್ಟು ಕೊರೆಯ ಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮಳವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು,ಮೂರರಲ್ಲಿ ನೀರು ಕಡಿಮೆಯಾಗಿದೆ. ಕರಂಬಾರು ಅಂಬೇ ಡ್ಕರ್ ನಗರ, ಪೊರ್ಕೋಡಿ, ಕೊಪ್ಪಳ, ಅಂತೋನಿಕಟ್ಟೆ,ಅಡ್ಮಗುಡ್ಡೆ,ಕರಂಬಾರು ಪ್ರದೇಶಗಳಿಗೆ ಮಳವೂರು ವೆಂಟೆಡ್ ಡ್ಯಾಂ ನ ನೀರು ಸರಬರಾಜು ಮಾಡಲಾಗುತ್ತದೆ.
7 ಓವರ್ ಹೆಡ್ ಟ್ಯಾಂಕ್
ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 12 ಕೊಳವೆ ಬಾವಿಗಳಿದ್ದು, 7 ಓವರ್ ಹೆಡ್ ಟ್ಯಾಂಕ್ ಗಳಿವೆ. 1 ಸರಕಾರಿ ಬಾವಿ, 9 ಹ್ಯಾಂಡ್ ಕೊಳವೆ ಬಾವಿಗಳಿವೆ. ಪೆರ್ಮುದೆ ಪೇಟೆ, ನಿಡ್ಡೇಲ್, ಭ್ರಟಕೆರೆ, ಪೆರ್ಮುದೆ ಪದವು, ಮೆಣYಲ್, ಕುತ್ತೆತ್ತೂರು, ಮೆಣಸು ಕಾಡು, ಅದರ್ಶನಗರಕ್ಕೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ.
ಎಕ್ಕಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು, ಇದರಲ್ಲಿ ಎರಡು ಉಪಯೋಗವಾಗುತ್ತಿಲ್ಲ. 2 ತೆರೆದ ಬಾವಿ,6 ಓವರ್ ಹೆಡ್ ಟ್ಯಾಂಕ್‌ನಲ್ಲಿ 5 ಉಪ ಯೋಗವಾಗುತ್ತಿದೆ.ತೆಂಕ ಎಕ್ಕಾರು ಹೆಚ್ಚಿನ ಪ್ರದೇಶ ಹಾಗೂ ಬಡಗ ಎಕ್ಕಾರಿನ ಕೆಲವು ಪ್ರದೇಶಗಳಲ್ಲಿ ಮಳವೂರು ವೆಂಟೆಡ್ ಡ್ಯಾಂ ನೀರೇ ಆಶ್ರಯವಾಗಿದೆ.
11 ಕೊಳವೆ ಬಾವಿ
ಜೋಕಟ್ಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ 11 ಕೊಳವೆ ಬಾವಿಗಳಿದ್ದು,3 ಕೊಳವೆ ಬಾವಿ ಗಳಲ್ಲಿ ನೀರು ಕಡಿಮೆಯಾಗಿದೆ. 5 ಓವರ್ ಹೆಡ್ ಟ್ಯಾಂಕ್‌ಗಳಿವೆ. ಎಂ.ಪಿ. ರೋಡ್,ಅರಿಕೆರೆ,ಪಂಚಾಯತ ಗುಡ್ಡೆ, ಬೊಟ್ಟು ಮನೆ,ನಡುಮನೆ,ಸಿಡಿಗುರಿ,ಮೈಂದ ಗುರಿ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ.
ಬಾಳ ಗ್ರಾ.ಪಂ.ವ್ಯಾಪ್ತಿಯಲ್ಲಿ 9 ಕೊಳವೆ ಬಾವಿಗಳಿದ್ದು, 2ರಲ್ಲಿ ನೀರು ಕಡಿಮೆಯಾಗಿದೆ.3 ತೆರೆದ ಬಾವಿ ಇದೆ. 4 ಓವರ್ ಹೆಡ್ ಟ್ಯಾಂಕ್‌ಗಳಿವೆ. ಮಂಗಳಪೇಟೆ ಹೊಟ್ಟೆ ಕಾಯರ್, ಬಾಳ ಪದವು, ಕಳವಾರು ಅಶ್ರಯ ಕಾಲನಿ, ಕುರ್ಸು ಗುಡ್ಡೆ ಕಾಪಿಕಾಡು ಗುಡ್ಡೆ ಪ್ರದೇಶಗಳಿಗೆ ಮಳ ವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ.
ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕೊಳವೆ ಬಾವಿ, 3 ತೆರೆದ ಬಾವಿಗಳಿವೆ. ಒಟ್ಟು 6 ಓವರ್ ಹೆಡ್ ಟ್ಯಾಂಕ್‌ಗಳಿವೆ. ಶಿವನಗರ ಹಾಗೂ ಮಹಾದೇವಿ ಮಂದಿರದ ಪ್ರದೇಶಗಳಿಗೆ ಮಳವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ.
ಸೂರಿಂಜೆ ಗ್ರಾ.ಪಂ.ನಲ್ಲಿ ಕುಡಿಯುವ ನೀರಿಗಾಗಿ 2 ಕೊಳವೆ ಬಾವಿ. 3 ತೆರೆದ ಬಾವಿ,4 ಓವರ್ ಹೆಡ್ ಟ್ಯಾಂಕ್‌ಗಳಿವೆ. ಸೂರಿಂಜೆ, ಕೋಟೆ ಹಾಗೂ ದೇಲಂತ ಬೆಟ್ಟು ಪ್ರದೇಶಗಳಿಗೆ ಹಾಗೂ ಕಂದಾವರ ಗ್ರಾ.ಪಂ.ನ ಸೌಹಾರ್ದನಗರ ಪ್ರದೇಶಗಳಿಗೆ ಮಳವೂರು ವೆಂಟೆಡ್ ಡ್ಯಾಂ ನೀರು ಸರಬರಾಜು ಆಗುತ್ತಿದೆ.
ಶುದ್ಧ ನೀರು
ಮಳವೂರು ವೆಂಟೆಡ್ ಡ್ಯಾಂ ನೀರು ಸರಬರಾಜಿನಿಂದಾಗಿ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯ ಮೂಲಕ ಇತರೆಡೆ ಕಾಣಿಸಿದಷ್ಟು ಕೊಳವೆ ಬಾವಿ, ಬಾವಿಗಳಲ್ಲಿ ನೀರು ಕಡಿಮೆಯಾಗಿಲ್ಲ. ಕೊಳವೆ ಬಾವಿಗಿಂತ ಶುದ್ಧ ನೀರು ಈ ಪ್ರದೇಶಗಳಿಗೆ ಸಿಕ್ಕಿದೆ.ಒಟ್ಟಿನಲ್ಲಿ ಈ ಪ್ರದೇಶಗಳಿಗೆ ಪಲ್ಗುಣಿ ನದಿ ಜೀವನದಿಯಾಗಿದೆ.
ನೀರು ಪೋಲಾಗದಂತೆ ಸೂಚನೆ
ಬಜಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ 35 ಕೊಳವೆ ಬಾವಿಗಳಲ್ಲಿದ್ದು, 5ರಲ್ಲಿ ನೀರು ಕಡಿಮೆಯಾಗಿದೆ. 10 ಓವರ್ ಹೆಡ್ ಟ್ಯಾಂಕ್‌ಗಳಿದ್ದು, ಇಲ್ಲಿ 2 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯತ್ 6 ಪಂಪ್ ಅಪರೇಟರ್‌ಗಳಿಗೆ ನೀರು ಪೋಲಾಗದಂತೆ ನೋಡಿ ಕೊಳ್ಳಲು ಸೂಚಿಸಿದೆ.
ನೀರಿನ ಬಳಕೆ ಕಡಿಮೆ
ಮಳವೂರು ವೆಂಟೆಡ್ ಡ್ಯಾಂ ನಿರ್ಮಾಣದ ಬಳಿಕ ಈ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಹಿಂದೆ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿತ್ತು. ಆದರೆ ಡ್ಯಾಂ ನಿರ್ಮಾಣದ ಬಳಿಕ ನೀರಿನ ಸದ್ಬಳಕೆಯಾಗುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳ ನೀರಿನ ಬಳಕೆಯೂ ಕಡಿಮೆಯಾಗಿದೆ.
ನೀರಿನ ಸಮಸ್ಯೆ ಇಲ್ಲ
ಮಳವೂರು ವೆಂಟೆಡ್ ಡ್ಯಾಂನ ನೀರು ಇಲ್ಲದೇ ಇರುತ್ತಿದ್ದರೆ ಈ ಬಾರಿ ಜನವರಿ – ಫೆಬ್ರವರಿಯಲ್ಲೇ ನೀರಿನ ಸಮಸ್ಯೆ ಬರು ತ್ತಿತ್ತು. ಈ ಭಾಗದಲ್ಲಿ ಈಗ 450 ಅಡಿ ಆಳವಿರುವ ಕೊಳವೆ ಬಾವಿಗಳು ಮಾತ್ರ ಉಪಯೋಗವಾಗುತ್ತಿದೆ.ಉಳಿದವು ನೀರಿಲ್ಲದೆ ಬತ್ತಿ ಹೋಗಿವೆ. ಮಳವೂರು ಡ್ಯಾಂನ ನೀರು ನಿರಂತರವಾಗಿದ್ದು ಹೆಚ್ಚು ಶುದ್ಧವಾಗಿದೆ.ಗ್ರಾ.ಪಂ.ನ ಹೆಚ್ಚಿನ ಭಾಗಗಳಿಗೆ ಸರಬರಾಜಾಗುತ್ತಿದೆ.ಕೆಲವೆಡೆ ಪೈಪ್‌ಲೈನ್‌ಗಳಾಗದೆ ಇರುವುದರಿಂದ ಕೊಳವೆ ಬಾವಿ ನೀರು ಸರಬರಾಜು ಮಾಡಲಾಗುತ್ತದೆ.ಇದರಿಂದ ಈ ಭಾಗದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಈ ಬಾರಿ ಕಾಣಿಸಿಕೊಂಡಿಲ್ಲ.
– ಸುರೇಶ್ ಶೆಟ್ಟಿ,
ಅಧ್ಯಕ್ಷರು,ಎಕ್ಕಾರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.