ಫಲ್ಗುಣಿ ನದಿ ಸೇತುವೆ ದಾಟಲು ತಾಸುಗಟ್ಟಲೆ ಕಾಯುವ ದುಃಸ್ಥಿತಿ
Team Udayavani, Sep 15, 2021, 3:30 AM IST
ಕೂಳೂರು: ಹೆದ್ದಾರಿ 66ರ ಸುರತ್ಕಲ್ -ಕೊಟ್ಟಾರ ಚೌಕಿ ವರೆಗೆ ಸಂಚರಿಸುವುದೆಂದರೆ ಸಾಹಸಮಯ ಸವಾರಿ ಎಂದೇ ಹೇಳಬಹುದು. ಡಾಮರು ಕಿತ್ತು ಹೋಗಿ ಕೆರೆಯಂತಾಗಿರುವ ತಿರುವು ರಸ್ತೆಗಳು, ಉಪಯೋಗಕ್ಕೆ ಬಾರದ ಸರ್ವಿಸ್ ರಸ್ತೆಗಳು. ಇದರ ನಡುವೆ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೆದ್ದಾರಿ 66ರ ಕೂಳೂರು ಮೇಲ್ಸೇತುವೆ ಬಳಿ ಬೃಹತ್ ಹೊಂಡಗಳಾಗಿದ್ದು, ನಿತ್ಯ ಟ್ರಾಫಿಕ್ ಜಾಂ ಆಗುತ್ತಿದೆ. ಇದರಿಂದ ಜನರಿಗೆ ಕಷ್ಟಕರ ಸಂಚಾರ ಪರಿಸ್ಥಿತಿ ಉಂಟಾಗಿದೆ.
ನದಿ ದಾಟಲು ಪರ್ಯಾಯ ವ್ಯವಸ್ಥೆಯಿಲ್ಲದೆ ಸೇತುವೆಯ ಇಕ್ಕೆಲಗಳಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಒಂದು ತಿಂಗಳಿನಿಂದ ಸೇತುವೆ ಇಕ್ಕೆಲಗಳಲ್ಲೂ ಡಾಮರು ಕಿತ್ತುಹೋಗಿದ್ದು, ಮಂಗಳವಾರ ಮುಂಜಾನೆಯಿಂದಲೇ ಸುರತ್ಕಲ್ – ಉಡುಪಿ ರಸ್ತೆಯಲ್ಲಿ ಕಿ.ಮೀ. ಗಟ್ಟಲೆ ವಾಹನ ಕಂಡು ಬಂದರೆ, ಉಡುಪಿ – ಮಂಗಳೂರು ರಸ್ತೆಯಲ್ಲಿ ಎಂಸಿಎಫ್ ವರೆಗೆ ಸಾಲು ನಿಲ್ಲುವಂತಾಗಿದೆ. ಘನ ವಾಹನಗಳು ಓಡಾಡುವ ಸಂದರ್ಭ ಚಕ್ರ ಗುಂಡಿಗೆ ಬಿದ್ದರೆ ಅಕ್ಸಿಲ್ ಮುರಿಯುವ ಭೀತಿಯಿಂದ ಲಾರಿ, ಟ್ರಕ್ ಚಾಲಕರು ನಿಧಾನ ಗತಿಯಲ್ಲಿ ವಾಹನ ಚಲಾಯಿಸುವಂತಾಗಿದೆ.
ತುರ್ತು ದುರಸ್ತಿಗೆ ಹೆದ್ದಾರಿ ಇಲಾಖೆ ಹಾಕಿದ್ದು ಜಲ್ಲಿ ಹುಡಿ. ಆದರೆ ನಿರಂತರವಾಗಿ ಸುರಿಯುವ ಮಳೆಗೆ ಜಲ್ಲಿ ಹುಡಿ ಕೊಚ್ಚಿ ಹೋಗಿದೆ.
ನಿತ್ಯ ಟ್ರಾಫಿಕ್ ಜಾಂನಿಂದ ಆ್ಯಂಬುಲೆನ್ಸ್ ಒಡಾಟ, ಕಚೇರಿಗೆ ತೆರಳುವವರಿಗೆ, ಕ್ಲಿನಿಕ್‌ಗೆ ಬರುವವರಿಗೆ ದಾಟಲು ಸಾಧ್ಯವಾಗುತ್ತಿಲ್ಲ. ಈ ಹೊಂಡಾ ಗುಂಡಿಯಿಂದ ದ್ವಿಚಕ್ರ ಸವಾರರು ಅಪಘಾತಕ್ಕೀಡಾಗಿ ಅಂಗ ಊನವಾದ ಬಗ್ಗೆಯೂ ವರದಿಗಳಾಗಿವೆ.
ಸ್ಪಂದನೆ ದೊರಕಿಲ್ಲ:
ಹೆದ್ದಾರಿ ಇಲಾಖೆಗೆ ಮಂಗಳೂರು ಉತ್ತರ ಸಂಚಾರಿ ಠಾಣೆ ವತಿಯಿಂದ ಪತ್ರ ಬರೆದು ಹೆದ್ದಾರಿ, ಸರ್ವಿಸ್ ರಸ್ತೆ ದುರಸ್ತಿ ಮಾಡುವಂತೆ ಕೇಳಿಕೊಳ್ಳಲಾಗಿದ್ದರೂ ಇದುವರೆಗೂ ಸ್ಪಂದನೆ ದೊರಕಿಲ್ಲ. ಜೇಸಿಬಿ ಸಹಿತ ಸೌಲಭ್ಯಗಳಿಲ್ಲ ಎಂಬ ಉತ್ತರ ಸಿಕ್ಕಿದೆ. ಸರ್ವಿಸ್ ರಸ್ತೆ ದುರಸ್ತಿ ಎನ್‌ಎಂಪಿಟಿ ಮಾಡಬೇಕು ಎಂಬ ಸಿದ್ಧ ಉತ್ತರ ಪ್ರತೀ ವರ್ಷವೂ ಸಿಗುತ್ತದೆ.
ಏನು ಮಾಡಬಹುದು ?:
ತಾತ್ಕಾಲಿಕ ದುರಸ್ತಿಗೆ ರೆಡಿ ಕಾಂಕ್ರೀಟ್ ಮಿಕ್ಸ್ ಸದ್ಯ ಪರಿಹಾರ. ರಾತ್ರಿ ಸಮಯ ವಾಹನ ಓಡಾಟ ಕಡಿಮೆಯಿದ್ದಾಗ ಹಾಕಿದಲ್ಲಿ ಮೂರ್‍ನಾಲ್ಕು ಗಂಟೆಗಳಲ್ಲಿ ಕ್ಯೂರಿಂಗ್ ಆಗುತ್ತದೆ. ಹೆದ್ದಾರಿ ಇಲಾಖೆ ಸಾಂಪ್ರದಾಯಿಕ ದುರಸ್ತಿ ನೆಚ್ಚಿಕೊಳ್ಳುವ ಬದಲು ಮಳೆಗಾಲದಲ್ಲಿ ತುರ್ತು ದುರಸ್ತಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ ಗುರುಚಂದ್ರ ಕೂಳೂರು ಅವರ ಆಗ್ರಹ.
ಕೂಳೂರು ಸೇತುವೆ ಎರಡೂ ಕಡೆಗಳಲ್ಲಿ ಹೊಂಡ ಬಿದ್ದಿದೆ. ವಾಹನಗಳು ಹಾಳಾಗುವ ಭೀತಿಯಿಂದ ನಿಧಾನವಾಗಿ ಸಂಚರಿಸುವ ಕಾರಣ ಸೇತುವೆ ಬಳಿ ವಾಹನ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಉಡುಪಿ ಮಂಗಳೂರು ಹೆದ್ದಾರಿ ಸೇತುವೆ ಬಳಿ ತಡೆಗೋಡೆ ಕುಸಿದು ಬಿದ್ದು ಅಪಾಯದ ಸ್ಥಿತಿಯಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ಅಪಾಯವಾದರೂ ಹೆದ್ದಾರಿ ಇಲಾಖೆ ಜವಾಬ್ದಾರಿ ಹೊರಬೇಕು. ಮಳೆಗಾಲದಲ್ಲಿ ತುರ್ತಾಗಿ ಹಾಕಲು ಆಧುನಿಕ ವ್ಯವಸ್ಥೆಯಿದ್ದರೂ ಸಬೂಬು ಹೇಳಿ ನಿರ್ಲಕ್ಷ್ಯ ತಾಳುವುದು ಸರಿಯಲ್ಲ. –ನಟರಾಜ್, ಎಸಿಪಿ ಟ್ರಾಫಿಕ್ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.