“ಫಿಲೋ ಪಂಥೊ -2017′ ತುಳು ಜಾನಪದ ಸ್ಪರ್ಧೋತ್ಸವ
Team Udayavani, Feb 22, 2017, 2:31 PM IST
ದರ್ಬೆ : ತುಳು ನಾಡಿನ ಜಾನಪದ ಸಂಸ್ಕೃತಿ ಅತ್ಯಂತ ವೈಶಿಷ್ಟಪೂರ್ಣವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಯುವಜನತೆಯಿಂದ ನಡೆಯಬೇಕು ಎಂದು ಮೂಡಬಿದ್ರಿ ಸಂಪಿಗೆ ಇಗರ್ಜಿಯ ಧರ್ಮಗುರು ವಂ| ಅಪೋಲಿನರಿಸ್ ಕ್ರಾಸ್ತಾ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘವು ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಆಯೋಜಿ ಸಿದ ವಿವಿ ಮಟ್ಟದ ಫಿಲೋ ಪಂಥೊ ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ಜಾಗತೀಕರಣದ ಪ್ರಭಾವಕ್ಕೊಳಗಾಗಿ ನಾವೆಲ್ಲರೂ ವಿದೇಶಿ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿ ದ್ದೇವೆ. ಇಂತಹ ಸನ್ನಿವೇಶದಲ್ಲಿ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಗೌರವ ಭಾವನೆ ಯಿಂದ ಕಂಡು, ನಮ್ಮ ನಡೆ -ನುಡಿಗಳಲ್ಲಿ ಅಳವಡಿಸಿಕೊಳ್ಳುವುದು ಆದ್ಯ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕಲಾ ವಿಭಾಗವು ಇತರ ಎಲ್ಲ ವಿಭಾಗಗಳಿಗಿಂತಲೂ ಶ್ರೇಷ್ಠವಾದುದು. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳು ಬದುಕಿಗೆ ಪೂರಕವಾಗಿದ್ದು, ಕಲಾ ವಿಭಾಗವು ಬದುಕಿಗೆ ಅಗತ್ಯವಿರುವ ಸಂಸ್ಕೃತಿ, ಸಂವಹನ ಮತ್ತು ಆಚರಣೆಗಳನ್ನು ಕಲಿಸಿಕೊಡುವ ವಿಭಾಗವಾಗಿದೆ. ನಾವು ವಿದೇಶಿ ಸಂಸ್ಕೃತಿಯ ಕಡೆಗೆ ಒಲವು ತೋರಿಸುವಾಗ, ಅತ್ಯಂತ ಮೌಲ್ಯಯುತವಾದ ಸ್ವದೇಶಿ ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಂಡು, ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕು ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹ, ತುಳುನಾಡು ಪರಶುರಾಮ ಸೃಷ್ಟಿಸಿದ ನಾಡೆಂಬ ಪ್ರಖ್ಯಾತಿಯನ್ನು ಹೊಂದಿದ್ದು, ಇಲ್ಲಿಯ ಭಾಷೆ, ಜನಜೀವನ, ಧರ್ಮ, ಆಚಾರ ವಿಚಾರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ರಾಷ್ಟ್ರ ಮನ್ನಣೆಯ ಭಾಷೆ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ| ಆಲ್ಫೆÅಡ್ ಜೆ. ಪಿಂಟೋ, ಭತ್ತ ತುಂಬಿದ ಕಳಸದಲ್ಲಿ ಸಿಂಗಾರವನ್ನು ಅರಳಿಸಿ, ಸ್ಪರ್ಧೋತ್ಸವಕ್ಕೆ ಚಾಲನೆ ನೀಡಿದರು. ತುಳು ನಾಡು ವಿವಿಧ ಜಾತಿ ಮತ ಪಂಥಗಳ ಜನರನ್ನು ಒಳಗೊಂಡಿದೆ.
ಇಲ್ಲಿರುವ ಜನರೆಲ್ಲರೂ ಒಂದೇ ತುಳು ಮಾತೆಯ ಮಕ್ಕಳಂತೆ ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದಾರೆ. ನಮ್ಮ ತುಳು ಭಾಷೆ ರಾಷ್ಟ್ರ ಮಟ್ಟದಲ್ಲಿಯೂ ಮನ್ನಣೆ ಪಡೆದಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಸ್ಪಧೋತ್ಸವದ ತೀರ್ಪುಗಾರರಾದ ರಮೇಶ್ ಉಳಯ, ಸಹ ತೀರ್ಪುಗಾರರಾದ ರಮೇಶ್ ಕಲ್ಮಾಡಿ, ಸುಧೀರ್ ಬಾಳೆಪುಣಿ, ತಾರನಾಥ ಸವಣೂರು, ವಿಜಯಾ ಶೆಟ್ಟಿ ಸಾಲೆತ್ತೂರು, ಬಾಲಕೃಷ್ಣ ಪೊರ್ದಾಲ್, ಬಿ. ವಿ. ಸೂರ್ಯನಾರಾಯಣ, ಲಿಂಗಪ್ಪ ಬೆಳ್ಳಾರೆ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ವಿಷ್ಣು ಭಟ್ ಉಪಸ್ಥಿತರಿದ್ದರು.
ನಿಶಾ ಮತ್ತು ತಂಡದವರು ತುಳು ನಾಡ ಪೊರ್ಲು ತೂಲೆ, ಮಲ್ಲಿಗೆ ಪೂತ ಮಾಲೆ ಎಂಬ ತುಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಸಂಯೋಜಕ ರಾಕೇಶ್ ರಾವ್ ಪಿ.ಜಿ. ಸ್ವಾಗತಿಸಿ, ಮಾನವಿಕ ಸಂಘದ ಸಂಯೋಜಕ ಪ್ರೊ| ಸುಬೇರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಕಿತ ವಂದಿಸಿದರು.
ವಿದ್ಯಾರ್ಥಿ ಸಹ ಸಂಯೋಜಕಿ ಅಕ್ಷತಾ ಶರ್ಮ ವಿ. ಕಾರ್ಯಕ್ರಮ ನಿರ್ವಹಿಸಿದರು. ಪಾಡªನ, ಕಂಬಳ ಬೋಡು/ ಬೊಡಿc ಕುರಿತು ತುಳು ಚರ್ಚೆ, ಮುಂಡಾಸು ಕಟ್ಟುವುದು, ದಾರ ರಹಿತ ಹೂಮಾಲೆ ಕಟ್ಟುವುದು, ಸ್ಮರಣ ಶಕ್ತಿ, ಸೋಬಾನೆ, ಜಾನಪದ ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳು ನಡೆದವು.”
ನದಿಯಂತಿರಬೇಕು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಪುರಸಭಾ ಅಧ್ಯಕ್ಷೆ ಪಿ. ಲತಾ ಗಣೇಶ್ ರಾವ್ ಮಾತನಾಡಿ, ನಾಡಿನ ಅಪರೂಪದ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ. ಅಮೂಲ್ಯವಾದ ಜಾನಪದ ಸಂಸ್ಕೃತಿ ನಿಂತ ನೀರಿನಂತಿರದೆ, ತುಂಬಿ ಹರಿಯುವ ನದಿಯಂತಿರಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.